ಕೊಪ್ಪಳದಲ್ಲಿ ಸಹೋದರಿಯರಿಗೆ ಸಿಗುತ್ತಿಲ್ಲ ಆನ್​ಲೈನ್​ ಶಿಕ್ಷಣ; ಮೊಬೈಲ್​ ಕೊಡಿಸಿ ಅಂತ ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ನಿಂತ ವಿದ್ಯಾರ್ಥಿಗಳು

ಗಿರಿಜಾ ಹಾಗೂ ಪ್ರೀತಿ ಎಂಬ ಸಹೋದರಿಯರ ಬಳಿ ಮೊಬೈಲ್ ಇಲ್ಲ. ಹೀಗಾಗಿ ಮೊಬೈಲ್ ಕೊಡಿಸುವಂತೆ ಭಿತ್ತಿ ಪತ್ರ ಹಿಡಿದುಕೊಂಡು ನಿಂತಿದ್ದಾರೆ. ಕೊಪ್ಪಳದ ಗಾಂಧಿ ನಗರ ನಿವಾಸಿಗಳಾದ ಗಿರಿಜಾ ಮತ್ತು ಪ್ರೀತಿ ಕಳೆದ ಹತ್ತು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ.

ಕೊಪ್ಪಳದಲ್ಲಿ ಸಹೋದರಿಯರಿಗೆ ಸಿಗುತ್ತಿಲ್ಲ ಆನ್​ಲೈನ್​ ಶಿಕ್ಷಣ; ಮೊಬೈಲ್​ ಕೊಡಿಸಿ ಅಂತ ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ನಿಂತ ವಿದ್ಯಾರ್ಥಿಗಳು
ಮೊಬೈಲ್ ಕೊಡಿಸಿ ಅಂತ ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ನಿಂತಿರುವ ಸಹೋದರಿಯರು
Follow us
TV9 Web
| Updated By: sandhya thejappa

Updated on:Jul 08, 2021 | 12:19 PM

ಕೊಪ್ಪಳ: ಮಹಾಮಾರಿ ಕೊರೊನಾದಿಂದಾದ ಸಮಸ್ಯೆ ಒಂದೆರಡಲ್ಲ. ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತ್ತು. ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ರಾಜ್ಯ ಅನ್​ಲಾಕ್​ ಆಗಿದೆ. ಆದರೆ ಬಂದ್ ಆಗಿದ್ದ ಶಾಲೆ, ಕಾಲೇಜುಗಳು ಇನ್ನು ತೆರೆದಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿ ಆನ್​ಲೈನ್​ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಆದರೆ ಜಿಲ್ಲೆಯ ಇಬ್ಬರು ಸಹೋದರಿಯರಿಗೆ ಮೊಬೈಲ್ ಇಲ್ಲದ ಕಾರಣ ಆನ್​ಲೈನ್​ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಮೊಬೈಲ್ ಕೊಡಿಸುವಂತೆ ವಿದ್ಯಾರ್ಥಿಗಳು ಭಿತ್ತಿ ಪತ್ರ ಹಿಡಿದು ನಿಂತಿದ್ದಾರೆ.

ಗಿರಿಜಾ ಹಾಗೂ ಪ್ರೀತಿ ಎಂಬ ಸಹೋದರಿಯರ ಬಳಿ ಮೊಬೈಲ್ ಇಲ್ಲ. ಹೀಗಾಗಿ ಮೊಬೈಲ್ ಕೊಡಿಸುವಂತೆ ಭಿತ್ತಿ ಪತ್ರ ಹಿಡಿದುಕೊಂಡು ನಿಂತಿದ್ದಾರೆ. ಕೊಪ್ಪಳದ ಗಾಂಧಿ ನಗರ ನಿವಾಸಿಗಳಾದ ಗಿರಿಜಾ ಮತ್ತು ಪ್ರೀತಿ ಕಳೆದ ಹತ್ತು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ. ಗಿರಿಜಾ ಎಂಟನೇ ತರಗತಿ ಓದುತ್ತಿದ್ದಾಳೆ. ಪ್ರೀತಿ ಹತ್ತನೆ ತರಗತಿ ಓದುತ್ತಿದ್ದಾಳೆ. ತಾಯಿ ಮಲ್ಲಮ್ಮ ನಿಂಬೆಹಣ್ಣನ್ನು ಮಾರಿ ಮಕ್ಕಳನ್ನ ಸಾಕುತ್ತಿದ್ದಾಳೆ. ಮೊಬೈಲ್ ತಗೆದುಕೊಳ್ಳಲು ಸಹೋದರಿಯರ ಬಳಿ ಹಣ ಇಲ್ಲದ ಕಾರಣ ಆನ್​ಲೈನ್​ ಪಾಠ ಕೇಳಲು ಪರದಾಡುತ್ತಿದ್ದಾರೆ.

ಆನ್​ಲೈನ್​ ಪಾಠ ಕೇಳಲು ಪರದಾಡುತ್ತಿರುವ ಸಹೋದರಿಯರು, ಯಾರಾದರೂ ನಮಗೆ ಮೊಬೈಲ್ ಕೊಡಿಸಿ ಅಂತ ಅಂಗಲಾಚುತ್ತಿದ್ದಾರೆ. ಭಿತ್ತಿ ಪತ್ರ ಹಿಡಿದುಕೊಂಡು ಗದಗ – ಹೊಸಪೇಟೆ ಹೆದ್ದಾರಿಯಲ್ಲಿ ನಿಂತ ವಿದ್ಯಾರ್ಥಿಗಳು ಮೊಬೈಲ್​ಗಾಗಿ ಬೇಡುತ್ತಿದ್ದಾರೆ.

ಇದನ್ನೂ ಓದಿ

ಅಪ್ಪ ಮಾಧವರಾವ್​ ಸಿಂಧಿಯಾ ನಿಭಾಯಿಸಿದ್ದ ನಾಗರಿಕ ವಿಮಾನಯಾನ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ; ಅಂದು ಅವರು ವಿಫಲರಾಗಿದ್ದರು..

ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರ ಎಸೆದ ಮಗ.. ಹೀನಾಯ ಕೃತ್ಯ ಮೊಬೈಲ್​ನಲ್ಲಿ ಸೆರೆ

(sisters are demanding a mobile phone to get online education in Koppal)

Published On - 12:17 pm, Thu, 8 July 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು