Bengaluru News: ವೈಟ್‌ಫೀಲ್ಡ್‌ನಲ್ಲಿ ನೀರಿನ ಸಮಸ್ಯೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಕೊಂಡ ಲೋಕಾಯುಕ್ತ
ಬೆಂಗಳೂರು ಮಹಾನಗರದ ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ಕಳೆದ ಐದು ತಿಂಗಳಿನಿಂದ ತಮ್ಮ ಕಾಲೋನಿಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದು, ಈ ಹಿನ್ನೆಲೆ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಬೆಂಗಳೂರು: ಮಹಾನಗರದ (Bengaluru) ವೈಟ್‌ಫೀಲ್ಡ್ (Whitefield) ಪ್ರದೇಶದ ನಿವಾಸಿಗಳು ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ನೀರು ದೊರೆಯದೆ ಪರದಾಡುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ತಮ್ಮ ಕಾಲೋನಿಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆ ಲೋಕಾಯುಕ್ತ (Lokayukta) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ವೈಟ್‌ಫೀಲ್ಡ್ ನೀವಾಸಿಗಳು ತಿಂಗಳಿಗೆ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಕಾಯ್ದಿರಿಸಲು ತಿಂಗಳಿಗೆ 10,000 ರೂ. ನೀಡುತ್ತಿದ್ದಾರೆ. ವೈಟ್‌ಫೀಲ್ಡ್ ಹತ್ತಿರವಿರುವ ರಾಮಗೊಂಡನಹಳ್ಳಿ, ಸಿದ್ದಾಪುರ ಮತ್ತು ತೂಬರಹಳ್ಳಿ ಗ್ರಾಮಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಂಪರ್ಕವನ್ನು ಹೊಂದಿಲ್ಲ.
ಇದರಿಂದಾಗಿ ಅಲ್ಲಿನ ನಿವಾಸಿಗಳು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ಕಳೆದ ಐದು ತಿಂಗಳಿಂದ ಅನೇಕ ಗ್ರಾಮಸ್ಥರು ತಿಂಗಳಿಗೆ 10 ಸಾವಿರದಂತೆ ಸುಮಾರು 50 ಸಾವಿರ ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರನ್ನು ಪಡೆಯುತ್ತಿದ್ದಾರೆ.
ಈ ಮೊದಲು ಅವರು ತಿಂಗಳಿಗೆ 500 ರಿಂದ 600 ರೂ. ನೀಡಲಾಗುತ್ತಿದ್ದು, ಆದರೆ ಈಗ ಟ್ಯಾಂಕರ್ ನೀರಿನ ಅವಶ್ಯಕತೆ ಹೆಚ್ಚಾದ ಹಿನ್ನೆಲೆ ಪ್ರತಿ ಟ್ಯಾಂಕರ್ ನೀರಿನ ಬೆಲೆಯೂ ಕೂಡ ಏರಿಕೆಯಾಗಿದೆ. ಜೀವಿಸುವ ಹಕ್ಕು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ವೈಟ್ಫಿಲ್ಡ್ ನಿವಾಸಿಗಳಿಗೆ ಜಲ ಕಂಟಕ: ಟ್ಯಾಂಕರ್ ನೀರಿಗಾಗಿ ಪ್ರತಿ ತಿಂಗಳು 10 ಸಾವಿರ ರೂ. ಖರ್ಚು
ಉತ್ತಮ ಕುಡಿಯುವ ನೀರು ಪಡೆಯುವ ಅರ್ಹತೆಯು ಭಾರತದ ಸಂವಿಧಾನದ 21 ನೇ ವಿಧಿಯಡಿಯಲ್ಲಿ ಜೀವಿಸುವ ಹಕ್ಕಿನ ಭಾಗವಾಗಿದೆ. ಶುದ್ಧ ಕುಡಿಯುವ ನೀರನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕಾಗಿದೆ ಮತ್ತು 21 ನೇ ವಿಧಿಯ ಅಡಿಯಲ್ಲಿ ನಾಗರಿಕರಿಗೆ ಶುದ್ಧ ನೀರನ್ನು ಒದಗಿಸುವುದು ರಾಜ್ಯದ ಕರ್ತವ್ಯವಾಗಿದೆ.
ಉಪ ಲೋಕಾಯುಕ್ತರು, ಮಾಧ್ಯಮ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಸೆಕ್ಷನ್ 7(1) R/w 9(3)(a) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ತಮ್ಮ ಕಚೇರಿಗೆ ನಿರ್ದೇಶನ ನೀಡಿದರು. ರಾಮಗೊಂಡನಹಳ್ಳಿಗೆ ತಕ್ಷಣ ನೀರು ಸರಬರಾಜು ಮಾಡಬೇಕು, ಈ ಪ್ರದೇಶದ ನಿವಾಸಿಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಸಕ್ತಿ ವಹಿಸಬೇಕು ಎಂದು ಬಿಬಿಎಂಪಿಯ ಇಬ್ಬರು ಕಂದಾಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ. ಈ ಗ್ರಾಮಕ್ಕೆ ನಿತ್ಯ ಕುಡಿಯುವ ನೀರು ಏಕೆ ಪೂರೈಕೆಯಾಗುತ್ತಿಲ್ಲ ಎಂಬ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಲೋಕಾಯುಕ್ತ ಸೂಚನೆ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 am, Sat, 10 June 23