ಬ್ಯಾರೇಜ್ ನಿರ್ಮಾಣದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ, ಹೈರಾಣಾದ ಅನ್ನದಾತರು

ರೈತರ ಜಮೀನಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಒಂಬತ್ತು ವರ್ಷಗಳಹಿಂದೆ ನಿರ್ಮಾಣ ಮಾಡಿದ ಬ್ರೀಡ್ಜ್ ಕಂ ಬ್ಯಾರೇಜ್​ನಲ್ಲಿ ನೀರು ನೀಲ್ಲುತ್ತಿಲ್ಲ. ಇದು ಬೃಹತ್ ನೀರಾವರಿಯ ಕನಸುಕಂಡಿದ್ದ ರೈತರಿಗೆ ಭಾರೀ ಹೊಡೆತ ನೀಡಿದೆ.

ಬ್ಯಾರೇಜ್ ನಿರ್ಮಾಣದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ, ಹೈರಾಣಾದ ಅನ್ನದಾತರು
ಬೀದರ್​ನಲ್ಲಿನ ಬ್ರಿಡ್ಜ್ ಕಂ ಬ್ಯಾರೇಜ್​ನಲ್ಲಿ ನಿಲ್ಲದ ನೀರು
Follow us
| Updated By: Rakesh Nayak Manchi

Updated on:Nov 07, 2022 | 2:29 PM

ಬೀದರ್: ನಲವತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬ್ಯಾರೇಜ್​ನಲ್ಲಿ ನೀರು ನಿಲ್ಲದ ಹಿನ್ನೆಲೆ ಅನ್ನದಾತರು ಹೈರಾಣಾಗಿದ್ದಾರೆ. 1,980 ಹೆಕ್ಟೇರ್ ಪ್ರದೇಶದ ಜಮೀನಿಗೆ ನೀರಾವರಿ ಕಲ್ಪಿಸಬೇಕಿದ್ದ ಬ್ಯಾರೇಜ್​ ನಿರ್ಮಾಣ ಹೆಸರಿನಲ್ಲಿ ಲಕ್ಷ ಲಕ್ಷ ಲೋಟಿ ಹೊಡೆದರೇ ಎಂಬ ಪ್ರಶ್ನೆ ಕಾಡಲು ಆರಂಭಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಗೆ ನೀರಾವರಿ ಕಲ್ಪಿಸಬೇಕೆಂಬ ಉದ್ದೇಶದಿಂದ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಬ್ರೀಡ್ಜ್ ಕಂ ಬ್ಯಾರೇಜ್‌ ನಿರ್ಮಾಣಮಾಡಲಾಗಿದೆ. ಈ ಬ್ಯಾರೇಜ್ ನಿರ್ಮಾಣವಾಗಿ ಲೋಕಾರ್ಪಣೆಗೊಂಡು 9 ವರ್ಷಗಳು ಉರುಳಿದರೂ ಒಂದೇ ಒಂದು ಹನಿ ನೀರು ಕೂಡಾ ನಿಂತಿಲ್ಲ. ಇದು ಸಹಜವಾಗಿಯೇ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ರೈತರ ನೀರಾವರಿ ಕನಸು ನುಚ್ಚು ನೂರಾದಂತಾಗಿದೆ.

ಬ್ಯಾರೇಜ್ ನಿರ್ಮಾಣವಾಗುತ್ತಿದಂತೆ ನೀರು ನಿಲ್ಲುತದೆ ಎಂದು ನೂರಾರು ರೈತರು ತಮ್ಮ ಹೊಲಗಳಲ್ಲಿ ಸಾಲ ಸೋಲ ಮಾಡಿ ಪೈಪ್ ಲೈನ್ ಹಾಕಿಸಿಕೊಂಡು ಕುಳಿತಿದ್ದಾರೆ. ಆದರೆ ಬ್ಯಾರೇಜ್​ನಲ್ಲಿ ಮಾತ್ರ ನೀರು ನಿಲ್ಲುತ್ತಿಲ್ಲ. ಇದು ಸಹಜವಾಗಿಯೇ ಸರಕಾರದ ವಿರುದ್ದ ರೈತರಲ್ಲಿ ಅಸಮಾಧಾನ ಉಂಟು ಮಾಡಿದೆ. ಇಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಶುರು ಮಾಡಿದಾಗ ಇಲ್ಲಿನ ರೈತರು ಖುಷಿಯಾಗಿದ್ದು ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಬಹುದೆಂದು ಭಾವಿಸಿದ್ದರು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ ಉದ್ಘಾಟನೆಯಾಗಿ 9 ವರ್ಷ ಕಳೆದರೂ ಈ ಡ್ಯಾಂನಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಮಳೆಯಾಶ್ರಿತ ಬೆಳೆಯನ್ನ ಬೆಳೆದು ರೈತರು ಬದುಕು ಕಟ್ಟಿಕೊಳ್ಳಬೇಕಾಗಿದ್ದು, ಈ ಬ್ಯಾರೇಜ್​ನಿಂದಾ ರೈತರಿಗೆ ಏನೂ ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಚಂದಾಪುರ ಗ್ರಾಮದ ಬಳಿ ಬೀದರ್​ನ ಜೀವನಾಡಿ ಮಾಂಜ್ರಾ ನದಿಯೂ ಹರಿದುಹೋಗುತ್ತದೆ. ಈ ನದಿಯೂ ಮಳೆಗಾಲದಲ್ಲಿ ಮೈದುಂಬಿಕೊಂಡು ಹರಿದು ಪಕ್ಕದ ರಾಜ್ಯ ತೆಲಂಗಾಣಕ್ಕೆ ಹರಿದು ಹೋಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಇಲ್ಲಿ ನೀರು ಸಂಗ್ರಹಿಸಿ ಬೆಸಿಗೆಯಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಕ್ಕೆ ಕುಡಿಯಲು ಹಾಗೂ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶ ಈ ಯೋಜನೆಯದ್ದಾಗಿತ್ತು. ಆದರಎ ಈ ಬ್ಯಾರೇಜ್​ನಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದು ತೆಲಗಾಂಣ ಸೇರುತ್ತಿದೆಯೇ ಹೊರತು ಬ್ಯಾರೇಜ್ ಇದ್ದು ಇಲ್ಲದಂತಾಗಿದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.

ಕಳಪೆ ಗುಣಮಟ್ಟದ ಕಾಮಗಾರಿ

ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷದಿಂದ ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ಬ್ಯಾರೇಜ್​ನಲ್ಲಿ ನೀರು ನಿಲ್ಲುತ್ತಿಲ್ಲ. ಜೊತೆಗೆ ಈ ಬ್ಯಾರೇಜ್​ಗೆ ಅಳವಡಿಸಲಾಗಿದ್ದ ಗೇಟ್​ಗಳು ಕೂಡಾ ಕಳಪೆಗುಣಮಟ್ಟದಿಂದ ಕೂಡಿದ್ದಾಗಿದೆ. ಆದರೆ ನೀರಿನ ಸೋರಿಕೆ ಆರಂಭವಾಗಿ ಕ್ರಮೇಣ ಹರಿವಿನ ರಭಸಕ್ಕೆ ಗೇಟ್​ಗಳು ಕಿತ್ತುಕೊಂಡು ಹೋಗಿವೆ. ಈ ಬ್ಯಾರೇಜ್ ನಿರ್ಮಾಣದ ಸಮಯದಲ್ಲಿ ನೂರಾರು ಎಕರೆ ಜಮೀನು ಕೂಡಾ ಹೋಗಿದೆ. ಆದರೇ ಇದುವರೆಗೂ ರೈತರಿಗೆ ಸಿಗಬೇಕಾಗ ಪರಿಹಾರ ಸಿಕ್ಕಿಲ್ಲ. ಇತ್ತ ಜಮೀನು ಇಲ್ಲ ಮೊತ್ತೊಂದು ಕಡೆಗೆ ಜಮೀನಿಗೆ ನೀರು ಇಲ್ಲ. ಹೀಗಾಗಿ ರೈತರು ಸರಕಾರ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರೈತರ ಜಮೀನಿಗೆ ನೀರುಕೊಡಬೇಕು, ಭೂಮಿಯಲ್ಲಿ ನೀರಿನ ಮೂಲ ಜಾಸ್ತಿಯಾಗಬೇಕು ಅನ್ನುವ ಉದ್ದೇಶದಿಂದ ನಿರ್ಮಾಣ ಮಾಡಿದ ಬ್ಯಾರೇಜ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ. ಈ ಚಂದಾಪುರ ಬ್ಯಾರೇಜ್ ನೀರಿನ ಸಂಗ್ರಹ ಸಾಮಥ್ 0.78 ಕ್ಯೂಸೆಕ್ ಆಗಿದೆ. ಆದರೆ ಈ ಬ್ಯಾರೇಜ್​ನ ಪ್ರಯೋಜನ ಮಾತ್ರ ಜನರಿಗೆ, ರೈತರಿಗೆ ಆಗಿಲ್ಲ. ಬ್ಯಾರೇಜ್ ನಿರ್ಮಾಣ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಅಧಿಕಾರಿಗಳು ಕೊಳ್ಳೆಹೊಡೆದಿರುವುದು ಮೇಲ್ನೇಟಕ್ಕೆ ಸಾಬೀತಾಗಿದೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Mon, 7 November 22