Bidar News: ಪೋಷಕರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ಶರಣು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2022 | 7:33 AM

ಮೊಹರಂ (Moharam) ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ (Gadag) ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.

Bidar News: ಪೋಷಕರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ
Follow us on

ಬೀದರ್​​: ಪೋಷಕರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆ (Lovers suicide) ಮಾಡಿಕೊಂಡಿರುವಂತಹ ಘಟನೆ ಬೀದರ್‌ನ ಲಾಡಗೇರಿ ನಿವಾಸದಲ್ಲಿ ನಡೆದಿದೆ. ಭಾನುವಾರ ಶರತ್(26) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಶರತ್ ಸಾವಿನ ಸುದ್ದಿ ತಿಳಿದು ಸೋಮವಾರ ಬಾವಿಗೆ ಹಾರಿ ಪ್ರಿಯತಮೆ ಸಂಗೀತಾ(22) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೀದರ್‌ನ ಗಾಂಧಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹರಂ ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿತ

ಗದಗ: ಮೊಹರಂ (Moharam) ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ (Gadag) ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ. ದಾದಾಪೀರ್ ಹೊಸಮನಿ 23, ಮುಸ್ತಾಕ್ ಹೊಸಮನಿ 24 ಎಂಬುವರಿಗೆ ಚಾಕೂ ಇರಿಯಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹರಂ ಹಬ್ಬ ಆಚರಣೆ ವೇಳೆ ಕಾಲು ತುಳಿದಿದ್ದಕ್ಕೆ ಗುಂಪಿನಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ. RSS ಕಾರ್ಯಕರ್ತ ಸೋಮು ಗುಡಿ ಎಂಬಾತ ಸೇರಿ ಹಲವರಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Crime News: 22ರ ಯುವತಿ ಜೊತೆ ಅನೈತಿಕ ಸಂಬಂಧ: ಹೆಂಡ್ತಿಯ ಚಿನ್ನ ಕದ್ದು ಪ್ರೇಯಸಿಗೆ ನೀಡ್ತಿದ್ದ ಗಂಡ ಅರೆಸ್ಟ್..!

ಎಸ್ಪಿ ದೇವರಾಜು, ಡಿವೈಎಸ್ಪಿ ಶಿವಾನಂದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ದಾದಾಪೀರ್​ನನ್ನು ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದ್ಯೊಯ್ದಿದ್ದಾರೆ. ಪ್ರಕರಣ ಸಂಬಂಧ ಸೋಮು, ಯಲ್ಲಪ್ಪ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಲ್ಲಸಮುದ್ರ ಗ್ರಾಮದಲ್ಲಿ ಗದಗ ಎಸ್ಪಿ ಶಿವಪ್ರಕಾಶ್ ಹೇಳಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನ ಉಳಿಸಿಕೊಳ್ಳಲು ಪ್ರಯತ್ನ ವೈದ್ಯರು ನಡೆಸಿದ್ದಾರೆ. ಮಲ್ಲಸಮುದ್ರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಟೈಟ್ ಸೆಕ್ಯೂರಿಟಿ ಮಾಡಲಾಗಿದೆ. ಎರಡು ಡಿಆರ್ ತುಕಡಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವು

ಕೊಪ್ಪಳ: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪೂರ ಬಳಿ ನಡೆದಿದೆ.  ಮೃತನ ಗುರುತು ಪತ್ತೆಯಾಗಿಲ್ಲ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಸ್ ಓವರ್ ಟೇಕ್ ಮಾಡಲು ಹೋಗಿ ಹಳ್ಳಕ್ಕೆ ಬಿದ್ದ ಕಾರು

ತಮಿಳುನಾಡು: ಬಸ್ ಓವರ್ ಟೇಕ್ ಮಾಡಲು ಹೋಗಿ ಕಾರು ಹಳ್ಳಕ್ಕೆ ಬಿದ್ದಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ‌ಹೊಸೂರಿನ ಸುಂಡಗಿರಿ ಬಳಿ ನಡೆದಿದೆ. ಕಾರಿನಲ್ಲಿದ್ದ 7 ಜನರಿಗೆ ಗಾಯವಾಗಿದ್ದು,  ಕೃಷ್ಣಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಬೆಂಗಳೂರಿನಿಂದ‌ ಕಾರಿನಲ್ಲಿ ಕೃಷ್ಣಗಿರಿಗೆ ಹೊರಟಿತ್ತು. ಈ ವೇಳೆ ಬಸ್ ಓವರ್ ಟೇಕ್ ಮಾಡಲು ಹೋಗಿ ಕರು ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದವರ ಚೀರಾಡುವ ಶಬ್ದ ಕೇಳಿ ಸ್ಥಳೀಯರು ರಕ್ಷಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.