AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ! ಈ ಮಾರ್ಗದ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

ಸಕಲೇಶಪುರ ಟು ಸುಬ್ರಹ್ಮಣ್ಯ ಮಾರ್ಗದಲ್ಲಿ ನಡೆಯುತ್ತಿರುವ ವಿದ್ಯುದ್ದೀಕರಣ ಕಾರ್ಯದಿಂದಾಗಿ, ನೈಋತ್ಯ ರೈಲ್ವೆ ನವೆಂಬರ್ 2 ರಿಂದ ಡಿಸೆಂಬರ್ 15 ರವರೆಗೆ ಪ್ರತಿದಿನ 4 ಗಂಟೆಗಳ ಕಾಲ ಲೈನ್ ಬ್ಲಾಕ್ ಘೋಷಿಸಿದೆ. ಇದರಿಂದ ಯಶವಂತಪುರ-ಮಂಗಳೂರು, ಕಾರವಾರ ಸೇರಿ ಹಲವು ಪ್ರಮುಖ ರೈಲು ಸೇವೆಗಳ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಯಾಣಿಕರ ಗಮನಕ್ಕೆ! ಈ ಮಾರ್ಗದ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 24, 2025 | 6:18 PM

Share

ಹುಬ್ಬಳ್ಳಿ, ಅಕ್ಟೋಬರ್​ 24: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ, ನೈಋತ್ಯ ರೈಲ್ವೆ (South Western Railway) ನವೆಂಬರ್ 2 ರಿಂದ ಡಿಸೆಂಬರ್ 15 ರ ವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ. ಈ ಕಾರಣದಿಂದಾಗಿ ಕೆಲವು ರೈಲು ಸೇವೆಗಳ (train services) ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.

ಯಾವೆಲ್ಲಾ ರೈಲುಗಳ ಅವಧಿ ವಿಸ್ತರಣೆ?

  • ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್​​ಪ್ರೆಸ್ ರೈಲು ಮೊದಲು ನವೆಂಬರ್​​ 01 ರವರೆಗೆ ರದ್ದುಗೊಂಡಿತ್ತು. ಇದೀಗ ನವೆಂಬರ್​​ 08 ರಿಂದ ಡಿಸೆಂಬರ್​ 13ರ ವರೆಗೆ ರದ್ದುಗೊಳ್ಳಲಿದೆ.

ನೈಋತ್ಯ ರೈಲ್ವೆ ಟ್ವೀಟ್​​

  • ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಮೊದಲು ನವೆಂಬರ್​ 02 ರ ವರೆಗೆ ರದ್ದುಗೊಂಡಿತ್ತು. ಇದೀಗ ನವೆಂಬರ್​ 09 ರಿಂದ ಡಿಸೆಂಬರ್​ 14ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16575 ಯಶವಂತಪುರ–ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​​ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್​ 02 ರಿಂದ ಡಿಸೆಂಬರ್​​ 14ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 03 ರಿಂದ ಡಿಸೆಂಬರ್​ 15ರ ವರೆಗೆ ರದ್ದುಗೊಳ್ಳಲಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು

  • ರೈಲು ಸಂಖ್ಯೆ 16515 ಯಶವಂತಪುರ–ಕಾರವಾರ ಟ್ರೈ-ವೀಕ್ಲಿ ಎಕ್ಸ್​​ಪ್ರೆಸ್ ಮೊದಲು ಅಕ್ಟೋಬರ್​ 31 ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 03 ರಿಂದ ಡಿಸೆಂಬರ್​ 15ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​ 01ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 04 ರಿಂದ ಡಿಸೆಂಬರ್​ 16ರ ವರೆಗೆ ರದ್ದುಗೊಳ್ಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ