ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇನ್ನು ಐದು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಆದೇಶ ಹೊರಡಿಸಿದೆ. ಇಂದಿನಿಂದ ಜುಲೈ 17ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ (Power Cut) ಇರಲಿದೆ. ಆ ಪಟ್ಟಿಯಲ್ಲಿ ನಿಮ್ಮ ಏರಿಯಾ ಕೂಡ ಇರಬಹುದು. ಪೂರ್ತಿ ಮಾಹಿತಿಗೆ ಮುಂದೆ ಓದಿ…
ಸಿಲಿಕಾನ್ ಸಿಟಿಯ ಕೆಲವು ಏರಿಯಾಗಳಲ್ಲಿ ಇಂದಿನಿಂದ ಶನಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ನಂಜಪ್ಪ ಲೇಔಟ್, ವಿನಾಯಕ ನಗರ, ಚಂದ್ರಪ್ಪ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್‌ಆರ್ ಲೇಔಟ್, ವಿಲ್ಸನ್ ಗಾರ್ಡನ್ ಸೇರಿದಂತೆ ಬಹುತೇಕ ಕಡೆ ಪವರ್ ಕಟ್ ಇರಲಿದೆ. ಬೆಸ್ಕಾಂನ ಜಯನಗರ ಉಪವಿಭಾಗದಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿರುವುದರಿಂದ ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಹಳ್ಳಿಗಳಲ್ಲಾದರೂ ಒಂದೆರಡು ದಿನ ಕರೆಂಟ್ ಇಲ್ಲವೆಂದರೆ ಹೇಗಾದರೂ ನಿಭಾಯಿಸಬಹುದು. ಆದರೆ, ಬೆಂಗಳೂರಿನಲ್ಲಿ ಒಂದು ಗಂಟೆ ಕರೆಂಟ್ ಇಲ್ಲದಿದ್ದರೂ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಕಾರ್ಖಾನೆ, ಕಂಪನಿ ಮಾತ್ರವಲ್ಲದೆ ಮನೆಯೊಳಗೂ ವಿದ್ಯುತ್ ವ್ಯತ್ಯಯದಿಂದ ಕಂಗಾಲಾಗುವ ಪರಿಸ್ಥಿತಿ ಉಂಟಾಗುತ್ತದೆ. ಕಚೇರಿಗಳಲ್ಲಾದರೆ ಜನರೇಟರ್, ಪವರ್ ಬ್ಯಾಕಪ್ ವ್ಯವಸ್ಥೆ ಇರುವುದರಿಂದ ತೊಂದರೆಯಾಗುವುದಿಲ್ಲ. ಆದರೆ, ಈಗ ಬಹುತೇಕ ಎಲ್ಲ ಕಂಪನಿಗಳ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ (Work from Home) ಆಯ್ಕೆ ಕೊಟ್ಟಿರುವುದರಿಂದ ಕರೆಂಟ್ ಇಲ್ಲದಿದ್ದರೆ ಏನೆಂಬ ಚಿಂತೆ ಎದುರಾಗುವುದು ಸಹಜ.
ಇಂದು ಮತ್ತು ನಾಳೆ ಬೆಂಗಳೂರಿನ ನಂಜಪ್ಪ ಲೇಔಟ್, ವಿನಾಯಕನಗರ, ಚಂದ್ರಪ್ಪ ಲೇಔಟ್, ವಿಲ್ಸನ್ ಗಾರ್ಡನ್, ಮಡಿವಾಳ, ಬಂಡೆ ಪಾರ್ಕ್, ಕೃಷ್ಣ ಲೇಔಟ್, ಬೇಗೂರು-ಕೊಪ್ಪ ರಸ್ತೆ, ಎಲ್‌ಆಂಡ್ ಟಿ ಸೌತ್ ಸಿಟಿ, ಎಲೆಕ್ಟ್ರಾನಿಕ್ಸ್ ಸಿಟಿ, ಎಚ್‌ಎಸ್‌ಆರ್ ಲೇಔಟ್, ಎಚ್‌ಎಸ್‌ಆರ್ ಲೇಔಟ್ 19ನೇ ಮುಖ್ಯರಸ್ತೆ, ಮೈಲಸಂದ್ರದಲ್ಲಿ ಪವರ್ ಕಟ್ ಇರಲಿದೆ.
ಜುಲೈ 15ರಿಂದ ಜುಲೈ 17ರವರೆಗೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆ, ಕೋರಮಂಗಲ 8ನೇ ಬ್ಲಾಕ್, ಸೇಂಟ್ ಜಾನ್ಸ್ ಆಸ್ಪತ್ರೆ, ಬಿಗ್ ಬಜಾರ್, ಆಕ್ಸೆಂಚರ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಎಚ್‌ಎಸ್ ಆರ್ ಲೇಔಟ್ 5ನೇ ಮುಖ್ಯರಸ್ತೆ, ಮೈಕೋ ಲೇಔಟ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇದನ್ನೂ ಓದಿ: Aam Admi Party: ದಿನವಿಡೀ ಕರೆಂಟ್, 300 ಯುನಿಟ್ ವಿದ್ಯುತ್ ಉಚಿತ; ಉತ್ತರಾಖಂಡದಲ್ಲಿ ಆಮ್ ಆದ್ಮಿಯನ್ನು ಗೆಲ್ಲಿಸಲು ಬಿಗ್ ಆಫರ್
ಇದನ್ನೂ ಓದಿ: ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತ; ಮೂವರೂ ಸಾವು
( BESCOM says this Areas of Bengaluru will Face Power Cut till July 17)