ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು: ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹ
ಪ್ರತ್ಯೇಕ ಧರ್ಮ ಆದರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ. ಎಲ್ಲರೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಬೆಂಗಳೂರು: ಪಂಚಪೀಠದವರು ಎಲ್ಲರೂ ಸೇರಿ ಬಸವ ಧರ್ಮ ಆಗಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಆದರೆ ನಮಗೆ ಸೌಲಭ್ಯ ಸಿಗುತ್ತದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಪ್ರತ್ಯೇಕ ಬಸವ ಧರ್ಮ ಆದರೆ ಮುಸ್ಲಿಂ, ಜೈನ ಮಾದರಿ ಅಲ್ಪಸಂಖ್ಯಾತ ಸ್ಥಾನಮಾನ ಸಿಗುತ್ತದೆ. ವೀರಶೈವರನ್ನು ಸೇರಿಸಿಕೊಂಡು ನಾವು ಮುಂದುವರಿಯುತ್ತೇವೆ. ಚುನಾವಣಾ ಸೋಲಿಗೆ ಪ್ರತ್ಯೇಕ ಲಿಂಗಾಯತ ಧರ್ಮ ಕಾರಣವಲ್ಲ. ಪಂಚಮಸಾಲಿ ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆ. ಪ್ರತ್ಯೇಕ ಧರ್ಮ ಆದರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ. ಎಲ್ಲರೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಪಂಚಮಸಾಲಿ ಸಮಾಜದ 3ನೇ ಪೀಠದ ಕುರಿತು ಸ್ಫೋಟಕ ಹೇಳಿಕೆ ನೀಡಿದ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ ಬಾಗಲಕೋಟೆ: ಮುಂದಿನ ದಿನಮಾನಗಳಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ ನಿರ್ಮಾಣವಾಗಬಹುದು. ಈಗಾಗಲೇ ಒಂಬತ್ತು ಜಿಲ್ಲೆಗಳಲ್ಲಿ ಸಂಘಟನೆ ಆರಂಭವಾಗಿದೆ. ಜನರ ಒತ್ತಡ ಬಂದರೆ ಪರ್ಯಾಯ ಪೀಠ ರಚನೆ ಖಚಿತ. ಮುಂದಿನ ದಿನಮಾನಗಳಲ್ಲಿ ಏನು ಬೇಕಾದ್ರೂ ಆಗಬಹುದು ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಸಂಗನ ಬಸವಶ್ರೀ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಪಂಚಮಸಾಲಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ನಡೆಸಿದ ಸಭೆಯ ನಂತರ ಅವರು ಈ ಸ್ಫೋಟಕ ಹೇಳಿಕೆ ನೀಡಿದರು.
ಪಂಚಮಸಾಲಿ ಸಮಾಜದ ಮನಗೂಳಿಯ ಮೊದಲನೇ ಶ್ರೀಗಳಾದ ಮಹಾಂತ ಶಿವಾಚಾರ್ಯರು ಪಂಚಮಸಾಲಿ ಸಮಾಜದ ಐದುಪೀಠಗಳಾದ್ರೆ ತಪ್ಪೇನಿದೆ ಅಂತಿದ್ದರು.ಈಗಾಗಲೇ ಕೂಡಲಸಂಗನದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹಾಗೂ ಹರಿಹರಪೀಠದ ಶ್ರೀಗಳು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದ ಸಂಗನ ಬಸವ ಸ್ವಾಮೀಜಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ:
30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ
ಅಗತ್ಯವಿದ್ದಾಗ ಅಫ್ಘಾನಿಸ್ತಾನದಲ್ಲಿ ನಾವು ಡ್ರೋನ್ ದಾಳಿ ಮುಂದುವರೆಸುತ್ತೇವೆ; ಅಮೆರಿಕ ಎಚ್ಚರಿಕೆ
(Former Minister MB Patel urges separate Lingayat Religion in Bengaluru)
Published On - 4:13 pm, Wed, 1 September 21