ಅಸೆಂಬ್ಲಿ ಚುನಾವಣೆ ಸಿದ್ಧತೆ: ಖಾಸಗಿ ಹೋಟೆಲ್ನಲ್ಲಿ ದೆಹಲಿ ತಂಡದಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ತರಬೇತಿ
ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೆಹಲಿಯ ವಿಶೇಷ ಚುನಾವಣಾ ಪರಿಣಿತರ ತಂಡದಿಂದ ಈ ತರಬೇತಿ ಶಿಬಿರ ನಡೆದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಸರ್ಕಾರ ತಮ್ಮದೇ ಎಂದು ಘೋಷಿಸಿರುವ ಜೆಡಿಎಸ್ ನಾಯಕ ಮತ್ತು ಮಾಜಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮುಂದಿನ ವಿಧಾನಸಭೆ ಚುನಾವಣೆಗಾಗಿ (Karnataka Assembly elections 2023) ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿದ್ದಾರೆ. ತತ್ಸಂಬಂಧ, ಕಳೆದ 4 ದಿನಗಳಿಂದ ಖಾಸಗಿ ಹೋಟೆಲ್ನಲ್ಲಿ ಕ್ಷೇತ್ರದ ಅಭ್ಯರ್ಥಿಗಳ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಅಸೆಂಬ್ಲಿ ಚುನಾವಣೆಯ ಅಭ್ಯರ್ಥಿಗಳ ಜೊತೆ ಕುಮಾರಸ್ವಾಮಿ ಒನ್ ಟೂ ಒನ್ ಮೀಟಿಂಗ್ ನಡೆಸುತ್ತಿದ್ದಾರೆ.
ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೆಹಲಿಯ ವಿಶೇಷ ಚುನಾವಣಾ ಪರಿಣಿತರ ತಂಡದಿಂದ ಈ ತರಬೇತಿ ಶಿಬಿರ ನಡೆದಿದೆ. ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ವ್ಯೂಹ ರಚನೆ, ಗೆಲುವಿನ ಸೂತ್ರಗಳ ಕುರಿತು ಜೆಡಿಎಸ್ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪಂಚರತ್ನ ರಥಯಾತ್ರೆ ಮುಂದೂಡಿಕೆ ಹಿನ್ನೆಲೆಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಯಾತ್ರೆ ಪುನಾರಂಭ ಮೊದಲೇ ಟ್ರೈನಿಂಗ್ ಮುಗಿಸಲು ನಿರ್ಧಾರ ಮಾಡಲಾಗಿದೆ.