ಪರಿಹಾರ ಘೋಷಣೆ ಮಾಡಿದ್ದು 2ಲಕ್ಷ10 ಸಾವಿರ ಚಾಲಕರಿಗೆ, ಆದ್ರೆ ನೀಡಿದ್ದು 1ಲಕ್ಷ, 18 ಸಾವಿರ ಮಂದಿಗೆ.. ಉಳಿದದ್ದು ಯಾವಾಗ?
ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದು 2.ಲಕ್ಷ 10 ಸಾವಿರ ಚಾಲಕರಿಗೆ. ಆದರೆ ಸಾರಿಗೆ ಇಲಾಖೆ ಇಲ್ಲಿಯವರಿಗೆ ನೀಡಿದ್ದು ಕೇವಲ 1 ಲಕ್ಷ, 18 ಸಾವಿರ ಚಾಲಕರಿಗೆ ಮಾತ್ರ. ಉಳಿದ ಚಾಲಕರಿಗೆ ಪರಿಹಾರ ಹಣ ಸಿಗೋದು ಯಾವಾಗ? ಅನ್ಲಾಕ್ ಆದರೂ ಎಲ್ಲಾ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನ ಸಿಕ್ಕಿಲ್ಲ.
ಬೆಂಗಳೂರು: ಮಹಾಮಾರಿ ಕೊರೊನಾ ಹೊಡೆತಕ್ಕೆ ಜನ ಜೀವನ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಘೋಷಣೆ ಮಾಡಲಾಗಿದ್ದು ಸೇವಾ ಸಿಂಧು ಪೋರ್ಟಲ್‌ನಲ್ಲಿ ಚಾಲಕರು ಅರ್ಜಿ ಸಲ್ಲಿಸಿ ಹಣ ಪಡೆಯಬಹುದಾಗಿದೆ. ಆದ್ರೆ ಆಟೋ ಟ್ಯಾಕ್ಸಿ ಚಾಲಕರ ಪರಿಹಾರ ಧನ ಹೆಸರಿಗಷ್ಟೇ ಘೋಷಣೆ ಮಾಡಿ ತುಪ್ಪ ಸವರುವ ಕೆಲಸ ಸರ್ಕಾರ ಮಾಡಿದೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದು 2.ಲಕ್ಷ 10 ಸಾವಿರ ಚಾಲಕರಿಗೆ. ಆದರೆ ಸಾರಿಗೆ ಇಲಾಖೆ ಇಲ್ಲಿಯವರಿಗೆ ನೀಡಿದ್ದು ಕೇವಲ 1 ಲಕ್ಷ, 18 ಸಾವಿರ ಚಾಲಕರಿಗೆ ಮಾತ್ರ. ಉಳಿದ ಚಾಲಕರಿಗೆ ಪರಿಹಾರ ಹಣ ಸಿಗೋದು ಯಾವಾಗ? ಅನ್ಲಾಕ್ ಆದರೂ ಎಲ್ಲಾ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನ ಸಿಕ್ಕಿಲ್ಲ. ಸೇವಾ ಸಿಂಧು ಪೋರ್ಟಲ್ನಲ್ಲಿ ಆಟೋ ಟ್ಯಾಕ್ಸಿ ಚಾಲಕರಿಂದ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸಾರಿಗೆ ಇಲಾಖೆ ಒಟ್ಟು 2,33,706 ಅರ್ಜಿಗಳನ್ನ ಸ್ವೀಕರಿಸಿದೆ. ಈ ಪೈಕಿ ಸಾರಿಗೆ ಇಲಾಖೆಯಿಂದ 2.27.886 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. ಅಪ್ರೋವ್ಡ್ ಆಗಿರುವ ಅಪ್ಲಿಕೇಶನ್ಗಳ ಸಂಖ್ಯೆ- 1,97,121. ಮ್ಯಾನುಯಲ್ ಆಗಿ ಅಪ್ರೋವ್ಡ್ ಆಗಿರುವ ಅರ್ಜಿಗಳ ಸಂಖ್ಯೆ- 30,765. ವೆರಿಫಿಕೇಷನ್ಗೆ ಬಾಕಿ ಇರುವ ಅರ್ಜಿಗಳ ಸಂಖ್ಯೆ- 4958. ದಾಖಲೆಗಳು ಸರಿ ಇಲ್ಲದೇ ರಿಜೆಕ್ಟ್ ಆದ ಅರ್ಜಿಗಳ ಸಂಖ್ಯೆ -862.
ಸರ್ಕಾರ, ರಾಜ್ಯಾದ್ಯಂತ 2.10 ಲಕ್ಷ ಆಟೋ-ಟ್ಯಾಕ್ಸಿ ಚಾಲಕರಿಗೆ ತಲಾ 3 ಸಾವಿರ ಪರಿಹಾರ ಘೋಷಣೆ ಮಾಡಿದೆ. ಅದ್ರೆ ಇಲ್ಲಿಯವರಿಗೆ 1 ಲಕ್ಷ 18 ಸಾವಿರ ಚಾಲಕರಿಗೆ ಅಷ್ಟೇ ಪರಿಹಾರ ನೀಡಿಲಾಗಿದೆ. ಘೋಷಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ಸಲ್ಲಿಕೆ ಹಾಗೂ ಅನುಮೋದನೆಯಾಗಿದ್ದು, ಹೆಚ್ಚುವರಿ ಅರ್ಜಿಗಳಿಗೂ ಪರಿಹಾರ ನೀಡುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ಇಡಲಿದೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಆಟೋ ಟ್ಯಾಕ್ಸಿ ಚಾಲಕರ ಖಾತೆಗೆ ಹಣ ಬರೋದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ಯಾಕ್ಸಿ, ಆಟೋ ಚಾಲಕರಿಗೆ ಬಿಬಿಎಂಪಿಯಿಂದ ಆರು ಷರತ್ತು; ಲಸಿಕೆ ಪಡೆದ ಚಾಲಕರು ಮಾತ್ರ ವಾಹನ ಚಲಾಯಿಸಬೇಕು