ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರ ಎಸೆದ ಮಗ.. ಹೀನಾಯ ಕೃತ್ಯ ಮೊಬೈಲ್​ನಲ್ಲಿ ಸೆರೆ

ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರ ಎಸೆದ ಮಗ.. ಹೀನಾಯ ಕೃತ್ಯ ಮೊಬೈಲ್​ನಲ್ಲಿ ಸೆರೆ
ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರ ಎಸೆದ ಮಗ
Follow us
TV9 Web
| Updated By: ಆಯೇಷಾ ಬಾನು

Updated on:Jul 08, 2021 | 11:50 AM

ರಾಮನಗರ: ಮಕ್ಕಳು ಹುಟ್ಟಿದಾಗಿನಿಂದ ಅವರ ಬೇಕು ಬೇಡಗಳನ್ನು ಅರಿತು ಅವರಿಗೆ ಒಳ್ಳೆ ಭವಿಷ್ಯ ರೂಪಿಸಲು ಪೋಷಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದ್ರೆ ಈ ಕಷ್ಟಕ್ಕೆ ಅವರು ಬಯಸುವ ಪ್ರತಿ ಫಲ ಕೇವಲ ಆಸರೆ ಮತ್ತು ಪ್ರೀತಿ. ವಯಸ್ಸಾದ ಮೇಲೆ ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳತ್ತಾರೆ ಎಂದು ಜೀವನ ಪೂರ್ತಿ ಅವರಿಗಾಗಿ ದುಡಿಯುತ್ತಾರೆ ಆದ್ರೆ ಅದೇ ಮಕ್ಕಳು ದೊಡ್ಡವರಾದ ಮೇಲೆ ತನ್ನ ತಂದೆ-ತಾಯಿಯನ್ನೇ ಮನೆಯಿಂದ ಆಚೆ ಹಾಕಿ ಅವರಿಗೆ ನರಕಯಾತನೆ ನೀಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಆಸ್ತಿಗಾಗಿ ತನ್ನ ತಂದೆಯನ್ನು ಹೊಡೆದು ವಯಸ್ಸಾದವರೂ ಎಂಬ ಕನಿಯರವೂ ಇಲ್ಲದೆ ಮನೆಯಿಂದ ಆಚೆ ಎಸೆದಿದ್ದಾನೆ.

ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಚಾಲಕ ಕುಮಾರ್ ಎಂಬಾತ ತಂದೆಯ ಜೊತೆ ಹೀನಾಯವಾಗಿ ವರ್ತಿಸಿದ್ದಾನೆ. ಮಗ ಕುಮಾರ್ ತಂದೆ ತಿಮ್ಮಯ್ಯನನ್ನ ಮನೆಯಿಂದ ಹೊರಹಾಕಿದ ಕ್ರೂರಿ ಮಗನ ಕೃತ್ಯದ ದೃಶ್ಯ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದೆ. ಮನೆಯನ್ನ ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ‌ ನಿರಾಕರಿಸಿದ್ದಕ್ಕೆ ಮನೆಯಿಂದ ಎತ್ತಿ ಎಸೆದಿದ್ದಾನೆ. ಸದ್ಯ ಇದೀಗ ತಿಮ್ಮಯ್ಯ ಬೇರೆಯವರ ಆಶ್ರಯದಲ್ಲಿದ್ದಾರೆ. ಕೂಲಿ ನಾಲಿ ಮಾಡಿ ಮಗನನ್ನ ಸಾಕಿ ಬೆಳೆಸಿ ಕೆಎಸ್​ಆರ್​ಟಿಸಿಯಲ್ಲಿ ಉದ್ಯೋಗವನ್ನ ಕೊಡಿಸಿದ್ದಕ್ಕೆ ಮಗ ಈ ರೀತಿ ಪ್ರತಿ ಫಲವನ್ನು ನೀಡುತ್ತಿದ್ದಾನೆ. ತಂದೆಯನ್ನೇ ಹೊಡೆದು ಬಡೆದು ಹಿಂಸಿಸುತ್ತಿದ್ದಾನೆ.

ಕುಮಾರ್, ರಾಮನಗರದಲ್ಲಿ ಕೆಎಸ್​ಆರ್​ಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಕೈತುಂಬ ಸಂಬಳ ಬರುತ್ತಿದ್ದರು, ಚಿಕ್ಕದಾದ ಮನೆಗಾಗಿ ಸ್ವಂತ ಅಪ್ಪನನ್ನೇ ಮನೆಯಿಂದ ಎಸೆದಿದ್ದಾನೆ. ಹತ್ತಾರು ವರ್ಷ ಸಾಕಿ ಸಲುಹಿದ ತಂದೆಯ ಜೊತೆ ಮೃಗದ ರೀತಿಯಲ್ಲಿ ನಡೆದುಕೊಂಡಿದ್ದಾನೆ. ರಾಮನಗರ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ತಿಮಯ್ಯ ಎಂಬ ವಯಸ್ಸಾದ ವ್ಯಕ್ತಿಯ ಮನೆಯಿದೆ. ಈ ಮನೆಯಲ್ಲಿ ತಿಮ್ಮಯ್ಯ ವಾಸವಾಗಿದ್ದಾರೆ. ಆದ್ರೆ ಈ ಮನೆಯನ್ನ ತನ್ನ ಹೆಸರಿಗೆ ಬರೆದುಕೊಂಡು ಕಳೆದ ಹಲವು ವರ್ಷಗಳಿಂದ ಕುಮಾರ್ ಪೀಡಿಸಿದ್ದಾನೆ. ಇದಕ್ಕೆ ಒಪ್ಪದೆ ಇದ್ದಿದಕ್ಕೆ ತಂದೆ ತಿಮ್ಮಯ್ಯನನ್ನ ಹಲ್ಲೆ ಮಾಡಿ, ಮನೆಯ ಒಳಗೆ ಇದ್ದ ತಿಮ್ಮಯ್ಯನನ್ನ ಕೈಕಾಲು ಹಿಡಿದು ಎಸೆದಿದ್ದಾನೆ. ಮಗನ ವರ್ತನೆಯಿಂದ ತಿಮ್ಮಯ್ಯ ನರಳಾಟ ನಡೆಸಿದ್ದಾರೆ. ಇಷ್ಟಾದರೂ ಕುಮಾರ್ ಮನಸ್ಸು ಕರೆಗಿಲ್ಲ.

ತಿಮ್ಮಯ್ಯರಿಗೆ ಮೂರು ಜನ ಗಂಡು ಮಕ್ಕಳು. ಇನ್ನಿಬ್ಬರು ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಸ್ವಯರ್ಜಿತ ಆಸ್ತಿಯಾದ ತನ್ನ ಮನೆಯಲ್ಲಿ ತಿಮ್ಮಯ್ಯ ವಾಸವಾಗಿದ್ದರು. ಮನೆಯಲ್ಲಿಯೇ ಜೊತೆಗೆ ಇದ್ದ ಕುಮಾರ್, ಮನೆಯನ್ನ ತನ್ನ ಹೆಸರಿಗೆ ಬರೆದುಕೊಡುವಂತೆ ಕಳೆದ ಹಲವು ವರ್ಷಗಳಿಂದ ಪೀಡಿಸಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಸಾಕಷ್ಟು ಬಾರಿ ಕಿರುಕುಳ ನೀಡಿದ್ದಾನೆ. ಈ ವಿಚಾರವಾಗಿ ಸಾಕಷ್ಟು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಯಾವುದೇ ಕ್ರಮವನ್ನ ತೆಗೆದುಕೊಳ್ಳದೇ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ. ಹೀಗಾಗಿ ತಿಮ್ಮಯ್ಯ ಕಣ್ಣೀರು ಇಡುತ್ತಿದ್ದಾರೆ. ಕೂರಿ ಕುಮಾರನ ಕಾಟವನ್ನ ತಡೆದಲಾರದೇ ಇನ್ನೊಬ್ಬ ಮಗನ ಮನೆಗೆ ಬಂದು ಆಶ್ರಯ ಪಡೆದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಮನಗರ ಎಸ್ ಪಿ, ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಾರೆ.

ಒಟ್ಟಾರೆ ಆಸ್ತಿಗಾಗಿ ತಂದೆಯನ್ನ ಪಾಪಿ ಮಗ ಮನೆಯಿಂದ ಹೊರ ಎಸೆದಿದ್ದಾನೆ. ಮಗನ ವರ್ತನೆಗೆ ಗ್ರಾಮದಲ್ಲೂ ಕೂಡ ಜನರು ಚೀ ತೂ ಅನ್ನುತ್ತಿದ್ದಾರೆ. ಈ ಸಂಬಂಧ ರಾಮನಗರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.

Son assaults father

ತಿಮ್ಮಯ್ಯ

ಇದನ್ನೂ ಓದಿ: ಆಸ್ತಿ ವಿವಾದ, ಸಾಲಬಾಧೆ: ಬೆಂಗಳೂರಿನ ತಾಯಿ-ಮಗಳು ನರಸಾಪುರ ಕೆರೆಗೆ ಜಿಗಿದು ಆತ್ಮಹತ್ಯೆ

Published On - 11:16 am, Thu, 8 July 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್