AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

H Vishwanath: ವಿಶ್ವನಾಥ್ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಮಾತನಾಡಬೇಡಿ: ರೇಣುಕಾಚಾರ್ಯ ವಾಗ್ದಾಳಿ

MP Renukacharya: ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ದೂರಿದ್ದೀರಿ. ಎಂಎಲ್‌ಸಿ ವಿಶ್ವನಾಥ್‌ರವರೇ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಹೀಗೆಲ್ಲಾ ಮಾತನಾಡಬೇಡಿ ಎಂದು ಹೆಚ್​ ವಿಶ್ವನಾಥ್​ ವಿರುದ್ಧ ರೇಣುಕಾಚಾರ್ಯ ಗುಡುಗಿದರು.

H Vishwanath: ವಿಶ್ವನಾಥ್ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಮಾತನಾಡಬೇಡಿ:  ರೇಣುಕಾಚಾರ್ಯ ವಾಗ್ದಾಳಿ
ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ
TV9 Web
| Updated By: ಸಾಧು ಶ್ರೀನಾಥ್​

Updated on:Jun 17, 2021 | 12:43 PM

Share

ಬೆಂಗಳೂರು: ವಲಸೆ ಹಕ್ಕಿ ಹೆಚ್​ ವಿಶ್ವನಾಥ್​ ವಿರುದ್ಧ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀವು ಮೂಲ ಬಿಜೆಪಿಗರು ಅಲ್ಲ. ನೀವೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ನಿಮ್ಮನ್ನು ನಮ್ಮ ನಾಯಕ ಯಡಿಯೂರಪ್ಪನವರು ಎಂಎಲ್ಸಿ ಯನ್ನಾಗಿ ಮಾಡಿದರು. ನಿಮ್ಮನ್ನು ಮಂತ್ರಿಯನ್ನಾಗಿ ಮಾಡಬೇಕು ಅಂತಿದ್ದರು. ಆದ್ರೆ ಕೋರ್ಟ್​ ತಡೆಬಂದಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಶ್ವನಾಥ್ ಹೀಗೆಲ್ಲ ಮಾತನಾಡಬೇಡಿ ಎಂದು ಯಡಿಯೂರಪ್ಪ ಪರ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಫುಲ್​ ಬ್ಯಾಟಿಂಗ್​ ಮಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ದೂರಿದ್ದೀರಿ. ಎಂಎಲ್‌ಸಿ ವಿಶ್ವನಾಥ್‌ರವರೇ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಹೀಗೆಲ್ಲಾ ಮಾತನಾಡಬೇಡಿ ಎಂದು ಹೆಚ್​ ವಿಶ್ವನಾಥ್​ ವಿರುದ್ಧ ರೇಣುಕಾಚಾರ್ಯ ಗುಡುಗಿದರು. ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಡೀ ರಾಜ್ಯದುದ್ದಕ್ಕೂ ಓಡಾಡಿಕೊಂಡು ಬಂದಿದ್ದಾರೆ. BSY ವಯಸ್ಸಾಗಿದ್ದರೂ ಯುವಕರಂತೆ ಕೆಲಸ ಮಾಡ್ತಿದ್ದಾರೆ. ಅದು ನಿಮ್ಮ ಮಬ್ಬುಗಣ್ಣಿಗೆ ಕಾಣುತ್ತಿಲ್ಲವಾ? ಎಂದು ರೇಣುಕಾಚಾರ್ಯ ಝಾಡಿಸಿದರು.

ಇದನ್ನು ಓದಿ:  ಜೆಡಿಎಸ್​ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ: ಅರುಣ್ ಸಿಂಗ್ ಎದುರು ಗುಡುಗಿದ ಹೆಚ್​ ವಿಶ್ವನಾಥ್​ ಏನೆಲ್ಲ ಹೇಳಿದ್ರು?

ಯತ್ನಾಳ್, ಹೆಚ್.ವಿಶ್ವನಾಥ್​ ತಿರುಕನ ಕನಸು ಕಾಣುತ್ತಿದ್ದಾರೆ:

ನೀವು ಒರಿಜಿನಲ್‌ ಆಗಿ ಬಿಜೆಪಿಯವರಾ? ಈಗ ಹತಾಶರಾಗಿ ಮಾತನಾಡುತ್ತಿದ್ದೀರಿ. ಬಿಎಸ್‌ವೈ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ? ಸಿಎಂ ಆಯ್ಕೆ ಮಾಡುವ ಹಕ್ಕು ಇರುವುದು ಶಾಸಕರಿಗೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಶ್ವನಾಥ್ ಹೀಗೆ ಹೇಳ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಶಾಸಕ ರೇಣುಕಾಚಾರ್ಯ ಮಾಧ್ಯಮ ಪ್ರತಿನಿಧಿಗಳ ಎದುರು ಹೇಳಿದರು.

H.ವಿಶ್ವನಾಥ್ ಅವರೇ ಸಿಎಂ ಬಗ್ಗೆ ಮಾತನಾಡಲು ನೀವ್ಯಾರು? ನೀವು ಯಾವ ಪಕ್ಷದಲ್ಲಿರುತ್ತೀರೋ ಅಲ್ಲೇ ಟೀಕೆ ಮಾಡ್ತೀರಿ. ಈ ಹಿಂದೆ ಎಸ್​.ಎಂ.ಕೃಷ್ಣ ವಿರುದ್ಧ ಟೀಕೆ ಮಾಡುತ್ತಿದ್ರಿ. ಯತ್ನಾಳ್ ಮನೋಭಾವವೇ ಹೆಚ್.ವಿಶ್ವನಾಥ್​ಗೂ ಇದೆ. ಯತ್ನಾಳ್, ಹೆಚ್.ವಿಶ್ವನಾಥ್​ ತಿರುಕನ ಕನಸು ಕಾಣುತ್ತಿದ್ದಾರೆ. ಸಿಎಂ ಆಗಲು ಕೋಟ್ ಹೊಲಿಸಿಕೊಂಡು ತಿರುಕನ ಕನಸು ಕಾಣುತ್ತಿದ್ದಾರೆ ಯತ್ನಾಳ್ ಎಂದು ಸಿಎಂ ಭೇಟಿ ಬಳಿಕ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಹೆಚ್​ ವಿಶ್ವನಾಥ್ ಅಂತಹವರು ಕೊರೊನಾ ವೈರಸ್ ಇದ್ದಂತೆ; ಅದಕ್ಕೆ ಯಾವುದೇ ಮದ್ದಿಲ್ಲ: ಎಸ್​ ಆರ್​ ವಿಶ್ವನಾಥ್

SR VISHWANATH H VISHWANATH

S.R. ವಿಶ್ವನಾಥ್ ​(ಎಡ);  H. ವಿಶ್ವನಾಥ್​ (ಬಲ)

ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಭೇಟಿ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗುಡಗಿರುವ ಹೆಚ್​ ವಿಶ್ವನಾಥ್ ಅವರ ವಿರುದ್ಧ ಬಿಡಿಎ ಅಧ್ಯಕ್ಷ ಎಸ್​ ಆರ್​ ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್​ ವಿಶ್ವನಾಥ್ ಈ ರೀತಿ ಅಶಿಸ್ತಿನ ಹೇಳಿಕೆ ಕೊಡಬಾರದು. ವಿಶ್ವನಾಥ್ ಅರೆಹುಚ್ಚನಂತೆ ಮಾತನಾಡುತ್ತಾರೆ. ವಿಶ್ವನಾಥ್ ತಿಕ್ಕಲ ಇದ್ದಂತೆ. ರಸ್ತೆಯಲ್ಲಿ ಓಡಾಡುವ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಕೆಲವರು ಮಾತನಾಡುತ್ತಿದ್ದಾರೆ, ಅದಕ್ಕೆ ಯಾವುದೇ ಮದ್ದಿಲ್ಲ.

ವಿಶ್ವನಾಥ್ ಉಂಡ ಮನೆಗೆ ದ್ರೋಹ ಬರೆಯುತ್ತಾರೆ. ವಿಶ್ವನಾಥ್ ಗೆ ಇದು ರಾಜಕೀಯದ ಕೊನೆ ಅವಕಾಶ. ಮೈಸೂರಿನಲ್ಲಿ ಒಂದು ಸಾ ರಾ ಮಹೇಶ್ ಒರ ಮಾತನಾಡುತ್ತಿದ್ದಾರೆ, ಮಾರನೆಯ ದಿನವೇ ಅವರ ವಿರುದ್ಧ ಮಾತನಾಡುತ್ತಾರೆ. ಇನ್ನು ಅವರಿಗೆ ಯಾರೂ ಮೆಂಬರ್ ಶಿಪ್ ಕೊಡಲ್ಲ ಎಂದು ಎಸ್​ ಆರ್​ ವಿಶ್ವನಾಥ್ ಹೇಳಿದ್ದಾರೆ.

(bjp mla mp renukacharya criticises H Vishwanath in bangalore)

Published On - 12:27 pm, Thu, 17 June 21

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!