ಬೀದರ್​: ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥ; ಗ್ರಾಮ ಪಂಚಾಯತ್​ ಪಿಡಿಒ ಅಮಾನತು

| Updated By: ವಿವೇಕ ಬಿರಾದಾರ

Updated on: Aug 01, 2023 | 1:28 PM

ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೀದರ್ ತಾಲೂಕು ಪಂಚಾಯಿತಿ ಪಿಡಿಒ ಅನ್ನು ಅಮಾನತು ಮಾಡಿ ಸಿಇಒ ಮಾಣಿಕ್ ರಾವ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. 

ಬೀದರ್​: ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥ; ಗ್ರಾಮ ಪಂಚಾಯತ್​ ಪಿಡಿಒ ಅಮಾನತು
ಗ್ರಾಮ ಪಂಚಾಯತ್​ ಕಾರ್ಯಾಲಯ
Follow us on

ಬೀದರ್​ ಆ.1: ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಟನಳ್ಳಿ ಗ್ರಾಮ ಪಂಚಾಯಿತಿ (Gram Panchayat) ಪಿಡಿಒ ದೇವೆಂದ್ರಪ್ಪ ಅವರನ್ನು ಅಮಾನತು ಮಾಡಿ ತಾಲೂಕು ಪಂಚಾಯತಿ ಸಿಇಒ ಮಾಣಿಕ್ ರಾವ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬೀದರ (Bidar) ತಾಲ್ಲೂಕಿನ ಚಟನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರೀದಾಬಾದ ಗ್ರಾಮದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಂಡಿದ್ದರು. ಈ ವಿಚಾರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ತಿಳಿಸದೆ ಕಾಮಗಾರಿ ಕೈಗೊಂಡಿದ್ದಾರೆ. ಈ ಕಾಮಗಾರಿಯನ್ನು ಕುಡಿಯುವ ನೀರಿನ ಪೈಪ್​ಲೈನ್​ ಹಾದು ಹೋದ ದಾರಿಯಲ್ಲೇ ನಡೆದಿದೆ.

ಇದರಿಂದ ಕುಡಿಯುವ ನೀರಿನ ಪೈಪ್​​ಲೈನ್​ಗೆ ಹಾನಿಯಾಗಿ ಜು. 25 ರಂದು ಚರಂಡಿಯ ಕಲುಷಿತ ನೀರು ಪೈಪ್‌ಲೈನ್ ನೀರಿಗೆ ಸೇರಿದೆ. ಇದೇ ನೀರನ್ನು ಕುಡಿದು 21 ಜನರು ಅಸ್ವಸ್ಥಗೊಂಡಿದ್ದಾರೆ. ಇವರನ್ನು ಕೂಡಲೆ ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 11 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 10 ಜನ ಬೀದರನ ವಾಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸವಕಲ್ಯಾಣದಲ್ಲಿ ಪೈಶಾಚಿಕ ಕೃತ್ಯ!

ಇನ್ನು ಪ್ರಕರಣ ಜು.25 ರಂದು ನಡೆದಿದ್ದು, ಗ್ರಾಮ ಪಂಚಾಯತಿ ಪಿಡಿಒ ದೇವೆಂದ್ರಪ್ಪ ತಾಲೂಕು ಪಂಚಾಯತಿ ಸಿಇಒ ಮಾಣಿಕ್ ರಾವ್ ಪಾಟೀಲ್ ಅವರಿಗೆ ಕೂಡಲೆ ವರದಿ ನೀಡದೆ ಜು.28 ರಂದು ಸಾಯಂಕಾಲ 5:30 ಕ್ಕೆ ತಡವಾಗಿ ವರದಿ ನೀಡಿದ ಹಿನ್ನೆಲೆ ಕರ್ತವ್ಯ ಲೋಪ ಎಸಗಿದ್ದಾರೆಂದು ಪಿಡಿಒ ದೇವೆಂದ್ರಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Tue, 1 August 23