ಬೀದರ್: ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವತಿಯನ್ನ ಕತ್ತು ಹಿಸಿಕಿ ಕೊಲೆ ಮಾಡಿದ ಪಾಗಲ್ ಪ್ರೇಮಿ
ಅವಳಿಗಿನ್ನೂ 19 ಮುಗಿದು 20 ನೇ ವಯಸ್ಸಿಗೆ ಕಾಲಿಡುವ ಮುನ್ನವೇ 25 ವರ್ಷ ವಯಸ್ಸಿನ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದವಳು ಇಂದು ದುರಂತ ಸಾವಿಗೀಡಾಗಿದ್ದಾಳೆ. ಮದುವೆಗೆ ಒಪ್ಪದ ಪ್ರಿಯತಮೆಯನ್ನ ಕತ್ತುಹಿಸುಕಿ ಕೊಲೆ ಮಾಡಿದ್ದು ಮಗಳನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಬೀದರ್: ನಗರದ ಮಂಗಲ್ ಪೇಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಲೀಲಾ ಹಾಗೂ ಶ್ರೀನಿವಾಸ್, ಒಂದೇ ಓಣಿಯಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದುದ್ದರಿಂದ ಇಬ್ಬರ ನಡುವೆ ಪರಿಚಯವಾಗಿದೆ. ಇದೇ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿ ಮಾಡಲು ಶುರುಮಾಡಿದ್ದಾರೆ. ಯಾವಾಗ ಇವರಿಬ್ಬರ ನಡುವೆ ಪ್ರೀತಿ ಗಾಢವಾಯಿತೋ ಆವಾಗ ಶ್ರೀನಿವಾಸ್ ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕಲು ಶರು ಮಾಡಿದ್ದಾನೆ. ಓದುವ ಹೊತ್ತಿನಲ್ಲಿ ಮದುವೆ ಬೇಡ ಎಂದು ಶಿವಲೀಲಾ ಶ್ರೀನಿವಾಸ್ಗೆ ಹೇಳಿದ್ದಾಳೆ. ನಂತರ ಶಿವಲೀಲಾ ತಾಯಿ ವಿಜಯಲಕ್ಷ್ಮೀಗೆ ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಎಂದು ಒತ್ತಡ ಹಾಕಲು ಶುರುಮಾಡಿದ್ದಾನೆ. ಬಳಿಕ ತಾಯಿ ಮಗಳು ಮನೆ ಖಾಲಿ ಮಾಡಿ ಬೇರೆ ಊರಿಗೆ ಹೋಗಿದ್ದಾರೆ. ಇಷ್ಟಾದರೂ ಬಿಡದ ಶ್ರೀನಿವಾಸ್ ಜನವರಿ 8 ರಂದು ಆಕೆ ಓದುತ್ತಿರುವ ಕಾಲೇಜಿಗೆ ಹೋಗಿ, ಶಿವಲೀಲಾನನ್ನು ಫುಸಲಾಯಿಸಿ ನಗರದ ಪಕ್ಕದಲ್ಲಿರುವ ಸೋಲಪುರ ಗ್ರಾಮದ ಬಳಿಗೆ ಕರೆದುಕೊಂಡು ಹೋಗಿ ಆಕೆಯ ವೇಲ್ನಿಂದಲೇ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ, ಶ್ರೀನಿವಾಸ್ನನ್ನ ಪೊಲೀಸರು ಹಿಡಿದು ಈಗ ಜೈಲಿಗಟ್ಟಿದ್ದಾರೆ. ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಒಂದೇ ಒಂದು ಕಾರಣಕ್ಕೆ ನನ್ನ ಮಗಳನ್ನ ಕೊಲೆ ಮಾಡಿದ್ದ ಶ್ರೀನಿವಾಸ್ಗೆ ಕಠಿಣ ಶಿಕ್ಷೆಯಾಗಬೇಕೆಂದು ತಾಯಿ ಒತ್ತಾಯಿಸುತ್ತಿದ್ದಾರೆ.
ಮೂಲತಃ ಬೀದರ್ ತಾಲೂಕಿನ ಮಲ್ಲಿಕ್ ಮಿರ್ಜಾಪೂರ್ ಗ್ರಾಮದ ಶಿವಲೀಲಾ ನಗರದ ಮಂಗಲ್ ಪೇಟೆಯಲ್ಲಿ ತಾಯಿ ಜೊತೆ ವಾಸವಾಗಿದ್ದಳು. ಶಿವಲೀಲಾ ಹುಟ್ಟಿದ್ದಾಗಲೇ ಈಕೆಯ ತಂದೆ ತೀರಿಹೋಗಿದ್ದಾನೆ. ಅಪ್ಪನ ಆಸರೆಯಿಲ್ಲದೆ ಬೆಳೆದ ಶಿವಲೀಲಾ ಓದಿನಲ್ಲಿ ಚುರುಕಾಗಿದ್ದಳು. ಒಂದನೇ ತರೆಗತಿಯಿಂದ ದ್ವೀತಿಯ ಪಿಯುಸಿವರೆಗೆ ರ್ಯಾಂಕ್ನಲ್ಲಿಯೇ ಪಾಸು ಮಾಡಿದ ಶಿವಲೀಲಾ ಮುಂದೆ ಬೀದರ್ ಬ್ರೀಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿ ನನ್ನ ಮಗಳು ಹೆಸರು ಮಾಡುತ್ತಾಳೆ ಎಂದು ತಾಯಿ ಕನಸು ಕಂಡಿದ್ದಳು. ಆದ್ರೆ ಶ್ರೀನಿವಾಸ ಎಂಬ 25 ವರ್ಷದ ಯುವಕ ಹುಡುಗಿಯನ್ನು ಪ್ರೀತಿಯ ಬಲೆಗೆ ಬಿಳಿಸಿಕೊಂಡು ಆಕೆಯನ್ನ ಕೊಲೆ ಮಾಡಿದ್ದಾನೆ. ತಾಯಿ ಕನಸು ನೂಚ್ಚು ನೂರು ಮಾಡಿದ್ದು ಅಲ್ಲದೆ ಮಗಳನ್ನು ಕೊಲೆ ಮಾಡಿ ತಾಯಿಯನ್ನು ಕಣ್ಣೀರಿನಲ್ಲಿ ಕೈತೊಳಿಯುವಂತೆ ಮಾಡಿದ್ದಾನೆ. ಈ ಕುರಿತು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಉಡುಪಿ: ಮೊಬೈಲ್ ಕರೆಯನ್ನ ಆಧರಿಸಿ ಹೋಗಿದ್ದ ವ್ಯಕ್ತಿಯ ಬರ್ಬರ ಕೊಲೆ
ಪ್ರೀತ್ಸೆ ಎಂದು ಹುಡುಗಿ ಹಿಂದೆ ಬಿದ್ದು, ಒಪ್ಪದೇ ಇದ್ದಾಗ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸಿಕಿ ಕೊಲೆ ಮಾಡಿದ್ದು ದುರಂತವೇ ಸರಿ. ನರ್ಸಿಂಗ್ ಕನಸು ಕಂಡಿದ್ದ ಹುಡುಗಿ ಪ್ರೀತಿಯ ಹೆಸರಿನಲ್ಲಿ ಬಲಿಯಾಗಿದ್ದು ಕುಟುಂಬಕ್ಕೆ ಆಘಾತ ನೀಡಿದೆ. ಇನ್ನಾದ್ರು ಪ್ರೀತಿ ಬಲೆಗೆ ಬೀಳುವ ಮುನ್ನಾ ಎಲ್ಲಾ ಹುಡುಗಿಯ ಹುಷಾರ್ ಆಗಿರಬೇಕಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ