AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಮುದುಕರಿಗೆ ಬೆತ್ತಲೆ ವಿಡಿಯೋ ಕರೆ ಮಾಡಿ 3 ಲಕ್ಷ ರೂ. ಪೀಕಿದ ಖತರ್ನಾಕ್ ಲೇಡಿ..!

Crime News In Kannada: ಇದಾದ ಬಳಿಕ ಅದೇ ಏರಿಯಾದ ಮತ್ತೊರ್ವ ಮುದಕನನ್ನು ಟಾರ್ಗೆಟ್ ಮಾಡಿದ ಖತರ್ನಾಕ್ ಮಹಿಳೆ ಎರಡು ಬಾರಿ ಬೆತ್ತಲೆ ವಿಡಿಯೋ ಕರೆ ಮಾಡಿದ್ದಳು.

Crime News: ಮುದುಕರಿಗೆ ಬೆತ್ತಲೆ ವಿಡಿಯೋ ಕರೆ ಮಾಡಿ 3 ಲಕ್ಷ ರೂ. ಪೀಕಿದ ಖತರ್ನಾಕ್ ಲೇಡಿ..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 03, 2022 | 6:23 PM

Share

Crime News In Kannada: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತೆ ಎಂಬ ಮಾತಿದೆ. ಈ ಮಾತು ಈ ವೃದ್ಧರ ಪ್ರಕರಣದಲ್ಲಿ ಅಕ್ಷರಶಃ ನಿಜವಾಗಿದೆ. ಏಕೆಂದರೆ ಮುಂಬೈನ ಮಹಿಳೆಯೊಬ್ಬರು ಬೆತ್ತಲೆ ವಿಡಿಯೋ ಕರೆ ಮೂಲಕವೇ ಇಬ್ಬರನ್ನು ಯಾಮಾರಿಸಿ ಬರೋಬ್ಬರಿ 3.63 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಇಲ್ಲಿ ಇವರು ಮಾಡಿದ ತಪ್ಪೇನೆಂದರೆ ಅಪರಿಚಿತ ಕರೆ ಸ್ವೀಕರಿಸಿ ಮೈಮರೆತಿದ್ದು…ಅದನ್ನೇ ಐನಾತಿ ಲೇಡಿ ಬಂಡವಾಳ ಮಾಡಿಕೊಂಡು ಲಕ್ಷ ರೂ. ಪೀಕಿದ್ದಾಳೆ.

ಹೌದು, ಇಂತಹದೊಂದು ಪ್ರಕರಣ ದಾಖಲಾಗಿದ್ದು ಮುಂಬೈನ ಅಂಧೇರಿಯಲ್ಲಿ. ಅಪರಿಚಿತ ಮಹಿಳೆಯೊಬ್ಬಳು ವೃದ್ಧರನ್ನು ಗುರಿಯಾಗಿಸಿ ಬೆತ್ತಲೆ ವಿಡಿಯೋ ಕರೆ ಮಾಡಿದ್ದಾಳೆ. ಇದನ್ನು ಸ್ವೀಕರಿಸಿದ ಅಂಧೇರಿಯ 86 ವರ್ಷ ಮುದುಕರೊಬ್ಬರು ಮಹಿಳೆಯ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋದಲ್ಲಿ ಮಹಿಳೆಯ ಜೊತೆ ಚೆಲ್ಲಾಟವಾಡಿದ್ದಾರೆ.

ಆದರೆ ಖತರ್ನಾಕ್ ಮಹಿಳೆಯು ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದಳು. ಅದನ್ನೇ ಮುಂದಿಟ್ಟುಕೊಂಡು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಹಣ ನೀಡದಿದ್ದರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಇದನ್ನು ಕೇಳಿ ಭಯಗೊಂಡ ಹಿರಿಯ ವ್ಯಕ್ತಿಯು ಬರೋಬ್ಬರಿ 2.99 ಲಕ್ಷ ರೂ.ಗಳನ್ನು ಆಕೆಯ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಇದಾದ ಬಳಿಕ ಕೂಡ ಮಹಿಳೆಯು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇದರಿಂದ ಹೈರಾಣರಾದ ವ್ಯಕ್ತಿಯು ಅಂಬೋಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ಅಚ್ಚರಿ ಎಂದರೆ ಇದಾದ ಬಳಿಕ ಅದೇ ಏರಿಯಾದ ಮತ್ತೊರ್ವ ಮುದಕನನ್ನು ಟಾರ್ಗೆಟ್ ಮಾಡಿದ ಖತರ್ನಾಕ್ ಮಹಿಳೆ ಎರಡು ಬಾರಿ ಬೆತ್ತಲೆ ವಿಡಿಯೋ ಕರೆ ಮಾಡಿದ್ದಳು. ಈ ಕರೆಗಳನ್ನು ಸ್ವೀಕರಿಸಿ ಅವರು ಕೂಡ ಐನಾತಿಯ ಲೇಡಿಯ ಬಲೆಗೆ ಬಿದ್ದಿದ್ದರು. ಆ ಬಳಿಕ ರೆಕಾರ್ಡ್ ವಿಡಿಯೋ ತೋರಿಸುವ ಮೂಲಕ ಅವರನ್ನೂ ಕೂಡ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾಳೆ. ಇದರಿಂದ ಹೆದರಿದ ಆ ವ್ಯಕ್ತಿಯು ಬರೋಬ್ಬರಿ 64 ಸಾವಿರ ರೂ. ನೀಡಿದ್ದಾರೆ.

ಈ ಬಗ್ಗೆ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಇಲ್ಲಿ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಬೆತ್ತಲೆ ವಿಡಿಯೋ ಹಿಂದಿರುವ ಖತರ್ನಾಕ್ ಲೇಡಿಯು ಒಬ್ಬಳೇನಾ ಎಂಬುದರ ಬಗ್ಗೆ ತನಿಖೆಯನ್ನು ಆರಂಭಿಸಿರುವುದಾಗಿ ಅಂಬೋಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತೆ ಎಂಬ ಮಾತು ಸದ್ಯದ ಮಟ್ಟಿಗೆ ಈ ಇಬ್ಬರು ಹಿರಿಯ ನಾಗರಿಕರಿಗೆ ಅನ್ವಯಿಸುತ್ತದೆ. ಹೀಗಾಗಿ ಅಪರಿಚಿತ ಕರೆಗಳು ಬಂದಾಗ ಯಾಮಾರದಂತೆ ಎಚ್ಚರವಹಿಸಿ. ಇಂತಹ ಮೋಸದ ಬಲೆಗೆ ಬೀಳದಿರಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ