AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗೃಹಿಣಿ ಬಲಿ; ಇಬ್ಬರು ಪುಟಾಣಿ ಮಕ್ಕಳು ಅನಾಥ

ಮನೆ ಬಾಗಿಲು ತೆರೆಯುವ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಇನ್ನೊರ್ವ ಮಹಿಳೆ ಪಾರಾಗಿದ್ದಾರೆ. ಗೃಹಿಣಿ ಸಾವಿನಿಂದ ಇಬ್ಬರು ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ,..

ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗೃಹಿಣಿ ಬಲಿ; ಇಬ್ಬರು ಪುಟಾಣಿ ಮಕ್ಕಳು ಅನಾಥ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jul 08, 2021 | 12:50 PM

Share

ಗದಗ: ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗೃಹಿಣಿ ಬಲಿಯಾದ ಘಟನೆ ಗದಗದ ಓಕಲಗೇರಿಯಲ್ಲಿ ನಡೆದಿದೆ. ಹಾಗೂ ಮತ್ತೊಂದೆಡೆ ಭಾರಿ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿ ರೈತ ಮೃತಪಟ್ಟಿದ್ದಾರೆ. ಗದಗದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಮೃತಪಟ್ಟ ವ್ಯಕ್ತಿ ಯಶೋಧಾ ಶಿಂಧೆ(23).

ಮನೆ ಬಾಗಿಲು ತೆರೆಯುವ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಇನ್ನೊರ್ವ ಮಹಿಳೆ ಪಾರಾಗಿದ್ದಾರೆ. ಗೃಹಿಣಿ ಸಾವಿನಿಂದ ಇಬ್ಬರು ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಮತ್ತೊಂದೆಡೆ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಕುರುತ್ತಹಳ್ಳಿ ಸುತ್ತಮುತ್ತ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಅವಘಡವೊಂದು ಸಂಭವಿಸಿದೆ. ಭಾರಿ ಮಳೆಗೆ ಕುರುತ್ತಹಳ್ಳಿ ಬಳಿ ಹಳ್ಳದಲ್ಲಿ ರೈತ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಬಸಂತರಾಯ ಅಂಬಾಗೋಳ(55)ಗಾಗಿ ಹಳ್ಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಹಳ್ಳದ ಆಚೆ ಜಮೀನಿಗೆ ತೆರಳಿದ್ದ ರೈತ ವಾಪಸ್ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಆಲಮೇಲ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?