ವಿಜಯಪುರ: ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್‌ ಭೀಮನಗೌಡ ಗುಂಡಿನ ದಾಳಿಗೆ ಬಲಿ

Updated By: Ganapathi Sharma

Updated on: Sep 03, 2025 | 11:59 AM

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ. ಬುಧವಾರ ದೇವರನಿಂಬರಗಿ ಗ್ರಾಮದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್‌ ಭೀಮನಗೌಡ ಮೃತಪಟ್ಟಿದ್ದಾನೆ. ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದ್ದರೊಂದಿಗೆ ವಿಜಯಪುರ ಜನತೆ ಮತ್ತೆ ಬೆಚ್ಚಿಬಿದ್ದಿದೆ. ಘಟನೆಯ ವಿಡಿಯೋ ಇಲ್ಲಿದೆ.

ವಿಜಯಪುರ, ಸೆಪ್ಟೆಂಬರ್ 3: ವಿಜಯಪುರದ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್‌ ಭೀಮನಗೌಡ ಬಿರಾದಾರ್ (45)​ ಮೃತಪಟ್ಟಿದ್ದಾನೆ. ಹೇರ್​ ಕಟಿಂಗ್ ಮಾಡಿಸಿಕೊಳ್ಳುವಾಗ ಕಣ್ಣಿಗೆ ಖಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಲಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಭೀಮನಗೌಡ ಬಿರಾದಾರ್ ಮೃತಪಟ್ಟಿದ್ದಾನೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ