ಖರ್ಚಿಗೆ ಹಣವಿಲ್ಲವೆಂದು ನ್ಯೂಸ್ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆ ಎಫ್​ಐಆರ್, ಕಾರಣವೇನು?

|

Updated on: Jun 10, 2023 | 7:40 AM

ಖರ್ಚಿಗೆ ಹಣ ಇಲ್ಲ ಎಂದು ಮನೆಯಲ್ಲಿದ್ದ ನ್ಯೂಸ್ ಪೇಪರ್ ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್​ಐಆರ್ ದಾಖಲಿಸಿದ್ದಾನೆ.

ಖರ್ಚಿಗೆ ಹಣವಿಲ್ಲವೆಂದು ನ್ಯೂಸ್ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆ ಎಫ್​ಐಆರ್, ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಫೇಕ್ ಸ್ಕೇಲ್ ದಂಧೆ(Fake Scale Scam) ಮುಂದುವರೆದಿದೆ. ಖರ್ಚಿಗೆ ಹಣವಿಲ್ಲ ಎಂದು ಪೇಪರ್ ಮಾರಲು ಹೋದ ಯುವಕ ಗುಜರಿ ಅಂಗಡಿ ಮೇಲೆಯೇ ಎಫ್​ಐಆರ್ ದಾಖಲಿಸಿದ ಘಟನೆ ನಡೆದಿದೆ. ಪೇಪರ್ ಮಾರ್ಟ್​ಗಳಲ್ಲಿ(ಗುಜರಿ ಅಂಗಡಿ) ಕೂಡ ವಂಚನೆ ನಡೆಯುತ್ತಿವೆ. ಖರ್ಚಿಗೆ ಹಣ ಇಲ್ಲ ಎಂದು ಮನೆಯಲ್ಲಿದ್ದ ನ್ಯೂಸ್ ಪೇಪರ್(News Paper) ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್​ಐಆರ್ ದಾಖಲಿಸಿದ್ದಾನೆ.

ಜೀವನ್, ನಾಗೇಂದ್ರ ಬ್ಲಾಕ್ ಬಳಿ ಇರುವ ಮಾರಮ್ಮ ಪೇಪರ್ ಮಾರ್ಟ್​ಗೆ 8 ಕೆಜಿ ಪೇಪರ್ ಕೊಂಡೊಯ್ದಿದ್ದ. 1 ಕೆಜಿಗೆ 16 ರೂಪಾಯಿ ತೂಗುತ್ತೆ. ಪೇಪರ್ ಸ್ಕೇಲ್​ನಲ್ಲಿ 8‌ ಕೆಜಿಯಷ್ಟು ಪೇಪರ್ ಕೇವಲ 6 ಕೆ.ಜಿ 900 ಗ್ರಾಂ ಎಂದು ತೋರಿಸಿದೆ. ಅದೇ ಬಂಡಲನ್ನು ಮನೆಯ ಬಳಿಯ ಅಂಗಡಿಯೊಂದರಲ್ಲಿ ತೂಕ ಮಾಡಿದಾಗ 8‌ ಕೆ.ಜಿ 700 ಗ್ರಾಂ ಇತ್ತು. ಬಳಿಕ ಜೀವನ್​ಗೆ ಇಲ್ಲಿ ಮೋಸ ಆಗುತ್ತಿರುವುದು ಗೊತ್ತಾಗಿದೆ. ಬಳಿಕ ಮಾರಮ್ಮ ಪೇಪರ್ ಮಾರ್ಟ್​ಗೆ ಹೋದ ಜೀವನ್ ಮತ್ತೆ ತೂಕ ಮಾಡಿಸಿದ್ದಾರೆ. ಆಗ ಅಲ್ಲಿ ಕೆಳ ಭಾಗದಲ್ಲಿ ಮಾತ್ರ ತೂಕ ಮೇಲ್ಭಾಗದಲ್ಲಿ 6ಕೆ.ಜಿ 900 ಗ್ರಾಂ ಬರುತ್ತಿತ್ತು. ಇದನ್ನ ಪ್ರಶ್ನಿಸಿದಕ್ಕೆ, ಇಷ್ಟವಿದ್ದರೆ ಮಾರು ಇಲ್ಲ ಈ ವಿಚಾರ ಯಾರಿಗೂ ಹೇಳಬೇಡ, ಹೇಳಿದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಗುಜರಿ ಅಂಗಡಿಯಲ್ಲಿದ್ದವ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜೀವನ್ ದೂರು ದಾಖಲಿಸಿದ್ದಾರೆ. ದೂರಿನನ್ವಯ Legal metrology act ನಡಿ ಗಿರಿನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ:Mumbai Mira Road murder: ಮನೋಜ್ ಮತ್ತು ಸರಸ್ವತಿಯದ್ದು ಲಿವ್- ಇನ್ ರಿಲೇಷನ್​​ಶಿಪ್​​​ ಅಲ್ಲ, ಅವರು ಗಂಡ ಹೆಂಡತಿ? 

ಬೆಂಗಳೂರಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಬಂಧನ

ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ವಿಳ್ಳುಪುರಂ ನಿವಾಸಿ ಮಣಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 17 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಸಂಜಯನಗರ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದ ಮಣಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೃತ್ಯ ಮುಂದುವರಿಸಿದ್ದ. ತಮಿಳುನಾಡಿನಲ್ಲೂ ಆರೋಪಿ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ವಿಚಾರಣೆ ವೇಳೆ ಆರೋಪಿ ಮಣಿ ಕೃತ್ಯದ ಅಸಲಿಯತ್ತು ಬಿಚ್ಚಿಟ್ಟಿದ್ದಾನೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಮಿಡ್​​ನೈಟ್​ನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್​​ ಆಗುತ್ತಿದ್ದ. ಜಸ್ಟ್ 6 ಗಂಟೆಗಳಲ್ಲಿ ಮಣಿ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದ. ಮನೆಗಳ್ಳತನಕ್ಕಾಗಿಯೇ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ. ಕಳೆದ 3 ದಶಕಗಳಿಂದ ಕಳ್ಳತನವೇ ವೃತ್ತಿಯಾಗಿಸಿಕೊಂಡಿರುವ ಮಣಿ ರಾತ್ರಿ 9ರಿಂದ ಮಧ್ಯರಾತ್ರಿ 3 ಗಂಟೆ ನಡುವೆ ಕಳ್ಳತನ ಮಾಡಿ ಕೂಡಲೇ ಬಸ್​ನಲ್ಲಿ ತಮಿಳುನಾಡಿಗೆ ಎಸ್ಕೇಪ್​​​ ಆಗುತ್ತಿದ್ದ. ವಿದ್ಯಾರಣ್ಯಪುರ ಪೊಲೀಸರ ಮುಂದೆ ಕೃತ್ಯದ ಬಗ್ಗೆ ಮಣಿ ಮಾಹಿತಿ ಬಯ್ಬಿಟ್ಟಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:39 am, Sat, 10 June 23