ಯಂಕ, ನಾಣಿ, ಸೀನ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ: ಪರೋಕ್ಷವಾಗಿ ಟಾಂಗ್​ ಕೊಟ್ಟ ಯಡಿಯೂರಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2022 | 3:05 PM

ಮುಂದಿನ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಯಂಕ, ನಾಣಿ, ಸೀನ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ: ಪರೋಕ್ಷವಾಗಿ ಟಾಂಗ್​ ಕೊಟ್ಟ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಯಂಕ, ನಾಣಿ, ಸೀನ 2-3 ಜನ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa) ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಅವರು ಮಾತನಾಡಿ, ಇತ್ತೀಚೆಗೆ ನಡೆದ ಸರ್ವೆಯಲ್ಲಿ ಶೇ.70ರಷ್ಟು ಜನ ಮೋದಿ ಪರ ಇದ್ದಾರೆ. ಮತ್ತೆ ನಾವು ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಅಗತ್ಯವಿದೆ. ಕಾಂಗ್ರೆಸ್​ನವರು ಮುಖ್ಯಮಂತ್ರಿ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. 3 ತಲೆಮಾರಿಗಾಗುಷ್ಟು ಆಸ್ತಿ ಮಾಡಿದ್ದೇವೆಂದು ರಮೇಶ್ ಕುಮಾರ್ ಹೇಳಿದ್ದಾರೆ. ಇದರಿಂದ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದರು ಎಂಬುದು ಗೊತ್ತಾಗಿದೆ. 2 ಸ್ಥಾನ ಕೂಡ ಇಲ್ಲದ ಸಮಯದಲ್ಲಿ ಬಿಜೆಪಿ ಕಟ್ಟುವ ಕೆಲಸ ಮಾಡಿದ್ದೇವೆ. ಇದರ ಪರಿಣಾಮ ಇಂದು ರಾಜ್ಯದಲ್ಲಿ ಬಿಜೆಪಿ ಎದ್ದು ನಿಂತಿದೆ ಎಂದು ಹೇಳಿದರು.

ಯಂಕ, ನಾಣಿ, ಸೀನ ನಾನೇ ಸಿಎಂ ಅನ್ನುತ್ತಿದ್ದಾರೆ

ನಮ್ಮ ಕಾರ್ಯಕರ್ತರು 4 ತಿಂಗಳು ಪರಿಶ್ರಮ ಹಾಕಿದರೆ 5 ವರ್ಷಗಳ ಕಾಲ ಕರ್ನಾಟಕದ ಜನರು ನೆಮ್ಮದಿಯಿಂದ ಇರಬಹುದು. ವಿಪಕ್ಷಗಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಈ ಸಲ ಕಾಂಗ್ರೆಸ್​ ಸೋಲಿಸಿದರೆ ದೇಶದಲ್ಲೇ ಕಾಂಗ್ರೆಸ್ ಧೂಳೀಪಟ ಆಗುತ್ತೆ.
ರಾಜಕಾರಣದಲ್ಲಿ ಎಷ್ಟು ಜಾಗೃತರಾಗಿದ್ದಷ್ಟೂ ಕಡಿಮೆಯೇ. ವಿಪಕ್ಷಗಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಪಕ್ಷದ ಮಹಿಳಾ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ಪ್ರತಿ ಊರಿನಲ್ಲಿ ಕನಿಷ್ಠ ನೂರ ಇಪ್ಪತ್ತು ಯುವಕರಿರುವ ತಂಡ ರೆಡಿಯಾಗಬೇಕು.

ಇದನ್ನೂ ಓದಿ: ಎಂಇಎಸ್​​ ಪುಂಡಾಟ ಇದೇ ಮೊದಲಲ್ಲ; ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಗೊತ್ತಿದೆ -ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಮುಳುಗುತ್ತಿರುವ ಹಡಗು

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾನು ಸಿಎಂ ಆಗಿದ್ದಾಗ 4000 ಹೆಚ್ಚುವರಿ ಕೊಟ್ಟಿದ್ದೇನೆ. ಇದು ಸಣ್ಣ ವಿಷಯ ಅಲ್ಲ.
ಬೊಮ್ಮಾಯಿ‌ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಕಾರಣ ಎಸ್​ಸಿ ಎಸ್​ಟಿ ಜನ ನಮ್ಮ ಜೊತೆ ಬರುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ಒಂದು ಸಲ ಕಾಂಗ್ರೆಸ್ ಸೋಲಿಸಿದರೆ ದೇಶದಲ್ಲಿ ಕಾಂಗ್ರೆಸ್ ಧೂಳೀಪಟ ಆಗುತ್ತದೆ. ಇಲ್ಲಿ ಸ್ವಲ್ಪ ಮಾತ್ರ ಕಾಂಗ್ರೆಸ್ ಉಸಿರಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಮಾಜಿ, ಹಾಲಿ ಸಿಎಂಗಳ ನಡುವೆ ಮುನಿಸು ವಿಚಾರ: ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಕಾಂಗ್ರೆಸ್ ವ್ಯಂಗ್ಯ

ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಯಡಿಯೂರಪ್ಪ ಶ್ಲಾಘಿಸಿದ ಬಿ.ಎಲ್. ಸಂತೋಷ್

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಇದೆ. ಇದನ್ನು ಸದನದಲ್ಲಿ ವಿಪಕ್ಷಗಳು ಕೂಡಾ ಒಪ್ಪಿಕೊಂಡಿವೆ. ವೇದಿಕೆ ಮೇಲೆ ಆತ್ಮೀಯವಾಗಿ ಮಾತನಾಡಿದ ಸಂತೋಷ್ ಮತ್ತು ಯಡಿಯೂರಪ್ಪ.

Published On - 3:04 pm, Sun, 18 December 22