AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಂಜಾ ಡ್ಯಾಂ ನಿರ್ಮಾಣ; 1972ರಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸಿಗದ ಪರಿಹಾರ

ಕಾರಂಜಾ ಡ್ಯಾಂ ನಿರ್ಮಾಣದ ಸಮಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೂ ನ್ಯಾಯಯುತವಾಗಿ ಬರಬೇಕಾದ ಪರಿಹಾರ ಮಾತ್ರ ಸಿಕ್ಕಿಲ್ಲ. ಕಳೆದ ನಾಲ್ಕು ದಶಕದಿಂದ ಹೋರಾಟ ಮಾಡಿದರು ಪರಿಹಾರ ಸಿಗದ ಹಿನ್ನೆಲೆ 28 ಗ್ರಾಮದ ಸಾವಿರಾರು ರೈತರು ಆರಂಭಿಸಿದ ಅಹೋರಾತ್ರಿ ಧರಣಿ 130ನೇ ದಿನಕ್ಕೆ ಕಾಲಿಟ್ಟಿದೆ.

ಕಾರಂಜಾ ಡ್ಯಾಂ ನಿರ್ಮಾಣ; 1972ರಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸಿಗದ ಪರಿಹಾರ
ಭೂಮಿ ಕಳೆದುಕೊಂಡ ರೈತರಿಗೆ ಸಿಗದ ಪರಿಹಾರ; 130ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ
TV9 Web
| Updated By: Rakesh Nayak Manchi|

Updated on:Nov 08, 2022 | 7:46 AM

Share

ಬೀದರ್: ತಾಲೂಕು ಮತ್ತು ಭಾಲ್ಕಿ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 1972 ರಲ್ಲಿ ಬೀದರ್ ಬಳಿ ಕಾರಂಜಾ ಜಲಾಶಯವನ್ನ ನಿರ್ಮಿಸಲಾಗಿತ್ತು. ಜಲಾಶಯ ನಿರ್ಮಾಣದಿಂದಾಗಿ 9 ಹಳ್ಳಿಗಳು ಮುಳುಗಡೆಯಾಗಿ 10 ಸಾವಿರ ಕುಟುಂಬಗಳು ಬೀದಿಗೆ ಬಿದ್ದುವು. 18 ಸಾವಿರ ಎಕರೆ ಬಂಗಾರದ ಬೆಳೆ ಬೆಳೆಯುತ್ತಿದ್ದ 26 ಹಳ್ಳಿಯ ಜನರು ಫವತ್ತಾದ ಭೂಮಿಯನ್ನ ಡ್ಯಾಂ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟರು. ಆದರೆ ಸರಕಾರ ಮಾತ್ರ ಇನ್ನೂವರೆಗೂ ರೈತರಿಗೆ ಕೊಡಬೇಕಾದ ಪರಿಹಾರವನ್ನ ಮಾತ್ರ ಕೊಟ್ಟಿಲ್ಲ. ಕಳೆದ 4 ದಶಕದಿಂದ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ನ್ಯಾಯಯುತವಾಗಿ ರೈತರಿಗೆ ಸಿಗಬೇಕಾಗಿದ್ದ ಪರಿಹಾರ ಮಾತ್ರ ಸಿಗುತ್ತಿಲ್ಲ. ಯಾರದೋ ಸುಃಖಕ್ಕಾಗಿ ಜಮೀನು ಕಳೆದಕೊಂಡು ರೈತರು ಸಾಕಷ್ಟು ಸಲ ಪ್ರತಿಭಟನೆ ರ್ಯಾಲಿ, ರಸ್ತೆ ತಡೆ ಮಾಡಿದಾಗ ನೆಪಕ್ಕೆ ಭೆಟ್ಟಿ ನೀಡಿದ ರಾಜಕಾರಣಿಗಳು ಸೂಕ್ತ ಪರಿಹಾರ ಕೊಡಿಸುವುದಾಗಿ ಪೊಳ್ಳು ಭರವಸೆಯನ್ನ ನೀಡಿದರೇ ಹೊರತು ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡಲಿಲ್ಲ. ಹೀಗಾಗಿ ಕಳೆದ 130 ದಿನದಿಂದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇನ್ನೂ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶವ್ಯಕ್ತ ಪಡಿಸುತ್ತಿರುವ ರೈತರು ಪರಿಹಾರ ಕೊಡುತ್ತೇವೆಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ನಮಗೆ ಇನ್ನೂ ಪರಿಹಾರ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಈ ಹಿಂದೆ 2018ರ ಸಪ್ಟಂಬರ್​ನಲ್ಲಿ 76 ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿದ್ದ ರೈತರು ಆ ಸಮಯದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ರಾಜ್ಯಮಟ್ಟದ ನಾಯಕರುಗಳು ಬಂದು ಹೋದರೇ ಹೊರತು ಯಾವೊಬ್ಬ ರಾಜಕಾರಣಿಯೂ ಕೂಡಾ ರೈತರ ಸಮಸ್ಯೆಯ ಬಗ್ಗೆ ಮತ್ತು ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಮಾತನಾಡಿಲ್ಲ. ಕೆವಲ ಹೆಸರಿಗೆ ಮಾತ್ರ ಭೇಟ್ಟಿ ನಿಡುವ ರಾಜಕಾರಣಿಗಳು ಧರಣಿ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೆವೆಂದು ಹೇಳಿ ಹೋದವರು ಸುಮ್ಮನಾಗಿದ್ದಾರೆ. ಇದು ಸಹಜವಾಗಿಯೇ ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಡ್ಯಾಂನಿಂದ ಭೂಮಿ ಮನೆಗಳನ್ನ ಕಳೆದುಕೊಂಡ ಕುಟುಂಬವನ್ನ ಗುರುತಿಸಿದ ಅಂದಿನ ಸರಕಾರ ಅವರಿಗೆ ಪರಿಹಾರವನ್ನ ಘೋಷಣೆ ಮಾಡಿ ಘೋಷನೆಯಾದ ಪರಿಹಾರದಲ್ಲಿ ಮೊದಲ ಹಂತವಾಗಿ ಅರ್ಧ ಹಣವನ್ನ ಭೂಮಿ ಮನೆಗಳನ್ನು ಕಳೆದುಕೊಂಡ ಕುಟುಂಬಕ್ಕೆ ನೀಡಿತ್ತು. ಆದರೆ ಇನ್ನೂಳಿದ ಹಣವನ್ನ ಮಾತ್ರ ಸರಕಾರ ಇಲ್ಲಿಯವರೆಗೂ ನೀಡಿಲ್ಲ. ಬಾಕಿ ಪರಿಹಾರಕ್ಕಾಗಿ ಮೂರು ದಶಕದಿಂದ ಸುದೀರ್ಘ ಹೋರಾಟ ನಡೆಸುತ್ತಿದ್ದು ಇಂದಿನವರೆಗೂ ನಿಂತಿಲ್ಲ. ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದ ರೈತರು ಸುಸ್ತಾಗಿದ್ದಾರೆಯೇ ಹೊರತು ಪರಿಹಾರ ಸಿಕ್ಕಿಲ್ಲ.

ಇನ್ನೂ ಇದೇ ವೇಳೆಯಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣ ಕಾರ್ಯ ನಡೆದಿತ್ತು. ಅಲ್ಲಿನ ರೈತರಿಗೆ ಎಕರೆಗೆ ಎರಡು ಲಕ್ಷ ರೂಪಾಯಿ, ಮನೆಕಟ್ಟಲು ಸೈಟ್ ಕೂಡಾ ನಿಡಿತ್ತು. ಆದರೆ ಮನಗೆ ಮಾತ್ರ ಎಕರೆಗೆ 30 ಸಾವಿರ ರೂಪಾಯಿ ನಿಗದಿ ಮಾಡಿ ಅದರಲ್ಲಿ 15 ಸಾವಿರ ರೂಪಾಯಿ ಮಾತ್ರ ಕೊಟ್ಟು ಕೈತೊಳೆದುಕೊಂಡು ಕುಳಿತಿದೆ. ಆಲಮಟ್ಟಿ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯ, ಕಾರಂಜಾ ಡ್ಯಾಂನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯವೇ ಎಂದು ರೈತರು ಪ್ರಶ್ನೀಸುತ್ತಿದ್ದಾರೆ.

ಸುಮಾರು 9 ಸಾವಿರ ಕುಟುಂಬಗಳು ಸರಕಾರ ಕೊಡುವ ಪರಿಹಾರದ ನಿರಿಕ್ಷೇಯಲ್ಲಿ ಪ್ರತಿನಿತ್ಯ ಚಾತಕ ಪಕ್ಷೀಯಂತೆ ಕಾಯುತ್ತಿವೆ. ಮನೆ ಆಸ್ತಿ ಪಾಸ್ತಿಹೋಗಿದೆ, ಸರಕಾರ ಪರಿಹಾರಕ್ಕೊಟ್ಟರೆ ನಮ್ಮ ಬಾಳುಕೂಡಾ ಬೆಳಕಾಗಬಹುದೆಂಬ ಆಶಯದೊಂದಿಗೆ ತಮ್ಮ ಬದುಕನ್ನ ಕಳೆಯುತ್ತಿದ್ದಾರೆ. ಪರಿಹಾರಕ್ಕಾಗಿ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನೊಂದ ರೈತರ ಸಮಸ್ಯೆಯನ್ನ ಪರಿಹರಿಸುವ ಕಡೆಗೆ ಒಲವು ತೋರಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನ ಕೈಡ ರೈತರು ಕೊಡುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Tue, 8 November 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!