AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಭಾರೀ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ನೀರುಪಾಲು; ರೈತರಲ್ಲಿ ಹೆಚ್ಚಿದ ಆತಂಕ

ಈಗಾಗಲೇ ಕೆಲವು ರೈತರ ಹೊಲಗಳಲ್ಲಿನ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಲಾರಂಬಿಸಿದ್ದು, ಇನ್ನಷ್ಟು ಮೆಳೆಯಾದರೆ ಆ ಬೆಳೆ ಹಾಳಾಗುತ್ತದೆ. ಜಿಲ್ಲೆಯಲ್ಲಿ ವಾಡಿಕೆಗಿಂತ 75 ರಷ್ಟು ಹೆಚ್ಚು ಮಳೆಯಾಗಿದ್ದು, ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಅತೀ ಹೆಚ್ಚು ಮೆಳೆಯಾಗಿದೆ. ಔರಾದ್ ತಾಲೂಕಿನ ಕೆಲವು ರೈತರ ಬೆಳೆಗಳಲ್ಲಿ ನೀರು ನಿಂತು ಹಾಳಾದರೆ ಇನ್ನೂ ಕೆಲವು ಬೆಳೆಗಳು ಜೋರಾಗಿ ಮಳೆ ಸುರಿದ ರಭಸಕ್ಕೆ ಬೆಳೆ ಕೊಚ್ಚುಕೊಂಡು ಹೋಗಿ ಹಾಳಾಗಿದೆ.

ಬೀದರ್​: ಭಾರೀ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ನೀರುಪಾಲು; ರೈತರಲ್ಲಿ ಹೆಚ್ಚಿದ ಆತಂಕ
ಭಾರೀ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ನೀರುಪಾಲು
TV9 Web
| Updated By: preethi shettigar|

Updated on: Jul 13, 2021 | 1:20 PM

Share

ಬೀದರ್: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮಳೆಯಾಗುತ್ತಿದ್ದ ಔರಾದ್ ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದೀಗ ಸತತವಾಗಿ ಸರಿಯುತ್ತಿರುವ ಮಳೆಯಿಂದ ಹೊಲದಲ್ಲಿ ನೀರು ನಿಂತಿದೆ. ಅಲ್ಲದೆ ರೈತರು ಈ ಬಾರಿ ಸೊಯಾಬಿನ್ ಬೆಳೆಗೆ ಮಾತ್ರ ವಿಮೆ ಮಾಡಿಸಿದ್ದು, ಹೆಸರು, ಉದ್ದು ಬೆಳೆಗಳಿಗೆ ವಿಮೆ ಮಾಡಿಸಿಲ್ಲ. ಹೀಗಾಗಿ ಈ ಭಾಗದ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಬೀದರ್ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಮುಂಗಾರು ಹಂಗಾಮಿನ ಅಲ್ಪಾವಧಿ ಬೆಳೆಗಳಿಗೆ ಕುತ್ತಾಗಿ ಪರಿಣಮಿಸಿದೆ. ಇನ್ನಷ್ಟು ಮಳೆಯಾದರೆ ಅಪಾರ ಪ್ರಮಾಣದ ಬೆಳೆಗಳು ನೀರು ಪಾಲಾಗುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಕಳೆದ ಮೂರು ದಿನದ ಅವಧಿಯಲ್ಲಿ 45 ಮಿಮಿ ಮಳೆಯಾಗಿದ್ದು, ಆ ಮೂಲಕ ಸರಾಸರಿಗಿಂತ ಶೇಕಡಾ 3 ರಷ್ಟು ಹೆಚ್ಚು ಮಳೆಯಾಗಿದೆ.

ಅಲ್ಲಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ತಗ್ಗುಪ್ರದೇಶದ ಜಮೀನುಗಳಲ್ಲಿ ನೀರು ನಿಂತುಕೊಂಡಿದ್ದು, ಅಲ್ಪಾವಧಿಯ ಪ್ರಮುಖ ಬೆಳೆಗಳಾದ ಉದ್ದು, ಸೋಯಾ, ಹೆಸರು ಬೆಳೆಗೆ ಕುತ್ತು ತಂದಿದೆ. ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ಜಮೀನಿನಲ್ಲಿ ತೇವಾಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದೆ. ಇನ್ನೂ ಭಾರಿ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿದ ಪರಿಣಾಮ ಹಳ್ಳದ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಬೆಳೆಗಳೆಲ್ಲಾ ಹಾಳಾಗಿದ್ದು, ನಮಗೆ ಪರಿಹಾರ ಕೊಡಿ ಎಂದು ಔರಾದ್ ತಾಲೂಕಿನ ನಾಗೂರು ಗ್ರಾಮದ ರೈತ ಸಂತೋಷ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈ ಸಲ ಮುಂಗಾರು ಮಳೆ ಚುರುಕಾಗಿದೆ. ಜೂನ್ ಆರಂಭದಿಂದಲೂ ಉತ್ತಮ ಮಳೆ ಆಗುತ್ತಿದ್ದುದ್ದರಿಂದ ಮುಂಗಾರು ಬಿತ್ತನೆ ಸಕಾಲಕ್ಕೆ ಆಗಿದೆ. ಪ್ರಸಕ್ತ ಹಂಗಾಮಿನಲ್ಲಿ 3.70 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಇದರಲ್ಲಿ ಶೇಕಡಾ 95 ರಷ್ಟು ಸಾಧನೆಯಾಗಿದೆ. ಮುಂಗಾರಿನ ಅರ್ಧದಷ್ಟು ಕ್ಷೇತ್ರದಲ್ಲಿ 1.85 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡುವ ಮೂಲಕ ರೈತರು ದಾಖಲೆ ಮಾಡಿದ್ದಾರೆ. ರೈತರು ಈಗ ಬಿತ್ತನೆ ಮಾಡಿ 20 ದಿನಗಳಾಗಿವೆ ಅಷ್ಟೇ ಈ ಹಂತದಲ್ಲಿ ಮಳೆ ಜಾಸ್ತಿಯಾದರೆ ಬೇರುಗಳ ಉಸಿರಾಟಕ್ಕೆ ತೊಂದರೆಯಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತವೆ ಎಂದು ಕೃಷಿ ನಿರ್ದೇಶಕರಾದ ತಾರಾಮಣಿ ಜಂಟಿ ಹೇಳಿದ್ದಾರೆ.

ಈಗಾಗಲೇ ಕೆಲವು ರೈತರ ಹೊಲಗಳಲ್ಲಿನ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಲಾರಂಬಿಸಿದ್ದು, ಇನ್ನಷ್ಟು ಮೆಳೆಯಾದರೆ ಆ ಬೆಳೆ ಹಾಳಾಗುತ್ತದೆ. ಜಿಲ್ಲೆಯಲ್ಲಿ ವಾಡಿಕೆಗಿಂತ 75 ರಷ್ಟು ಹೆಚ್ಚು ಮಳೆಯಾಗಿದ್ದು, ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಅತೀ ಹೆಚ್ಚು ಮೆಳೆಯಾಗಿದೆ. ಔರಾದ್ ತಾಲೂಕಿನ ಕೆಲವು ರೈತರ ಬೆಳೆಗಳಲ್ಲಿ ನೀರು ನಿಂತು ಹಾಳಾದರೆ ಇನ್ನೂ ಕೆಲವು ಬೆಳೆಗಳು ಜೋರಾಗಿ ಮಳೆ ಸುರಿದ ರಭಸಕ್ಕೆ ಬೆಳೆ ಕೊಚ್ಚುಕೊಂಡು ಹೋಗಿ ಹಾಳಾಗಿದೆ. ಒಂದು ಎಕರೆಗೆ ಕನಿಷ್ಠ ಅಂದರೂ 5 ರಿಂದ 6 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಬಿತ್ತಿದ ಬೆಳೆ ಹಾಳಾಗುವ ಭೀತಿ ರೈತರನ್ನು ಸದ್ಯ ಕಾಡುತ್ತಿದೆ.

ರೈತರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಇನ್ನು ಕೆಲವರು ಬ್ಯಾಂಕ್​ಗಳಿಂದ ಸಾಲ ಮಾಡಿ ಉದ್ದು, ಸೋಯಾ, ಹೆಸರು ಬಿತ್ತನೆ ಮಾಡಿದ್ದರು. ಆದರೆ ಬರಸಿಡಿಲಿನಂತೆ ಬಂದ ಮಳೆ ಇಡೀ ಹೊಲವನ್ನು ಗುಡಿಸಿ ಗುಂಡಾತರ ಮಾಡಿದೆ. ಬೀದರ್​ ಜಿಲ್ಲೆಯಲ್ಲಿ ಪದೇ ಪದೇ ಬರಗಾಲ ಎದುರಾಗುತ್ತದೆ. ಆದರೆ ಈ ವರ್ಷ ಸಕಾಲಕ್ಕೆ ಉತ್ತಮವಾದ ಮಳೆಯಾಗಿದ್ದು, ರೈತರು ಬಿತ್ತಿದ ಬೆಳೆಯೂ ಕೂಡಾ ಹುಲುಸಾಗಿ ಬೆಳೆದು ರೈತನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಆದರೆ ಆಕಾಲಿಕವಾಗಿ ಸುರಿದ ಮಳೆಗೆ ಫಸಲೆಲ್ಲ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಇದನ್ನೂಓದಿ: ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ಚಿಕ್ಕಬಳ್ಳಾಪುರ ರೈತರಲ್ಲಿ ಹೆಚ್ಚಿದ ಆತಂಕ

ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು