ಕನಕದಾಸ ವೃತ್ತ ನಿರ್ಮಾಣ ವಿರೋಧಿಸಿ ಸಂಸದ ಕರಡಿ ಸಂಗಣ್ಣ ಪತ್ರ; ಸಂಗಣ್ಣ ಕ್ಷಮೆ ಯಾಚನೆಗೆ ಪಟ್ಟು ಹಿಡಿದ ಕುರುಬ ಸಮುದಾಯ
ನಗರ ಸಭೆಯ ವಾಣಿಜ್ಯ ಮಳಿಗೆಯ ಜಾಗವನ್ನು ಅತಿಕ್ರಮಿಸಿಕೊಂಡು ಕನಕದಾಸ ವೃತ್ತ ನಿರ್ಮಾಣ ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಡಿಸಿಗೆ ಕರಡಿ ಸಂಗಣ್ಣ ಪತ್ರ ಬರೆದಿದ್ದಾರೆ.
ಕೊಪ್ಪಳ: ಕನಕದಾಸ ವೃತ್ತ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಕೊಪ್ಪಳ ಬಸ್ ನಿಲ್ದಾಣದ ಮುಂದಿರುವ ಕನಕದಾಸ ವೃತ್ತದ ಸ್ಥಳದಲ್ಲಿದ್ದ ಕಾಂಪ್ಲೆಕ್ಸ್, ಕಟ್ಟೆಯನ್ನು ಕೆಡವಿ ಅಲ್ಲಿ ಕನಕದಾಸ ಮೂರ್ತಿ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಹೀಗಾಗಿ ಇದರ ನಿರ್ಮಾಣಕ್ಕೆ ಹೆಚ್ಚುವರಿ ಜಾಗ ಬಳಕೆಗೆ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಬಗ್ಗೆ ಕೊಪ್ಪಳ ಡಿಸಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಈಗ ಕೊಪ್ಪಳದಲ್ಲಿ ಜಾತಿ ವೈಷಮ್ಯದ ರಾಜಕಾರಣ ಆರಂಭವಾಗಿದೆ.
1988ರಲ್ಲಿ ಆಗಿನ ಸಾರಿಗೆ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸ ವೃತ್ತಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆದ್ರೆ ಇತ್ತೀಚೆಗೆ ಬಹುಕೋಟಿ ವೆಚ್ಚದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದೇ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಯೋಜನೆ ಮಾಡಿಕೊಳ್ಳಲಾಗಿತ್ತು. ಅದರಂತೆಯೇ ವೃತ್ತ ನಿರ್ಮಾಣಕ್ಕೆ ನಗರಸಭೆಗೆ ಸೇರಿದ 20 ವಾಣಿಜ್ಯ ಮಳಿಗೆ ತೆರವು ಮಾಡಲಾಯಿತು. ವಾಣಿಜ್ಯಮಳಿಗೆ ಜಾಗ ಹೆಚ್ಚುವರಿಯಾಗಿ ಬಳಸಿ ಕನಕದಾಸ ಮೂರ್ತಿ ಪ್ರತಿಷ್ಠಾಪಿಸಿ ವೃತ್ತ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಹೆಚ್ಚುವರಿ ಜಾಗ ಬಳಕೆಗೆ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರ ಸಭೆಯ ವಾಣಿಜ್ಯ ಮಳಿಗೆಯ ಜಾಗವನ್ನು ಅತಿಕ್ರಮಿಸಿಕೊಂಡು ಕನಕದಾಸ ವೃತ್ತ ನಿರ್ಮಾಣ ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಡಿಸಿಗೆ ಕರಡಿ ಸಂಗಣ್ಣ ಪತ್ರ ಬರೆದಿದ್ದಾರೆ. ಕರಡಿ ಸಂಗಣ್ಣ ಪತ್ರ ಹಿನ್ನೆಲೆಯಲ್ಲಿ ಕುರುಬ ಸಮುದಾಯ ವಿರೋಧಿಸಿದೆ. ಸಂಗಣ್ಣ ಕುರುಬ ಸಮುದಾಯದ ಕ್ಷಮೆ ಕೇಳುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!