ಮೂಢನಂಬಿಕೆಯ ದಾಸರಾಗ್ತಿದ್ದಾರೆ ಗಡಿ ‌ಜಿಲ್ಲೆ ಜನ; ಬೀದರ್​ನ ಫತೆಪುರ ಗ್ರಾಮದವರಿಗೆ ‘ಶುಕ್ರವಾರ’ ಬಂದರೆ ಭಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 01, 2024 | 7:33 PM

ಶುಕ್ರವಾರ ಅಂದರೆ, ಒಂದು ರೀತಿಯ ಹಬ್ಬದ ದಿನ. ಆ ದಿನ‌ ಸಿನಿಮಾಗಳು‌ ತೆರೆಗೆ ಅಪ್ಪಳಿಸಿದರೆ, ಕೆಲವೂ ಕಡೆ ದೇವಿ ಪೂಜೆ ನಡೆಯುತ್ತದೆ. ಜೊತೆಗೆ ಮುಸ್ಲಿಂರು ನಮಾಜ್ ಮಾಡಿ ದೇವರನ್ನ ಪ್ರಾರ್ಥಿಸುತ್ತಾರೆ. ಆದರೆ, ಈ ಊರಲ್ಲಿ ಮಾತ್ರ ಜನ‌ ಯಾವುದೇ ಶುಭ ಕಾರ್ಯ ಮಾಡಲು ಭಯ ಪಡುತ್ತಾರೆ. ಯಾಕೇ ಹೀಗೆ ಅಂತಿರಾ? ಈ ಸ್ಟೋರಿ ಓದಿ.

ಮೂಢನಂಬಿಕೆಯ ದಾಸರಾಗ್ತಿದ್ದಾರೆ ಗಡಿ ‌ಜಿಲ್ಲೆ ಜನ; ಬೀದರ್​ನ ಫತೆಪುರ ಗ್ರಾಮದವರಿಗೆ ‘ಶುಕ್ರವಾರ ಬಂದರೆ ಭಯ
ಬೀದರ್​ನ ಫತೆಪುರ ಗ್ರಾಮದವರಿಗೆ ‘ಶುಕ್ರವಾರ' ಬಂದರೆ ಭಯ
Follow us on

ಬೀದರ್​, ಮಾ.01: ತಾಲೂಕಿನ ಫತೆಪುರ(Fatehpur) ಗ್ರಾಮದ ಜನರಿಗೆ ಶುಕ್ರವಾರ ಮಾತ್ರ ಕರಾಳ ದಿನವಾಗಿದೆ. ಈ ಊರಲ್ಲಿ ಸುಮಾರು ಹಿಂದೂಗಳು ಪ್ರತಿ ‘ಶುಕ್ರವಾರ'(Friday) ಯಾವುದೇ ನಿಶ್ಚಿತಾರ್ಥ, ಮದುವೆ, ವ್ಯಾಪಾರ, ಯಾವುದೇ ಒಳ್ಳೆಯ ಕೆಲಸ ಸೇರಿದಂತೆ ಆಚರಣೆಗಳನ್ನು ಮಾಡುವುದಿಲ್ಲ. ಒಂದು ವೇಳೆ ಶುಕ್ರವಾದಂದು ಶುಭಕಾರ್ಯ ಮಾಡಿದ್ರೆ, ಅವರಿಗೆ ಅಶುಭ, ಅವಘಡ ಕಟ್ಟಿಟ್ಟ ಬುತ್ತಿಯಂತೆ. ಹೀಗೆ ಕೆಲವು ಜನರು ಮೂಢನಂಬಿಕೆಗೆ ವಿರೋಧಿಸಿ ಶುಕ್ರವಾರದಂದು ಕಾರಹುಣ್ಣುಮೆ ನಡೆಸಲು ತಯ್ಯಾರು ನಡೆಸಿದ್ದರಂತೆ, ಅದೇ ವೇಳೆ ಊರಲ್ಲಿ ಮಹಿಳೆಯೊಬ್ಬಳು ಏಕಾಏಕಿ ಮೃತಪಟ್ಟಿದ್ದಾಳೆ. ಇಷ್ಟೇ ಅಲ್ಲದೆ ಈ ರೀತಿಯಾಗಿ ಶುಕ್ರವಾರ ದಂದು ಶುಭ ಕಾರ್ಯಮಾಡಲು ಮುಂದೆ ಬಂದಾಗ ಸಾಕಷ್ಟು ಕೇಡಕುಗಳು, ಸಾವು-ನೋವುಗಳು ಸಂಭವಿಸಿದ್ದರಿಂದ ಈ ಊರಲ್ಲಿ ಶುಭಕಾರ್ಯವನ್ನ ಶುಕ್ರವಾರದಂದು ಮಾಡುವುದನ್ನೇ ಕೈ ಬಿಡಲಾಗಿದೆ ಎಂದು ಇಲ್ಲಿನ ಯುವಕರು ಹೇಳುತ್ತಿದ್ದಾರೆ.

ಈ ಆಚರಣೆಗೆ ನಿಜವಾದ ಕಾರಣವೇನು?

ಇನ್ನು ಈ ಆಚರಣೆಯನ್ನ ಸುಮಾರು ಎರಡು ಶತಮಾನದಷ್ಟೂ ಹಿಂದಿನಿಂದಲೂ ಈ ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬರಲಾಗಿದೆ. ಒಂದು ವೇಳೆ ಶುಕ್ರವಾರ ಯಾವುದಾದರೂ ಹಬ್ಬ ಹರಿದಿನಗಳು ಬಂದರೆ, ಊರಿನ ಹಿರಿಯರು ಡಂಗರು ಸಾರಿಸಿ ಹಬ್ಬವನ್ನ ಒಂದು ದಿನ ಮುಂಚಿತವಾಗಿ ಇಲ್ಲವೇ, ಒಂದು ದಿನ ತಡವಾಗಿ ಆಚರಣೆ ಮಾಡುವಂತೆ ತಿಳಿಸುತ್ತಾರೆ. ಆಚರಣೆಗೆ ಈ ಊರಲ್ಲಿ ಒಂದು ಕಾರಣವೂ ಇದೆ, ಅದೇನೆಂದರೆ ಇತಿಹಾಸದಲ್ಲಿ ಬರುವ ಬಹುಮನಿ ಸಾಮ್ರಾಜ್ಯದ ಕಾಲದಲ್ಲಿ ಮಹಮ್ಮದ್ ಗವಾನನ ಗುರುಗಳಾಗಿದ್ದ ಫಕುರಲ್ ಗಿರಾನಿ, ಕಾರಣಂತರದಿಂದ ಶುಕ್ರವಾರ ದಿನವೇ ಮೃತಪಡುತ್ತಾರೆ.

ಇದನ್ನೂ ಓದಿ:ತುಮಕೂರು: ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ; ಸಾವಿಗೆ ಸತ್ಯಾಂಶ ತಿಳಿಯಲು ಹೂತ್ತಿದ್ದ ಮೃತದೇಹ ಹೊರತೆಗೆದ ಪೊಲೀಸ್ರು

ಫಕುರಲ್ ಗಿರಾನಿ ಅವರ ಮೃತದೇಹವನ್ನ ಫತೇಪುರ ಗ್ರಾಮದ ಹೊರಗಡೆಗೆ ಅಂತ್ಯಸಂಸ್ಕಾರ ಮಾಡಿ, ಅಲ್ಲಿ ಬೃಹತ್ ಮಸೀಧಿಯೊಂದನ್ನ ನಿರ್ಮಾಣ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಕೂಡ ಈ ಗ್ರಾಮದಲ್ಲಿ ಶುಕ್ರವಾರದಂದು ಯಾವುದೇ ಶುಭಕಾರ್ಯವನ್ನ ಮಾಡೋದೇ ಇಲ್ಲ. ಈ ಗ್ರಾಮಕ್ಕೆ ಸಾಕಷ್ಟು ಸಲ ಕೆಲ ಪ್ರಜ್ಜಾವಂತ ಯುವಕರು ಹೋಗಿ ನೀವೂ ಮಾಡುತ್ತಿರುವುದು ಮೂಢನಂಬಿಕೆ, ಇದನ್ನ ನಿಲ್ಲಿಸಿ ಎಂದು ಅದೇಷ್ಟೂ ಸಲ ಹೇಳಿದರೂ ನೀವೂ ಏನಾದರೂ ತಿಳಿದುಕೊಳ್ಳಿ, ನಾವು ಶುಕ್ರವಾರ ಯಾವುದೇ ಶುಭಕಾರ್ಯ ಮಾಡೋದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರಂತೆ.

ಈ ಗ್ರಾಮದಲ್ಲಿ ಸುಮಾರು ಎರಡೂವರೆ ಸಾವಿರ ಜನ ಸಂಖ್ಯೆಯಿದ್ದು, ನೂರಾರು ವರ್ಷಗಳಿಂದ ಈ ಸಂಪ್ರದಾಯವನ್ನ ಮಾಡುತ್ತಲೇ ಬಂದಿದ್ದಾರೆ. ಹಿಂದಿನಿಂದಲೂ ಇಂತಹ ಮೂಡ ನಂಬಿಕೆಯನ್ನ ನಂಬಿ ಬದುಕುತ್ತಿರುವ ಗ್ರಾಮದ ಜನರಿಗೆ, ಜಿಲ್ಲಾಢಳಿತ ಈ ಗ್ರಾಮದ ಕಡೆ ಗಮನ ಹರಿಸಿ ಮೂಢನಂಬಿಕೆ ನಿರ್ಮೂಲನಾ ಅಭಿಯಾನ ಮಾಡಿ ಗ್ರಾಮದ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಆಕಸ್ಮಿಕವಾಗಿ ಶತಮಾನಗಳ ಹಿಂದೆ ನಡೆದ ಘಟನೆಯನ್ನೇ ಇಂದಿಗೂ ಕೂಡ ಪಾಲಿಸಿಕೊಂಡು ಬರುತ್ತಿರುವುದು ಜನರಲ್ಲಿರುವ ಮೂಢ ನಂಬಿಕೆಗೆ ಸಾಕ್ಷಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ