ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರ: ಶುರುವಾಯ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟ

Telephone Tapping: ಈ ಹಿಂದೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ಹಲವು ಬಾರಿ ಬಯಲಿಗೆ ಬಂದಿದ್ವು. ಮೊಬೈಲ್ ಫೋನ್ ಬಳಕೆ, ಗಾಂಜಾ ಮಾದಕ ವಸ್ತುಗಳ ಸರಬರಾಜು ಸೇರಿ ಇನ್ನಿತರ ಅಕ್ರಮಗಳು ನಡೆಯುತ್ತಿದ್ದವು. ಹಾಗಾದರೆ ಸದ್ಯ ಪರಪ್ಪನ ಅಗ್ರಹಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದಕ್ಕೆ ಬೆಲ್ಲದ್ ಆರೋಪವೇ ಸಾಕ್ಷಿಯಾದೀತು.

ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರ: ಶುರುವಾಯ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟ
ಅರವಿಂದ ಬೆಲ್ಲದ್
TV9kannada Web Team

| Edited By: sadhu srinath

Jun 18, 2021 | 1:53 PM

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲು ಮಾಡಬೇಕುಎ ಂದು ಶತಾಯಗತಾಯ ಪ್ರತ್ನಿಸುತ್ತಿರುವ ಶಾಸಕ ಅರವಿಂದ್​ ಬೆಲ್ಲದ್ ಆ ಪ್ರಯತ್ನದಲ್ಲಿ ನಿನ್ನೆ ಟೆಲಿಫೋನ್​ ಟ್ಯಾಪಿಂಗ್​ ಭೂತವನ್ನು ಹರಿಯಬಿಟ್ಟರು. ಇದರಿಂದ ರಾಜಕೀಯವಾಗಿ ಸಂಚಲನ ಮೂಡಿಸಿಲ್ಲವಾದರೂ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟಕ್ಕೆ ಕಾರಣವಾಗಿದೆ. ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ಡವಡವ ಶುರುವಾಗಿದೆ.

ಪ್ರಸ್ತುತ ಬಹುಕೋಟಿ ವಂಚಕ ಯುವರಾಜ್​ ಸ್ವಾಮಿ ಪರಪ್ಪನ ಅಗ್ರಹಾರ ಜೈಲು ವಾಸಿಯಾಗಿದ್ದಾರೆ. ಆತ ದೂರವಾಣಿ ಕರೆ ಮಾಡಿ ತನ್ನೊಂದಿಗೆ ಮಾತಾಡಿದ್ದ ಅನ್ನುತ್ತಿದ್ದಾರೆ ಶಾಸಕ ಅರವಿಂದ ಬೆಲ್ಲದ್. ಹೇಳಿಕೇಳಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಹಾಗಾದ್ರೆ ಯುವರಾಜ್​ ಸ್ವಾಮಿಗೆ ಮೊಬೈಲ್ ಫೋನ್ ಸಿಕ್ಕಿದ್ದೇಗೆ? ಎಂಬ ಪ್ರಶ್ನೆ ಪರಪ್ಪನ ಜೈಲು ಅಧಿಕಾರಿಗಳನ್ನು ಬಹುವಾಗಿ ಕಾಡತೊಡಗಿದೆ.

ಒಂದು ವೇಳೆ ಶಾಸಕ ಅರವಿಂದ ಬೆಲ್ಲದ್ ಏನಾದರೂ ಅಧಿಕೃತ ದೂರು ನೀಡಿದರೆ ತನಿಖೆ ನಡೆಸಬೇಕಾಗುತ್ತದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ತನಿಖೆ ನಡೆಯಬೇಕಾದೀತು. ಯುವರಾಜ್​ ಸ್ವಾಮಿಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಯುವರಾಜ್ ಇನ್ನೂ ಯಾರು ಯಾರಿಗೆ ಫೋನ್​ ಮಾಡುತ್ತಿರುತ್ತಾನೆ? ಈತನಿಗೆ ಮೊಬೈಲ್ ಕೊಟ್ಟಿದ್ದು ಯಾರು, ಹೇಗೆ? ಇವೇ ಪಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆಗೆ ಡಯಲ್​ ಮಾಡಬೇಕಾಗುತ್ತದೆ. ಸದ್ಯ ಇದರಿಂದಾಗಿ ಜೈಲು ಸಿಬ್ಬಂದಿಗೆ ಭೀತಿ ಶುರುವಾಗಿದೆ.

ಈ ಹಿಂದೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ಹಲವು ಬಾರಿ ಬಯಲಿಗೆ ಬಂದಿದ್ವು. ಮೊಬೈಲ್ ಫೋನ್ ಬಳಕೆ, ಗಾಂಜಾ ಮಾದಕ ವಸ್ತುಗಳ ಸರಬರಾಜು ಸೇರಿ ಇನ್ನಿತರ ಅಕ್ರಮಗಳು ನಡೆಯುತ್ತಿದ್ದವು. ಹಾಗಾದರೆ ಸದ್ಯ ಪರಪ್ಪನ ಅಗ್ರಹಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದಕ್ಕೆ ಬೆಲ್ಲದ್ ಆರೋಪವೇ ಸಾಕ್ಷಿಯಾದೀತು.

ಫೋನ್ ಕದ್ದಾಲಿಕೆ: ಡಿಸಿಪಿ ಅನುಚೇತ್ ನೇತೃತ್ವದಲ್ಲಿ ತನಿಖೆ ಆರಂಭ ಫೋನ್ ಕದ್ದಾಲಿಕೆ ಬಗ್ಗೆ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ತನಿಖೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಶಾಸಕ ಅರವಿಂದ್ ಬೆಲ್ಲದ್‌ರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಗಿದೆ. ಆದರೆ ಅವರು ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಮೊಟ್ಟಮೊದಲ ತಟಸ್ಥ ಟೆಸ್ಟ್​ ಪಂದ್ಯ ಎಲ್ಲಿ ನಡೆದಿತ್ತು? ಯಾರಯಾರ ಮಧ್ಯೆ? ಗೆಲವು ಯಾರದ್ದಾಗಿತ್ತು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ!

H Vishwanath: ವಿಶ್ವನಾಥ್ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಮಾತನಾಡಬೇಡಿ: ರೇಣುಕಾಚಾರ್ಯ ವಾಗ್ದಾಳಿ

(Arvind Bellad alleges Telephone Tapping complaint fraud Yuvaraj Swamy called him over mobile)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada