ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!

| Updated By: ವಿವೇಕ ಬಿರಾದಾರ

Updated on: Oct 10, 2022 | 9:49 PM

ಬೀದರ್ ‌ನಗರದ ಐತಿಹಾಸಿಕ ‌ಕೋಟೆಯ ಪಕ್ಕದಲ್ಲಿರುವ ನಾವದಗೇರಿ ಬಡಾವಣೆ ಜನರು ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.

ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!
ಕೋತಿ
Follow us on

ಬೀದರ್: ಬೀದರ್ (Bidar) ‌ನಗರದ ಐತಿಹಾಸಿಕ ‌ಕೋಟೆಯ ಪಕ್ಕದಲ್ಲಿರುವ ನಾವದಗೇರಿ ಬಡಾವಣೆ ಜನರು ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಈ ಬಡಾವಣೆಯ ಜನರ ಮೇಲೆ ಮಂಗಗಳು ಅಟ್ಯಾಕ್ ಮಾಡಿದ್ದು, ಐದಾರು ಜನರನ್ನು ಕಚ್ಚಿ ಗಾಯಗೊಳಿಸಿವೆ. ಇದರಿಂದ ಇಡೀ ಬಡಾವಣೆ ಜನ ಭಯಭೀತಗೊಂಡಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಬಡಾವಣೆಯ ಸುತ್ತ ಗಿಡಗಂಟೆಗಳಿದ್ದು, ಅಲ್ಲಿ ಸಾಕಷ್ಟು ಮಂಗಗಳು ವಾಸಿಸುತ್ತಿವೆ. ಮಂಗಗಳು ಕಳೆದ ಒಂದು ವಾರದಿಂದ ಬಡಾವಣೆಯ ಜನರಿಗೆ ಕಾಟ ಕೊಡುತ್ತಿವೆ. ಕಳೆದ ಒಂದು ವಾರದಲ್ಲಿ ಮಂಗವೊಂದು ಹತ್ತುಕ್ಕೂ ಹೆಚ್ಚು ಮಹಿಳೆಯರನ್ನು ಅಟ್ಟಾಡಿಸಿ‌ ಕಚ್ಚಿದೆ. ಇದರಿಂದ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಬಡಾವಣೆಯ ಜಗದೀಶ್ ಎನ್ನುವ ಯುವಕನಿಗೆ ಮಂಗ ಕಚ್ಚಿದ್ದು, ಎಂಟು ಸ್ಟಿಚಸ್ ಹಾಕಿಸಿಕೊಂಡಿದ್ದು ಮನೆಯಿಂದಾ ಹೊರಬಾರದ ಸ್ಥಿತಿಯುಂಟಾಗಿದೆ.

ವಿದ್ಯಾರ್ಥಿಗಳು ಟ್ಯೂಷನ್​​ಗೆ ಹೋಗುವಾಗ ಕೋತಿ ಅಟ್ಯಾಕ್ ಮಾಡಿ ಗಾಯಗೊಳಿಸಿವೆ. ಇದರಿಂದ ಒಂದು ವಾರದಿಂದ ಜನರು ಆತಂಕದಲ್ಲೇ ಜೀವನ ನಡೆಸುತ್ತಿದ್ದ, ಜನರು ಬಾಗಿಲು ತೆರೆದು ಹೊರಗೆ ಬರುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಕೆಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಾ ಅವರು ನೆಪಕ್ಕೆ ಬಂದು ಹೋಗಿದ್ದಾರೆ. ನನ್ನ ಗಮನಕ್ಕೆ ಬಂದಿದೆ ಮಳೆಯಾಗುತ್ತಿರುವ ಕಾರಣ ಆ ಮಂಗನನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 pm, Mon, 10 October 22