ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯಕ್ಕೆ ಬೀದರ್ ನಂಬರ್ ಒನ್​: ರೈತರ ಆಸಕ್ತಿಗೆ ಪ್ರಧಾನಿ ಮೋದಿ ಶ್ಲಾಘನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2023 | 10:32 PM

Pradhan Mantri Fasal Bima Yojana: 2016-17ರಲ್ಲಿ ಕರ್ನಾಟಕ ರೈತರ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೇಶದಲ್ಲಿಯೇ ಹೆಚ್ಚಿನ ಪರಿಹಾರ ಪಡೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರದ ಗಮನ ಸೇಳೆದಿದ್ದ ಬೀದರ್ ಜಿಲ್ಲೆಯು ಈ ಯೋಜನೆಯ ನೋಂದಣಿಯಲ್ಲಿ ಪ್ರಸಕ್ತ ಸಾಲಿನಲ್ಲಿಯೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.

ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯಕ್ಕೆ ಬೀದರ್ ನಂಬರ್ ಒನ್​: ರೈತರ ಆಸಕ್ತಿಗೆ ಪ್ರಧಾನಿ ಮೋದಿ ಶ್ಲಾಘನೆ
ಪ್ರಾತಿನಿಧಿಕ ಚಿತ್ರ
Follow us on

ಬೀದರ್​, ಆಗಸ್ಟ್​ 12: ಪ್ರಧಾನ ಮಂತ್ರಿ ಫಲಸ್ ಭಿಮಾ ಯೋಜನೆಯ (Pradhan Mantri Fasal Bima Yojana) ಲಾಭ ಪಡೆದ ದೇಶದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಬೀದರ್ ಪಾತ್ರವಾಗಿದೆ. ಎರಡು ಲಕ್ಷಕ್ಕೂ ಅಧಿಕ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜಯ ಬೆಳೆ ವಿಮೆ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ರೈತರ ಕಾರ್ಯಕ್ಕೆ ಪ್ರಧಾನಿ ನರೆಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬೀದರ್ ಹೆಸರು ಪ್ರಸ್ಥಾಪಿಸಿದ್ದು, ಜಿಲ್ಲೆಯ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾ ವಾತಾವರಣ ನಿರ್ಮಾಣಮಾಡಿದೆ.

2016-17ರಲ್ಲಿ ಕರ್ನಾಟಕ ರೈತರ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೇಶದಲ್ಲಿಯೇ ಹೆಚ್ಚಿನ ಪರಿಹಾರ ಪಡೆದು ನರೇಂದ್ರ ಮೋದಿ ಹಾಗೂ ರಾಷ್ಟ್ರದ ಗಮನ ಸೇಳೆದಿದ್ದ ಬೀದರ್ ಜಿಲ್ಲೆಯು ಈ ಯೋಜನೆಯ ನೋಂದಣಿಯಲ್ಲಿ ಪ್ರಸಕ್ತ ಸಾಲಿನಲ್ಲಿಯೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ ಆರು ವರ್ಷದಲ್ಲಿ 5 ನೂರು ಕೊಟಿಗೂ ಅಧಿಕ ಪರಿಹಾರ ಪಡೆದಿರುವ ಜಿಲ್ಲೆಯ ರೈತರು, ಈ ವರ್ಷ ಹಚ್ಚಿನ ಸಂಖ್ಯೆಯಲ್ಲಿ 2.83 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ.

ಇದನ್ನೂ ಓದಿ: 8ರಿಂದ 10ನೇ ತರಗತಿವರೆಗೆ ಒಬ್ಬರೇ ಶಿಕ್ಷಕ: ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ ವಿದ್ಯಾರ್ಥಿಗಳು

ಈ ಯೋಜನೆ ಜಾರಿಯಾದಾಗಿನಿಂದಲೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೀದರ್ ಜಿಲ್ಲೆಯೂ ಪ್ರಥಮ ಸ್ಥಾನದಲ್ಲಿಯೇ 2016-17ನೇ ಸಾಲಿನಲ್ಲಿ 1.74 ಲಕ್ಷ ರೈತರು ಬೆಳೆ ವಿಮೆಯ ನೋಂದಣಿ ಮಾಡಿಸಿದ್ದು, 2017-18 ರಲ್ಲಿ 1.80 ಲಕ್ಷ, 2018-19 ರಲ್ಲಿ 1.13 ಲಕ್ಷ ರೈತರು ನೋಂದಣಿ ಮಾಡಿದ್ದರೆ. 2020-21 ರಲ್ಲಿ 1.93 ಲಕ್ಷ ಹಾಗೂ 2021-22 ರಲ್ಲಿ 2.30 ಲಕ್ಷ ರೈತರು ಬೆಳೆ ವಿಮೆ ಹೆಸರು ನೋಂದಾಯಿಸಿದ್ದಾರೆ.

ಈ ವರ್ಷ ಅಂದರೆ 2022-23 ರಲ್ಲಿ 3.38 ಬೆಳೆ ವಿಮೆ ಮಾಡಿಸಿದ್ದಾರೆ. ಕೃಷಿ ಇಲಾಕೆಯ ಅಧಿಕಾರಿಗಳ ಸಹಯೋಗದೊಂದಿದೆ ಯುನಿವರ್ಸಲ್ ಸೋಂಪೊ ಜನರಲ್ ಇನ್ಸ್ಸುರೆನ್ಸ್ ಕಂಪನಿಯಿಂದ ಬೆಳೆ ನಷ್ಟವಾದರೆ ಪರಿಹಾರ ಕೊಡಲಿದ್ದಾರೆ. ಕೃಷಿ ಇಲಾಕೆಯ ಇಚ್ಚಾಶಕ್ತಿಯಿಂದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದಾಗುವ ಲಾಭದ ಬಗ್ಗೆ ಅರ್ಜಿ ಹಾಕುವುದರಿಂದ ಹಿಡಿದು ರೈತರಿಗೆ ಎಲ್ಲಾ ಮಾಹಿತಿಯನ್ನ ನೀಡಿದ್ದರಿಂದ ಪ್ರದಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಕಂಡಿದೆ ಎನ್ನುತ್ತಾರೆ ಸಂಸದ ಭಗವಂತ್ ಖೂಬಾ.

ಅತಿವೃಷ್ಠಿ ಅನಾವೃಷ್ಠಿಯಿಂದ ಬೆಳೆ ಹಾನಿಯಾಗಿ ಸಂಕಷ್ಟವನ್ನು ಎದುರುಸುತ್ತಿರುವ ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ ಯೋಜನೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಿದೆ. ಇದು ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತ ಹೊಂದಿದ್ದರು ಬೆಳೆ ಹಾನಿಗೀಡಾದ ರೈತರಿಗೆ ಅತೀ ಹೆಚ್ಚು ಪರಿಹಾರ ಒದಗಿಸಿಕೊಡುವ ಗುರಿ ಹೊಂದಿದೆ. ಇದರ ವಿಶೇಷ ಆಹಾರ, ಧಾನ್ಯ, ಎಣ್ಣೆ ಕಾಳು, ಬೆಳೆ, ಬೆಳೆಯುವ ರೈತರು ಮುಂಗಾರು ಅವಧಿಯಲ್ಲಿ ಒಟ್ಟು ವಿಮಾ ಕಂತಿನ ಶೇ.1.5 ರಷ್ಟನ್ನು ಪಾವತಿಸಬೇಕು ತೋಟಗಾರಿಕೆ ಹಾಗೂ ಹತ್ತಿ ಬೆಳೆಗಳಿಗೆ ಶೇ.5 ರಷ್ಟನ್ನು ವಿಮಾ ಕಂತನ್ನು ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ: Bidar Centenary School: ಶತಮಾನದ ಬಾಲಕಿಯರ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ

ವಿಮಾ ಕಂತಿನ ಉಳಿಕೆ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಭರಿಸಲಾಗಿದೆ. ಪ್ರತಿ ಕ್ಷಣವು ಅತಿವೃಷ್ಟಿ, ಅನಾವೃಷ್ಟಿ, ಕೀಟಭಾದೆ, ಕಳಪೆ ಭಿತ್ತನೆ ಬೀಜದ ಹಾವಳಿ, ಬೀಜ ವೈಪಲ್ಯ ಹಾಗೂ ಕೋಯ್ಲೋತ್ತರ ಹಾನಿಗೂ ಈ ಯೋಜನೆಯಲ್ಲಿ ಪರಿಹಾರ ಸಿಗುವುದು ವಿಶೇಷ ಉಳಿದಂತೆ ಆಲಿಕಲ್ಲು ಮಳೆ ಅಕಾಲಿಕ ಮಳೆ, ಭೂ ಕುಸಿತ, ಪ್ರವಾಹದ ವೇಳೆ ಜಮೀನು ಜಲಾವೃತ್ತ ಆಗುವುದರಿಂದ ಆಗುವ ಹಾನಿಗೂ ಪರಿಹಾರ ಲಭಿಸುತ್ತದೆ.

ಬೆಳೆ ಹಾನಿಯಾದ ಬಳಿಕ ತಕ್ಷಣದ ಪರಿಹಾರವಾಗಿ ಆ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ರಾಜ್ಯ ಬೆಳೆ ವಿಮೆ ಯೋಜನೆಯ ಯುನಿವರ್ಸಲ್ ಸೋಂಪೊ ಜನರಲ್ ಇನ್ಸ್ಸುರೆನ್ಸ್ ಕಂಪನಿ ವಹಿಸಿಕೊಂಡಿದೆ. ಈ ಮಹತ್ವದ ಯೋಜನೆ 2016 ರ ಜನೆವರಿಯಲ್ಲಿ ಜಾರಿಗೆ ತರಲಾಗಿದ್ದು, ರೈತರಿಗೆ ಸಂಜಿವಿನಿಯಾಗಿ ಕಾರ್ಯಮಾಡುತ್ತಿದೆ. ಕಳೆದ ವರ್ಷದ ಅತೀವೃಷ್ಠಿಯಿಂದ ರೈತರ ಬೆಳೆ ಹಾನಿಯಾದಾಗ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 124 ಕೋಟಿ ರೂಪಾಯಿ ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ.

2016 ರಿಂದ ಇಲ್ಲಿಯವರೆಗೂ ಸುಮಾರು 5 ನೂರು ಕೋಟಿಗೂ ಅಧಿಕ ಹಣ ರೈತರ ಖಾತೆಗೆ ಜಮೆಯಾದೆ. ಪ್ರತಿ ಎಕರೆಗೆ 10 ರಿಂದ 15 ಸಾವಿರ ರೂಪಾಯಿ ಬೆಳೆ ವಿಮೆ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿ ರೈತನ್ನ ಸಂಕಷ್ಟದಿಂದ ಪಾರು ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ರೈತರಿಗೆ ವರವಾಗಿದೆ ಎಂದು ಇಲ್ಲಿನ ರೈತ ಮುಂಖಡರು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ.