14 ಕಾಯಿಲೆಗಳ ನೆಪವೊಡ್ಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ ವಂಚಕ ಯುವರಾಜ್ ಸ್ವಾಮಿ

ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ರಿಪೋರ್ಟ್ ಪಡೆದಿರುವ ಯುವರಾಜ್ ಸ್ವಾಮಿ, ತನಗೆ ಹಲವು ಕಾಯಿಲೆಗಳಿವೆ ಎಂದು ರಿಪೋರ್ಟ್ ಸಲ್ಲಿಸಿದ್ದಾನೆ.

14 ಕಾಯಿಲೆಗಳ ನೆಪವೊಡ್ಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ ವಂಚಕ ಯುವರಾಜ್ ಸ್ವಾಮಿ
ಯುವರಾಜ್ ಸ್ವಾಮಿ
Edited By:

Updated on: Aug 22, 2021 | 11:03 AM

ಬೆಂಗಳೂರು: ಹಲವರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಯುವರಾಜ್ ಸ್ವಾಮಿ (Yuvaraj Swamy) ಸದ್ಯ ಜೈಲಿನಲ್ಲಿದ್ದು, ಹೊರಬರಲು ಸರ್ಕಸ್ ನಡೆಸುತ್ತಿದ್ದಾನೆ. ಜಾಮೀನು (Bail) ನೀಡಿ ಬಿಡುಗಡೆ ಮಾಡುವಂತೆ ಮೇಲಿಂದ ಮೇಲೆ ಯುವರಾಜ್ ಅರ್ಜಿ ಸಲ್ಲಿಸುತ್ತಿದ್ದಾನೆ. ಹೇಗಾದರೂ ಮಾಡಿ ಜೈಲಿನಿಂದ ಹೊರಬರಬೇಕೆಂದು ಕಸರತ್ತು ನಡೆಸುತ್ತಿರುವ ಯುವರಾಜ್ ಅನಾರೋಗ್ಯದ ಕಥೆ ಹೇಳಿ, ಜಾಮೀನು ಕೇಳುತ್ತಿದ್ದಾನೆ. ಬಣ್ಣ ಬಣ್ಣದ ಕಥೆ ಬಿಟ್ಟು ಕೋಟಿ ಕೋಟಿ ವಂಚಿಸಿದ್ದ ಈತನ ನಿಜ ಬಣ್ಣವನ್ನು ಸಿಸಿಬಿ ಅಧಿಕಾರಿಗಳು ಬಿಚ್ಚಿಟ್ಟು, ಜೈಲಿಗೆ ತಳ್ಳಿದ್ದರು. ಆದರೆ ಸೆರೆವಾಸದಿಂದ ಹೊರಬರಲು ಕಸರತ್ತು ನಡೆಸುತ್ತಿದ್ದಾನೆ.

ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ರಿಪೋರ್ಟ್ ಪಡೆದಿರುವ ಯುವರಾಜ್ ಸ್ವಾಮಿ, ತನಗೆ ಹಲವು ಕಾಯಿಲೆಗಳಿವೆ ಎಂದು ರಿಪೋರ್ಟ್ ಸಲ್ಲಿಸಿದ್ದಾನೆ. ಸಲ್ಲಿಸಿದ ಅರ್ಜಿಯಲ್ಲಿ ಕಳೆದ 5 ವರ್ಷಗಳಿಂದ ತಾನು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಸದ್ಯ ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ಆತ ಕೋರ್ಟ್ಗೆ ಮನವಿ ಮಾಡಿದ್ದಾನೆ.

14 ಕಾಯಿಲೆಗಳು
ಖುದ್ದು ಯುವರಾಜ್ ಸ್ವಾಮಿ ತನಗೆ ಇರುವ ಕಾಯಿಲೆಗಳ ಬಗ್ಗೆ ಹೇಳಿಕೊಂಡಿದ್ದಾನೆ. ಕಳೆದ 7- 8 ವರ್ಷಗಳಿಂದ ಅಧಿಕ ರಕ್ತದೊತ್ತಡ, 6 ವರ್ಷಗಳಿಂದ ಮಧುಮೇಹ, ಲೀವರ್ ಸಮಸ್ಯೆ, ಕುತ್ತಿಗೆಯಿಂದ ಬೆನ್ನಿನ ಎಲುಬು ಅತಿಯಾದ ನೋವು, ಗುದದ್ವಾರದಲ್ಲಿ ಬಿರುಕು ಕಾಯಿಲೆ, ಗ್ಯಾಸ್ಟ್ರಿಕ್ ಸಮಸ್ಯೆ, ಐರನ್ ಮತ್ತು ವಿಟಮಿನ್ ಕೊರತೆ, ಉರಿಯೂತ, ಸಣ್ಣ ಪ್ರಮಾಣದ ಖಿನ್ನತೆ, ಭುಜದ ಹಳೆ ಮೂಳೆ ಮುರಿತದ ನೋವು, ಕುತ್ತಿಗೆ ನೋವು, ವೈರಲ್ ಜ್ವರ ಸೇರಿ ಒಟ್ಟು 14 ಕಾಯಿಲೆಗಳು ಇರುವುದಾಗಿ ತಿಳಿಸಿದ್ದಾನೆ.

ಹದಿನಾಲ್ಕು ಆರೊಗ್ಯ ಸಮಸ್ಯೆಗಳ ಪಟ್ಟಿ ಸಮೇತ ಜಾಮೀನು ಅರ್ಜಿ ಸಲ್ಲಿಸಿರುವ ಯುವರಾಜ್, ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು 90 ದಿನ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದಾನೆ. ಹೊರಗಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ

Yuvraj Singh: ಟೀಮ್ ಇಂಡಿಯಾ ಬಗ್ಗೆ ಆಕ್ರೋಶ ಹೊರಹಾಕಿದ ಯುವರಾಜ್ ಸಿಂಗ್

ವಂಚಕ ಯುವರಾಜ್ ವಿರುದ್ಧ ಚಾರ್ಜ್‌ಶೀಟ್; ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಲೆಟರ್​​ಹೆಡ್​​ನಲ್ಲಿ ಬರೆದಿದ್ದ ಪತ್ರ ಸಿಸಿಬಿ ವಶಕ್ಕೆ

(Yuvaraj Swamy has filed a bail on his ill health)