ಬೀದರ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ: ಡ್ರೋಣ್ ಹಾರಾಟ ನಿಷೇಧ

| Updated By: ರಮೇಶ್ ಬಿ. ಜವಳಗೇರಾ

Updated on: Oct 03, 2023 | 10:19 AM

Bidar News: ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಅ.03) ಬೀದರ್​ನ ಏರ್​ ಬೇಸ್​ಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದರ್ ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.

ಬೀದರ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ: ಡ್ರೋಣ್ ಹಾರಾಟ ನಿಷೇಧ
ಪ್ರಧಾನಿ ನರೇಂದ್ರ ಮೋದಿ
Follow us on

ಬೀದರ್, (ಅಕ್ಟೋಬರ್ 03): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಅ.03) ಬೀದರ್​ನ ಏರ್​ ಬೇಸ್​ಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದರ್ (Bidar) ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ (drone) ಹಾರಾಟ ನಿಷೇಧಿಸಲಾಗಿದೆ. ಛತ್ತೀಸ್​ ಗಢದ ಜಗದಾಲಪುರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಬೀದರ್​ನ ವಾಯು ಸೇನೆ ತರಬೇತಿ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಬಳಿಕ 2:15ಕ್ಕೆ ಬೀದರ್ ಏರ್ ಬೇಸ್ ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ತೆಲಂಗಾಣ ರಾಜ್ಯದ ನಿಜಾಮಾಬಾದ್ ಗೆ ತೆರಳಲಿದ್ದಾರೆ. ಹಾಗೇ ಸಂಜೆ 5:55ಕ್ಕೆ ನಿಜಾಮಾಬಾದ್ ನಿಂದ ವಾಪಸ್​ ಬೀದರ್ ಏರ್ ಬೇಸ್​ಗೆ ಬಂದು 6 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ಬೀದರ್ ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಛತ್ತೀಸ್‌ಗಢದ ಕಾರ್ಯಕ್ರಮ ಮುಗಿಸಿಕೊಂಡು ಬಳಿಕ ಮೋದಿ, ಪ್ರಧಾನಿ ಮೋದಿ ಅವರು ತೆಲಂಗಾಣದ ನಿಜಾಮಾಬಾದ್‌ಗೆ ತೆರಳಿದ್ದಾರೆ. ಅಲ್ಲಿ ವಿದ್ಯುತ್, ರೈಲು ಮತ್ತು ಆರೋಗ್ಯ ಇಲಾಖೆಯ ಸುಮಾರು 8000 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಹೀಗಾಗಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಬೀದರ್​​ಗೆ ಆಗಮಿಸಲಿದ್ದಾರೆ. ಬಳಿಕ ವಾಯು ಸೇನೆ ಹೆಲಿಕಾಪ್ಟರ್​ ಮೂಲಕ ತೆಲಂಗಾಣದ ನಿಜಾಮಾಬಾದ್‌ಗೆ ತೆರಳಲಿದ್ದಾರೆ. ನಂತರ ಸಂಜೆ ನಿಜಾಮಾಬಾದ್​ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೀದರ್ ಏರ್​ಬೇಸ್​ಗೆ ಆಗಮಿಸಲಿದ್ದು, ಇಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:57 am, Tue, 3 October 23