ಬೆಂಗಳೂರು: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿ ತನ್ನ ಮೊದಲ ಪ್ರಯತ್ನದಲ್ಲೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಸಚಿನ್ ಬಂಧಿತ ಆರೋಪಿ. ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿಕೊಂಡಿದ್ದ ಸಚಿನ್, ಮಲೇಷ್ಯಾದಲ್ಲಿ ಇಂಟರ್ನ್ ಶಿಫ್ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಆಕ್ಸಿಡೆಂಟ್ನಲ್ಲಿ ಆರೋಪಿ ಸಚಿನ್ ಕಾಲು ಮುರಿದಿತ್ತು. ಆಕ್ಸಿಡೆಂಟ್ ಆದ ಬಳಿಕ ಇನ್ಶೂರೆನ್ಸ್ನಿಂದ ಒಂದಿಷ್ಟು ಹಣ ಬಂದಿತ್ತು. ಅದೇ ಹಣವನ್ನು ಗಾಂಜಾಗೆ ಇನ್ವೆಸ್ಟ್ ಮಾಡಿ ವಿಶಾಖಪಟ್ಟಣಂನಿಂದ ಭಾರಿ ಮೊತ್ತದ ಗಾಂಜಾ ತಂದಿದ್ದ.
ಆಟೋ ಚಾಲಕ ಆನಂದ್ ಎಂಬುವವರ ಜೊತೆ ಸೇರಿ ಬರೊಬ್ಬರಿ 101 ಕೆಜಿ ಗಾಂಜಾವನ್ನು ಆರೋಪಿ ಸಚಿನ್ ತರಿಸಿದ್ದ. ಬಳಿಕ ನಂದಿ ಬೆಟ್ಟ ರಸ್ತೆಯಲ್ಲಿ ತೆರಳುವಾಗ ಐದು ಕೆಜಿ ಗಾಂಜಾ ಸಮೇತ ಪೊಲೀಸ ಬಳಿ ಲಾಕ್ ಆಗಿದ್ದಾನೆ. ಸದ್ಯ ಹೆಚ್ಚಿನ ವಿಚಾರಣೆ ನಡೆಸಿದಾಗ ಉಳಿದ ಗಾಂಜಾ ಮೂಟೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ದೇವನಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿ ಸಚಿನ್ನನ್ನು ಬಂಧಿಸಲಾಗಿದೆ.
ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಸಿಬ್ಬಂದಿಯಿಂದ ಕಳ್ಳತನ
ಇನ್ನು ಮತ್ತೊಂದು ಕಡೆ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಸಿಬ್ಬಂದಿಯಿಂದಲೇ ಕಳ್ಳತನ ನಡೆದಿದೆ. ರಾತ್ರೋರಾತ್ರಿ ಹೋಟೆಲ್‌ನಲ್ಲಿದ್ದ ಹಣ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆನೇಕಲ್ ತಾಲೂಕಿನ ಹೆಬ್ಬಗೋಡಿ ಸಮೀಪದ ಶ್ರೀನಿಧಿ ಉಪಹಾರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಎಂಬ ವ್ಯಕ್ತಿ ರಾತ್ರೋರಾತ್ರಿ ಹೋಟೆಲ್‌ನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾನೆ. ಈ ಹಿಂದೆ ಎರಡು ಮೊಬೈಲ್ಗಳನ್ನು ಕೂಡ ಈತ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಎಕ್ಸೆಲ್ ಬ್ಲೇಡ್ನಿಂದ ಮುಂಭಾಗದ ಬೀಗ ಮುರಿದು ಒಳನುಗ್ಗಿದ ಕಳ್ಳ ಹೋಟೆಲ್ನ ಮೊದಲನೆಯ ಮಹಡಿಯಲ್ಲಿ ಸಿಬ್ಬಂದಿ ಮಲಗಿದ್ದನ್ನು ಗಮನಿಸಿ ಕೊಠಡಿಗೆ ಬೀಗ ಹಾಕಿ ನಂತರ ಹೋಟೆಲೊಳಗೆ ಟೇಬಲ್ನಲಿದ್ದ ಹಣ ಲೂಟಿ ಮಾಡಿದ್ದಾನೆ. ಚಿಲ್ಲರೆ ಸೇರಿ ಒಂದು ವರೆ ಲಕ್ಷ ರೂ ಹಣ ಕಳ್ಳತನ ಮಾಡಿದ್ದಾನೆ. ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ ವಂಚನೆ; ಬೆಂಗಳೂರಿನಲ್ಲಿ ಆರೋಪಿ ಸೆರೆ
Published On - 12:41 pm, Wed, 1 September 21