Crime News: 22ರ ಯುವತಿ ಜೊತೆ ಅನೈತಿಕ ಸಂಬಂಧ: ಹೆಂಡ್ತಿಯ ಚಿನ್ನ ಕದ್ದು ಪ್ರೇಯಸಿಗೆ ನೀಡ್ತಿದ್ದ ಗಂಡ ಅರೆಸ್ಟ್..!
Crime News In Kannada: ಸಿಹಿತಿಂಡಿ ಅಂಗಡಿ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ಮುಳುಗಿದ್ದ ಶೇಖರ್ ಹೆಂಡತಿಯನ್ನು ಮರಳಿ ಕರೆತರಲೂ ಸಹ ಹೋಗಿರಲಿಲ್ಲ. ಏಕೆಂದರೆ ಅದಾಗಲೇ ಶೇಖರ್ಗೆ 22 ವರ್ಷ ಯುವತಿಯೊಂದಿಗೆ ಲವ್ ಆಗಿತ್ತು.
Crime News: ಪ್ರೀತಿ ಕುರುಡು ನಿಜ…ಆದ್ರೆ ಅದು ಪ್ರೇಮಲೋಕದಲ್ಲಿ ತೇಲುತ್ತಿರುವವರಿಗೆ ಮಾತ್ರ ಎಂಬ ಸತ್ಯ ಅರಿತರೆ ಉತ್ತಮ. ಏಕೆಂದರೆ ಇಲ್ಲೊಬ್ಬ ವ್ಯಕ್ತಿಯು ಹೆಂಡತಿಗೆ ಮೋಸ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಅದು ಕೂಡ ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಎಂಬುದು ವಿಶೇಷ. ಅಂದರೆ ಚೆನ್ನೈ ಮೂಲದ 40 ವರ್ಷದ ಶೇಖರ್ ಎನ್ನುವ ವ್ಯಕ್ತಿಗೆ ಅದಾಗಲೇ ಮದುವೆಯಾಗಿ ಸಂಸಾರದ ಬಂಡಿ ಸಾಗುತ್ತಿತ್ತು. ಇದರ ನಡುವೆ ಹೆಂಡತಿಯ ನಡುವೆ ವೈಮನಸ್ಸು ಮೂಡಿದೆ. ಅತ್ತ ಗಂಡನ ಜೊತೆ ಜಗಳ ಮಾಡಿಕೊಂಡ ಸಿಟ್ಟಿನಲ್ಲಿ ಹೆಂಡತಿ ತವರಿಗೆ ಹೋಗಿದ್ದಾಳೆ.
ಆದರೆ ಶೇಖರ್ ಇದ್ಯಾವದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಎಂದಿನಂತೆ ಸಿಹಿತಿಂಡಿ ಅಂಗಡಿ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ಮುಳುಗಿದ್ದ ಶೇಖರ್ ಹೆಂಡತಿಯನ್ನು ಮರಳಿ ಕರೆತರಲೂ ಸಹ ಹೋಗಿರಲಿಲ್ಲ. ಏಕೆಂದರೆ ಅದಾಗಲೇ ಶೇಖರ್ಗೆ 22 ವರ್ಷ ಯುವತಿಯೊಂದಿಗೆ ಲವ್ ಆಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಬೆಳೆದಿತ್ತು. ತಿಂಗಳುಗಳು ಕಳೆದರೂ ಗಂಡ ಬಾರದ ಕಾರಣ ಹೆಂಡತಿ ಮತ್ತೆ ಮರಳಿ ಬಂದಿದ್ದಾರೆ.
ಮನೆಗೆ ಬಂದು ಕಬೋರ್ಡ್ ಕ್ಲೀನ್ ಮಾಡುತ್ತಿದ್ದ ವೇಳೆ ಅಲ್ಲಿಟ್ಟಿದ್ದ 300 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿದಾಗ ಮೈದುನ ರಾಜೇಶ್ ಕೂಡ ತಾಯಿಯ ಕಬೋರ್ಡ್ ಅನ್ನು ಕೂಡ ಪರಿಶೀಲಿಸಿದ್ದಾರೆ. ಇದೇ ವೇಳೆ ತಾಯಿಗೆ ಸೇರಿದ ಚಿನ್ನಾಭರಣಗಳು ಮತ್ತು ಐದು ಚಿನ್ನದ ತುಂಡುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜೇಶ್ ಪೂನಮಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಮನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ ಶೇಖರ್ ಚಿನ್ನಾಭರಣಗಳನ್ನು ಕದ್ದು ತನ್ನ ಪ್ರೇಯಸಿಗೆ ನೀಡಿರುವುದನ್ನು ಬಾಯಿಬಿಟ್ಟಿದ್ದಾನೆ.
ಅಲ್ಲದೆ ತನಗೂ ವೆಲಚೇರಿ ಕೇದಾರಿಪುರಂ ಮುಖ್ಯರಸ್ತೆಯ ಯುವತಿ ಸ್ವಾತಿ (22) ಗೂ ಅನೈತಿಕ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಜೋಡಿಯು ಪೋರೂರು ಪ್ರದೇಶದ ಹೋಟೆಲ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ಹೀಗೆ ಭೇಟಿಯಾಗುತ್ತಿದ್ದ ವೇಳೆ ಪ್ರೇಯಸಿಯನ್ನು ಖುಷಿಪಡಿಸಲು ಶೇಖರ್ ಮನೆಯಲ್ಲಿದ್ದ ಚಿನ್ನವನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಹೋಗುತ್ತಿದ್ದ. ಅಷ್ಟೇ ಅಲ್ಲದೆ ಚಿನ್ನಾಭರಣಗಳನ್ನು ಮಾರಿ ಸ್ವಾತಿಗಾಗಿ ಕಾರು ಕೂಡ ಖರೀದಿಸಿ ಉಡುಗೊರೆಯಾಗಿ ನೀಡಿದ್ದ.
ಇವೆಲ್ಲವನ್ನು ಖಚಿತಪಡಿಸಿಕೊಂಡಿರುವ ಪೊಲೀಸರು ಇದೀಗ ಶೇಖರ್ ಹಾಗೂ ಆತನ ಗೆಳತಿ ಸ್ವಾತಿಯನ್ನು ಬಂಧಿಸಿ ಆಕೆಯ ಬಳಿಯಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಉಳಿದ ಆಭರಣಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಕುರುಡು ನಿಜ…ಆದರೆ ಉಳಿದವರೆಲ್ಲರೂ ಕಣ್ಮುಚ್ಚಿಕೊಂಡಿದ್ದಾರೆಂದು ಭಾವಿಸುವುದು ಮಾತ್ರ ಮೂರ್ಖತನ ಎಂದಷ್ಟೇ ಹೇಳಬಹುದು.