AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಚಕ ಯುವರಾಜ್ ವಿರುದ್ಧ ಚಾರ್ಜ್‌ಶೀಟ್; ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಲೆಟರ್​​ಹೆಡ್​​ನಲ್ಲಿ ಬರೆದಿದ್ದ ಪತ್ರ ಸಿಸಿಬಿ ವಶಕ್ಕೆ

ಬೆಂಗಳೂರು: ವಂಚಕ ಯುವರಾಜ್ ಸ್ವಾಮಿಯಿಂದ ಕೋಟ್ಯಂತರ ರೂ. ವಂಚನೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಸಿಟಿ ಸಿವಿಲ್ ಕೋರ್ಟ್‌ಗೆ 350 ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಆರೋಪಿ ಯುವರಾಜ್ ಸ್ವಾಮಿ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ವಂಚನೆಯನ್ನು ಯುವರಾಜ್ ಒಪ್ಪಿಕೊಂಡಿರುವುದಾಗಿ ಚಾರ್ಜ್‌ಶೀಟ್​ನಲ್ಲಿ ದಾಖಲು: ಜ್ಞಾನಭಾರತಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎಇಇ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ. ರಾಜಾಜಿನಗರ ನಿವಾಸಿ ಜಿ ನರಸಿಂಹಮೂರ್ತಿ ಎಂಬುವವರಿಗೆ ವಂಚನೆ […]

ವಂಚಕ ಯುವರಾಜ್ ವಿರುದ್ಧ ಚಾರ್ಜ್‌ಶೀಟ್; ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಲೆಟರ್​​ಹೆಡ್​​ನಲ್ಲಿ ಬರೆದಿದ್ದ ಪತ್ರ ಸಿಸಿಬಿ ವಶಕ್ಕೆ
ಯುವರಾಜ್ ಸ್ವಾಮಿ
TV9 Web
| Updated By: ಸಾಧು ಶ್ರೀನಾಥ್​|

Updated on:Aug 13, 2021 | 1:48 PM

Share

ಬೆಂಗಳೂರು: ವಂಚಕ ಯುವರಾಜ್ ಸ್ವಾಮಿಯಿಂದ ಕೋಟ್ಯಂತರ ರೂ. ವಂಚನೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಸಿಟಿ ಸಿವಿಲ್ ಕೋರ್ಟ್‌ಗೆ 350 ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಆರೋಪಿ ಯುವರಾಜ್ ಸ್ವಾಮಿ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ವಂಚನೆಯನ್ನು ಯುವರಾಜ್ ಒಪ್ಪಿಕೊಂಡಿರುವುದಾಗಿ ಚಾರ್ಜ್‌ಶೀಟ್​ನಲ್ಲಿ ದಾಖಲು: ಜ್ಞಾನಭಾರತಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎಇಇ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ. ರಾಜಾಜಿನಗರ ನಿವಾಸಿ ಜಿ ನರಸಿಂಹಮೂರ್ತಿ ಎಂಬುವವರಿಗೆ ವಂಚನೆ ಮಾಡಿದ್ದ. ವಾಪಸ್ಸು ಹಣ ಕೇಳಿದಾಗಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ನೀನು ಕೊಟ್ಟ ಹಣದಿಂದಲೇ ನಿನ್ನ ವಿರುದ್ಧ ಸುಪಾರಿ ಕೊಡುತ್ತೇನೆ ಎಂದು ವಂಚಕ ಯುವರಾಜ್ ಸ್ವಾಮಿ ಬೆದರಿಸಿದ್ದ ಚಾರ್ಜ್‌ಶೀಟ್​ನಲ್ಲಿ ಸಿಸಿಬಿ ಪೊಲೀಸರು ಉಲ್ಲೇಖಿಸಿದ್ದಾರೆ. 9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಯುವರಾಜ್ ​ಸ್ವಾಮಿ ವಿರುದ್ದ ಐಪಿಸಿ ಸೆ 420, 504, 506 ಅಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಗಮನಾರ್ಹವೆಂದರೆ ಪೊಲೀಸರ ಮುಂದೆ ತಾನು ಮಾಡಿದ ವಂಚಕತನವನ್ನು ಸ್ವಾಮಿ ಒಪ್ಪಿಕೊಂಡಿರುವುದಾಗಿ ಚಾರ್ಜ್‌ಶೀಟ್ ಹೇಳಲಾಗಿದೆ.

ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿರುವ ಕೆಲ ಪ್ರಕರಣಗಳ ವಿವರ ಇಲ್ಲಿದೆ: ಇನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ ಗೆ ಯುವರಾಜ್ ವಂಚಿಸಿದ್ದ. ಅಮಾಯಕ ಕೆಲಸಗಾರನ ಬ್ಯಾಂಕ್ ಅಕೌಂಟ್ ಅನ್ನು ಯುವರಾಜ್ ದುರ್ಬಳಕೆ ಮಾಡಿಕೊಂಡಿದ್ದ. ತಾನು ವಂಚಿಸಿ ಪಡೆದ ಹಣವನ್ನು ಡ್ರೈವರ್ ಖಾತೆಯಲ್ಲಿ ಡೆಪಾಸಿಟ್ ಮಾಡಿಸಿ ವಂಚಿಸಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಗೊಂಡಿದ್ದ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

KSRTC ಛೇರ್ಮನ್ ಹುದ್ದೆ ಕೊಡಿಸುವುದಾಗಿ ಹೇಳಿ ಉದ್ಯಮಿ ಸುಧೀಂದ್ರ ರೆಡ್ಡಿಗೆ ವಂಚಕ ಯುವರಾಜ್ 1 ಕೋಟಿ ರೂಪಾಯಿ ಉಂಡೆನಾಮ ತಿಕ್ಕಿದ್ದ. ಬರೋಬ್ಬರಿ 1 ಕೋಟಿ ಹಣವನ್ನು ಪಡೆದು ಸ್ವಾಮಿ ವಂಚಿಸಿದ್ದ. ಯುವರಾಜ್ ಸ್ವಾಮಿ ಚೆಕ್ ಮುಖಾಂತರವೇ ಹಣವನ್ನು ಪಡೆದುಕೊಂಡಿದ್ದ. ಆ ವೇಳೆ, ಬಿಜೆಪಿ ಕಾರ್ಯಕರ್ತ ಮಧುರಾಜ್ ಎಂಬಾತನ ಜೊತೆ ಬಂದು ವಂಚನೆ ಎಸಗಿದ್ದ. 10 ದಿನಗಳಲ್ಲಿ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದ. ಯುವರಾಜ್ ಮತ್ತು ಮಧುರಾಜ್ ವಿರುದ್ಧ ಸಿಇಎನ್ ಠಾಣಾ ಪೊಲೀಸ್ರು ಕೇಸ್ ದಾಖಲಿಸಿದ್ದರು.

ಸಿಸಿಬಿ ಸಲ್ಲಿಸರುವ ಚಾರ್ಜ್‌ಶೀಟ್​ನಲ್ಲಿ ಪ್ರಸ್ತಾಪವಾಗಿರುವ ಕೆಲವು ಪ್ರಮುಖ ದಾಖಲೆಗಳು ಮತ್ತು ವ್ಯಕ್ತಿಗಳ ಹೆಸರುಗಳು ಹೀಗಿವೆ: ಸಚಿವ ಮುರಗೇಶ್ ನಿರಾಣಿ, ಪ್ರಮೋದ್ ಮಧ್ವರಾಜ್, ಉಮೇಶ್ ಕತ್ತಿಯವರ ಲೇಟರ್ ಹೆಡ್​ಗಳು. ಶ್ರೀರಾಮುಲುಗೆ ಸೇರಿದ ಕೆಲ ದಾಖಲೆಗಳನ್ನು ಸಹ ವಂಚಕ ಯುವರಾಜ್​​ನಿಂದ ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ.

ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ವಂಚಕ ಯುವರಾಜ್ ಪತ್ರ ತಯಾರಿಸಿಕೊಂಡಿದ್ದಾನೆ. ಶ್ರೀರಾಮುಲು ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಬರೆದಿರುವ ಪತ್ರ ಅದಾಗಿದೆ. ಅದಲ್ಲದೆ, ಬಿಜೆಪಿ ಪಾರ್ಟಿ ಹೆಸರಿನ ಅನೇಕ ಲೇಟರ್ ಹೆಡ್ ಸಮೇತ ಪತ್ರಗಳನ್ನು ಸಿಸಿಬಿ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ನಿವೃತ್ತ ಜಡ್ಜ್ ಇಂದ್ರಕಲಾ ಅವರ ದಾಖಲೆಗಳ ಬಗ್ಗೆಯೂ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದೆ.

ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರ: ಶುರುವಾಯ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟ

(bangalore ccb police submit 350 pages chargesheet against fraud yuvaraj swamy charge sheet details)

Published On - 1:41 pm, Fri, 13 August 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ