ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಆರೋಪಿ ಲಾಕ್​

ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಂಧಿಸಲಾಗಿದೆ. ಲಗೇಜ್​ ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಪ್ರಾಣಿಗಳಿರುವುದು ಗೊತ್ತಾಗಿದ್ದು, ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಖಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬ್ಯಾಂಕಾಕ್​ನಿಂದ ಈ ಪ್ರಾಣಿಗಳನ್ನ ತಂದಿರೋದು ವಿಚಾರಣೆ ವೇಳೆ ಗೊತ್ತಾಗಿದೆ.

ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಆರೋಪಿ ಲಾಕ್​
ವಶಕ್ಕೆ ಪಡೆದಿರುವ ಪ್ರಾಣಿಗಳು
Edited By:

Updated on: Oct 24, 2025 | 7:03 PM

ಬೆಂಗಳೂರು/ ಕಾರವಾರ, ಅಕ್ಟೋಬರ್​ 24: ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರಿನ (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಏರ್​ಪೋರ್ಟ್​ನ ಕಸ್ಟಮ್ಸ್ ಅಧಿಕಾರಿಗಳು 27 ವರ್ಷದ ಪ್ರಯಾಣಿಕನನ್ನು ಅರೆಸ್ಟ್​ ಮಾಡಿದ್ದು, ಲಗೇಜ್​ ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಪ್ರಾಣಿಗಳಿರುವುದು ಗೊತ್ತಾಗಿದೆ. ವನ್ಯಜೀವಿ ಸಂರಕ್ಷಣಾ ಖಾಯ್ದೆಯಡಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಯಾಣಿಕನನ್ನು ಹೆಚ್ಚಿನ ವಿಚಾರಣಗೆ ಒಳಪಡಿಸಲಾಗಿದೆ.

ಎಕ್ಸ್​ ಖಾತೆಯಲ್ಲಿ ಮಾಹಿತಿ

ಅಕ್ರಮವಾಗಿ ಪ್ರಾಣಿ ಸಾಗಾಟ ಮಾಡಿದರೆ ಭಾರತದ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಇದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತೆ. ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ ಭಾಗಿಯಾಗುವ ಆರೋಪಿಗಳಿಗೆ 3-7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತೆ. ಕೆಲ ಪ್ರಕರಣಗಳಲ್ಲಿ ಪ್ರಕರಣದ ತೀವ್ರತೆಗೆ ಅನುಸಾರ ದಂಡವನ್ನೂ ಹಾಕಲಾಗುತ್ತೆ. ಅಪರೂಪದ ಅಥವಾ ಸಂರಕ್ಷಿತ ಪ್ರಾಣಿಗಳ ಹತ್ಯೆ/ಸಾಗಾಟಕ್ಕೆ ಕಠೋರ ಶಿಕ್ಷೆ ಇರಲಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಬಸ್​ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್​; ಡಿಎಲ್ ರದ್ದಿಗೂ ಶಿಫಾರಸು

ಮಾವಿನ ಮರ ಬಿದ್ದು ಹಸು ಸಾವು

ಗಾಳಿ, ಮಳೆಯಿಂದ ಮಾವಿನಮರ ಉರುಳಿಬಿದ್ದ ಪರಿಣಾಮ ಒಂದು ಹಸು ಸಾವನ್ನಪ್ಪಿ ಮತ್ತೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಬಿಣಗಾ ಬಳಿಯ ಕದಂಬ ನೌಕಾನೆಲೆಯ ದ್ವಾರದಲ್ಲಿ ನಡೆದಿದೆ. ಮರಬಿದ್ದ ಪರಿಣಾಮ 7 ಬೈಕ್​ಗಳು ಜಖಂ ಆಗಿದ್ದು, ನೌಕಪಡೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಕಾರ್ಯ ನಡೆಸಿದ್ದಾರೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:56 pm, Fri, 24 October 25