Infra Awards: ಬೆಂಗಳೂರು ಮೆಟ್ರೋ ಮತ್ತೊಂದು ಗೌರವ; ಭೂ ಸಾರಿಗೆ ನಿರ್ದೇಶನಾಲಯದ ಅತ್ಯುತ್ತಮ ನಗರ ಸಾರಿಗೆ ಪ್ರಶಸ್ತಿ
ಕೊಚ್ಚಿಯಲ್ಲಿ ನಡೆದ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್ ನಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆಯ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರು: ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆಯ ಪ್ರಶಸ್ತಿಗೆ ಪಾತ್ರವಾಗಿದೆ. ಕೊಚ್ಚಿಯಲ್ಲಿ ನಡೆದ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಬಿಎಂಆರ್ ಸಿಎಲ್ ಗೆ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಪ್ರಯಾಣಿಕ ಸೇವೆ ಮತ್ತು ತೃಪ್ತಿ ನೀಡುತ್ತಿದೆ ಎಂದು ಮೆಟ್ರೋ ರೈಲು ವರ್ಗದ ಅಡಿಯಲ್ಲಿ ನಗರ ಸಾರಿಗೆ ಶ್ರೇಷ್ಠತೆಯಲ್ಲಿ ಬಿಎಂಆರ್ ಸಿಎಲ್ ಗೆ ಪ್ರಶಸ್ತಿ ನೀಡಲಾಗಿದೆ.
ಅರ್ಬನ್ ಇನ್ಫ್ರಾ ಕಮ್ಯುನಿಕೇಷನ್ಸ್ ಮತ್ತು PR ಕಂಪನಿಯು ಆಯೋಜಿಸಿದ ಎರಡನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿಎಂಆರ್ಸಿಎಲ್ ಅರ್ಬನ್ ಇನ್ಫ್ರಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕೈಗಾರಿಕಾ ವಿಭಾಗದಡಿಯಲ್ಲಿ ಅತ್ಯಂತ ನವೀನ ಅರ್ಬನ್ ಮೊಬಿಲಿಟಿ ಲೀಡರ್ ಪ್ರಶಸ್ತಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ಆಯುಕ್ತರಾದ ವಿ ಮಂಜುಳಾ ಅವರು ಪಡೆದಿದ್ದಾರೆ. ಕಾರ್ಪೊರೇಟ್ ವರ್ಗದ ಅಡಿಯಲ್ಲಿ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಸಿಲಿಕಾನ್ ವ್ಯಾಲಿಯ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಬಿಎಂಆರ್ಸಿಎಲ್ಗೆ ಮತ್ತೊಂದು ಗರಿ ಏರಿದೆ. ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯು ರೈಲು ಮತ್ತು ಮೆಟ್ರೋ ಸಿಸ್ಟಮ್ಸ್ ಸ್ವದೇಶಿ ಆವಿಷ್ಕಾರದಲ್ಲಿ ಶ್ರೇಷ್ಠತೆಗಾಗಿ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ಹುಬ್ಬಳ್ಳಿ-ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ ಲಿಮಿಟೆಡ್ ಟ್ರಾನ್ಸಿಟ್ ಮತ್ತು ಮೊಬಿಲಿಟಿ ವಿಭಾಗದಲ್ಲಿ ಹೆಚ್ಚು ಆದ್ಯತೆಯ ಸಾರಿಗೆ ವ್ಯವಸ್ಥೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಗರ ಮೂಲಸೌಕರ್ಯ ವಿಭಾಗದ ಅಡಿಯಲ್ಲಿ DULT ನಗರಾಭಿವೃದ್ಧಿಗಾಗಿ ಅತ್ಯಂತ ಮೆಚ್ಚುಗೆ ಪಡೆದ ನಗರ ಯೋಜನಾ ಸಂಸ್ಥೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.
ವ್ಯಾಪಾರ ಅಭಿವೃದ್ಧಿ ಮತ್ತು ಕಾರ್ಪೊರೇಟ್ ಸಂವಹನಗಳ ನಿರ್ದೇಶಕ, ಅರ್ಬನ್ ಇನ್ಫ್ರಾ ಕಮ್ಯುನಿಕೇಷನ್ಸ್, ವಿನೋದ್ ಶಾ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದು, ಇದು ಪ್ರಶಸ್ತಿಗಳ ಎರಡನೇ ಆವೃತ್ತಿಯಾಗಿದೆ ಮತ್ತು ಮೊದಲನೆಯದನ್ನು 2020 ರಲ್ಲಿ ನಡೆಸಲಾಗಿತ್ತು. ಈ ಹಿಂದೆ ಮಾಡಿದ ಕೆಲಸದ ಆಧಾರದ ಮೇಲೆ ಐದು ಸದಸ್ಯರ ತಂಡು ವಿಜೇತರನ್ನು ಆಯ್ಕೆ ಮಾಡಿದೆ ಎಂದು ವಿವರಿಸಿದರು.
Published On - 1:07 pm, Mon, 7 November 22




