ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಕುಮಾರಸ್ವಾಮಿಯನ್ನು ಅಪಹಾಸ್ಯ ಮಾಡಿದ ಸುಮಲತಾ ಬೆಂಬಲಿಗರು

ವೈರಲ್​ ಆಗಿರುವ ಫೋಟೋದಲ್ಲಿ ಅಂಬರೀಶ್, ರಾಕ್​ಲೈನ್​ ವೆಂಕಟೇಶ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರಿದ್ದಾರೆ. ಅಂಬರೀಶ್ ತಮ್ಮ ಎಂದಿನ ಗತ್ತಿನಲ್ಲೇ ಜೇಬಿನೊಳಗೆ ಕೈ ಇಟ್ಟುಕೊಂಡು ಕ್ಯಾಮೆರಾ ಕಡೆ ತೀಕ್ಷ್ಣ ನೋಟ ಬೀರಿದ್ದಾರೆ. ಆದರೆ, ಕುಮಾರಸ್ವಾಮಿ ಮಾತ್ರ ವಿನಯದಿಂದ ಕೈಕಟ್ಟಿಕೊಂಡು ನಿಂತು ಅಂಬರೀಶ್ ಅವರನ್ನೇ ನೋಡುತ್ತಾ ನಿಂತಿದ್ದಾರೆ.

ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಕುಮಾರಸ್ವಾಮಿಯನ್ನು ಅಪಹಾಸ್ಯ ಮಾಡಿದ ಸುಮಲತಾ ಬೆಂಬಲಿಗರು
ಅಂಬರೀಶ್ ಎದುರು ಕೈಕಟ್ಟಿ ನಿಂತ ಹೆಚ್​.ಡಿ.ಕುಮಾರಸ್ವಾಮಿ
Follow us
TV9 Web
| Updated By: Skanda

Updated on: Jul 08, 2021 | 1:20 PM

ಮಂಡ್ಯ: ಕೆಆರ್​ಎಸ್​ ಅಣೆಕಟ್ಟು ಬಿರುಕು ವಿವಾದಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ಸಾಮಾಜಿಕ ಜಾಲತಾಣಗಳಲ್ಲೂ ಕಾವು ಪಡೆದಿದೆ. ಅಂಬರೀಶ್ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆಯ ಬೆನ್ನಲ್ಲೇ ಅದನ್ನು ಸಾಕ್ಷಿ ಸಮೇತ ಸಾಬೀತುಪಡಿಸುತ್ತಿರುವ ಸುಮಲತಾ ಅಂಬರೀಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಫೋಟೋ ಒಂದನ್ನು ವೈರಲ್​ ಮಾಡುತ್ತಿದ್ದಾರೆ. ಸುಮಲತಾ ಬೆಂಬಲಿಗರ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಫೋಟೋವನ್ನು ಹರಿಬಿಡಲಾಗಿದ್ದು, ಕುಮಾರಸ್ವಾಮಿಯವರನ್ನು ಅಪಹಾಸ್ಯ ಮಾಡಲಾಗುತ್ತಿದೆ.

ಅಂಬರೀಶ್ ಮುಂದೆ ಹೆಚ್.ಡಿ.ಕುಮಾರಸ್ವಾಮಿ ಕೈಕಟ್ಟಿಕೊಂಡು ನಿಂತ ಫೋಟೋವನ್ನು ವೈರಲ್ ಮಾಡಲಾಗುತ್ತಿದ್ದು, ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಎಂದು ಅಭಿಮಾನಿಗಳು ಹೆಚ್​ಡಿಕೆಯವರ ಕಾಲೆಳೆದಿದ್ದಾರೆ. ಅಲ್ಲದೇ, ತರಹೇವಾರಿ ತಲೆಬರಹಗಳನ್ನು ನೀಡುವ ಮೂಲಕ ಕುಮಾರಸ್ವಾಮಿಯವರು ಅಂಬರೀಶ್​ ಎದುರು ಕೈಕಟ್ಟಿ ನಿಲ್ಲುತ್ತಿದ್ದರು. ಆದರೆ, ಈಗ ಅವರ ಕಾಲಾನಂತರ ಜೋರು ದನಿಯಲ್ಲಿ ಮಾತನಾಡುವ ಧೈರ್ಯ ಬಂದಿದೆ ಎಂದು ಜರಿದಿದ್ದಾರೆ.

ವೈರಲ್​ ಆಗಿರುವ ಫೋಟೋದಲ್ಲಿ ಅಂಬರೀಶ್, ರಾಕ್​ಲೈನ್​ ವೆಂಕಟೇಶ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರಿದ್ದಾರೆ. ಅಂಬರೀಶ್ ತಮ್ಮ ಎಂದಿನ ಗತ್ತಿನಲ್ಲೇ ಜೇಬಿನೊಳಗೆ ಕೈ ಇಟ್ಟುಕೊಂಡು ಕ್ಯಾಮೆರಾ ಕಡೆ ತೀಕ್ಷ್ಣ ನೋಟ ಬೀರಿದ್ದಾರೆ. ಆದರೆ, ಕುಮಾರಸ್ವಾಮಿ ಮಾತ್ರ ವಿನಯದಿಂದ ಕೈಕಟ್ಟಿಕೊಂಡು ನಿಂತು ಅಂಬರೀಶ್ ಅವರನ್ನೇ ನೋಡುತ್ತಾ ನಿಂತಿದ್ದಾರೆ. ಅತ್ಯಂತ ಹಳೆಯ ಫೋಟೋ ಇದಾಗಿದ್ದು, ಸುಮಲತಾ ನೀಡಿರುವ ಹೇಳಿಕೆಗೆ ಇದು ಉತ್ತಮ ಉದಾಹರಣೆಯಂತಿರುವ ಕಾರಣ ಬೆಂಬಲಿಗರು ಇದನ್ನು ಎಲ್ಲೆಡೆ ಹರಿಬಿಟ್ಟಿದ್ದಾರೆ.

ತಿರುಗೇಟು ಕೊಟ್ಟ ಹೆಚ್​ಡಿಕೆ ಬೆಂಬಲಿಗರು ಇತ್ತ ಈ ಫೋಟೋ ಮೂಲಕ ಸುಮಲತಾ ಬೆಂಬಲಿಗರು ಜೆಡಿಎಸ್​ ನಾಯಕರಿಗೆ ತಿರುಗೇಟು ಕೊಡುತ್ತಿದ್ದರೆ ಅತ್ತ ಲಿಂಗ ಸಿನಿಮಾದ ಖಳನಾಯಕನಿಗೆ ಸಂಸದೆ ಸುಮಲತಾರನ್ನು ಹೋಲಿಕೆ ಮಾಡಿ ಹೆಚ್​.ಡಿ.ಕುಮಾರಸ್ವಾಮಿ ಬೆಂಬಲಿಗರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಕುಮಾರ ಪಡೆ ಹೆಸರಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಫೋಸ್ಟ್ ತೇಲಿಬಿಡಲಾಗಿದ್ದು, ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಲಿಂಗ ಚಿತ್ರದ ಖಳನಾಯಕ ಕೂಡ ಸಂಸದ. ಅದರ ಕತೆಯೂ ಡ್ಯಾಂ ಸುತ್ತಲೂ ನಡೆಯುವುದಾಗಿದ್ದು ಇದರಂತೆಯೇ ಇದೆ ಎಂದು ಗೇಲಿ ಮಾಡಿದ್ದಾರೆ.

SUMALATHA VS HDK

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜಟಾಪಟಿ

ಸದರಿ ವಿವಾದಕ್ಕೆ ಸುಮಲತಾರ ಆಪ್ತ ರಾಕ್​ಲೈನ್ ವೆಂಕಟೇಶ್​ರನ್ನೂ ಎಳೆದುತಂದ ಹೆಚ್​.ಡಿ.ಕುಮಾರಸ್ವಾಮಿ ಬೆಂಬಲಿಗರು, ಲಿಂಗ ಸಿನಿಮಾದಲ್ಲಿ 40 ಸಾವಿರ ಕೋಟಿ ರೂಪಾಯಿ ಪ್ರಾಜೆಕ್ಟ್​ ಶುರು ಮಾಡಿಸುವ ಸಂಸದ (ಖಳನಾಯಕ) ಅದರಲ್ಲಿ ಶೇ.20 (800 ಕೋಟಿ ರೂಪಾಯಿ) ಕಮಿಷನ್ ಹೊಡೆಯೋದಕ್ಕಾಗಿ ಡ್ಯಾಂಗೆ ಬಾಂಬ್ ಇಟ್ಟು ಬಿರುಕು ಮೂಡಿಸೋ ಪ್ರಯತ್ನ ಮಾಡುತ್ತಾನೆ. ಆ ಸಿನಿಮಾದ ನಿರ್ಮಾಪಕ ಈ ಸಂಸದರ ಪರಮ ಆಪ್ತ. ಈಗ ಸಂಸದರ ಮೂಲಕ ಆ ಸಿನಿಮಾ ಕತೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆಯಾ ಎಂದು ತನಿಖೆ ನಡೆಸಿದರೆ ಗೊತ್ತಾಗುತ್ತದೆ ಎಂದು ಸುಮಲತಾರಿಗೆ ಟಾಂಗ್ ನೀಡಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಹಾಗೂ ಹೆಚ್​.ಡಿ.ಕುಮಾರಸ್ವಾಮಿ ನಡುವಿನ ಸಮರ ಅಭಿಮಾನಿಗಳ ವಲಯಕ್ಕೂ ವಿಸ್ತರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಾದ ವಿವಾದಗಳು ಜೋರಾಗಲಾರಂಭಿಸಿವೆ.

ಇದನ್ನೂ ಓದಿ: ಕುತಂತ್ರಿಗಳು ನಮ್ಮ ಕುಟುಂಬ ಒಡೆಯೋಕೆ ಸಾಧ್ಯವಿಲ್ಲ; ನನ್ನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುವೆ: ಸುಮಲತಾ ವಿರುದ್ಧ ಕುಮಾರಸ್ವಾಮಿ ಗರಂ 

ಕೆಆರ್​ಎಸ್​ನಲ್ಲಿ ಬಿರುಕಿಲ್ಲ ಎಂದು ಇಂಜಿನಿಯರ್​ಗಳೇ ಹೇಳಿದರೂ ಜಗ್ಗದ ಸುಮಲತಾ; ಅಂದು ಟೀಕಿಸಿದ್ದ ಜೆಡಿಎಸ್​ ನಾಯಕರ ವಿರುದ್ಧ ತನಿಖೆ ಅಸ್ತ್ರ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ