Vir Das: ಬೆಂಗಳೂರಿನಲ್ಲಿ ನಡೆಯಲಿರುವ ಹಾಸ್ಯ ಕಲಾವಿದ ವೀರ್ ದಾಸ್ ಕಾಮಿಡಿ ಶೋ ರದ್ದುಪಡಿಸುವಂತೆ ಹಿಂದೂ ಜನಜಾಗೃತಿ ಸಮಿತಿ ದೂರು
ಹಾಸ್ಯ ನಟ ವೀರ್ ದಾಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಹಿಂದೂ ಜನಜಾಗೃತಿ ಸಮಿತಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ
ಹಾಸ್ಯ ನಟ ವೀರ್ ದಾಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಹಿಂದೂ ಜನಜಾಗೃತಿ ಸಮಿತಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ನವೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅವರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಸಮಿತಿ ವತಿಯಿಂದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ವೀರ ದಾಸ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಮಿತಿಯ ಪರವಾಗಿ ಹೇಳಲಾಗಿದೆ. ಸಮಿತಿಯು ತನ್ನ ದೂರು ಪತ್ರದಲ್ಲಿ, ಹಾಸ್ಯನಟ ವೀರ್ ದಾಸ್ ಅವರು ನವೆಂಬರ್ 10 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಭಾಂಗಣದಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ವಾಷಿಂಗ್ಟನ್‌ನಲ್ಲಿ ಅವರು ಮಹಿಳೆಯರು, ನಮ್ಮ ಪ್ರಧಾನಿ ಮತ್ತು ಭಾರತದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
ಈ ಸಂಬಂಧ ಮುಂಬೈ ಮತ್ತು ದೆಹಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಇದು ಐಪಿಸಿ ಸೆಕ್ಷನ್ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ನವೆಂಬರ್ 10 ರಂದು ಬೆಂಗಳೂರಿನಲ್ಲಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಅವರ ಪ್ರದರ್ಶನಗಳು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತವೆ ಮತ್ತು ಭಾರತವನ್ನು ಜಗತ್ತಿಗೆ ಕೆಟ್ಟದಾಗಿ ತೋರಿಸುತ್ತದೆ.
Karnataka | Complaint filed against comedian Vir Das by Hindu Janajagruti Samiti at Vyalikaval PS, demanding the cancellation of his program in Bengaluru on November 10th, as his shows “hurt religious sentiments of Hindus & shows India in bad light to the world.” pic.twitter.com/saeBXZUaZM
— ANI (@ANI) November 7, 2022
ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ವಿವಾದಿತ ವ್ಯಕ್ತಿಯನ್ನು ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದುಸರಿಯಲ್ಲ ಎಂದು ಸಮಿತಿ ಹೇಳಿದೆ.
ಈಗಾಗಲೇ ಕರ್ನಾಟಕವು ಕೆಲವು ಘಟನೆಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಇಂತಹ ಕಾರ್ಯಕ್ರಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾಗಿ ವೀರ ದಾಸ್ ಅವರ ಕಾರ್ಯಕ್ರಮವನ್ನು ಅನುಮೋದಿಸಬಾರದು ಎಂದು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
Published On - 3:09 pm, Mon, 7 November 22