International Women’s Day: ಬೀದರ್ ಮಹಿಳಾ ಪೊಲೀಸರಿಂದ ಬೈಕ್ ರ್ಯಾಲಿ
ಮಹಿಳೆಯರ ರಕ್ಷಣೆ ದೃಷ್ಟಿಯಿಂದ ರಚನೆಯಾದ ಬೀದರ್ನ ಅಕ್ಕ ಪಡೆ ಇಂದು (ಮಾ.05) ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಬೈಕ್ ರ್ಯಾಲಿ ನಡೆಯಿತು. ತಾಯಿ ಮಗು ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ ಅಕ್ಕ ಪಡೆಯ 30 ಮಹಿಳಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದಾರೆ.
ಮಹಿಳೆಯರ ರಕ್ಷಣೆ ದೃಷ್ಟಿಯಿಂದ ರಚನೆಯಾದ ಬೀದರ್ನ ಅಕ್ಕ ಪಡೆ ಇಂದು (ಮಾ.05) ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಬೈಕ್ ರ್ಯಾಲಿ ನಡೆಯಿತು. ತಾಯಿ ಮಗು ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ ಅಕ್ಕ ಪಡೆಯ 30 ಮಹಿಳಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದಾರೆ. ಯುವತಿಯರಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಪುರುಷರಷ್ಟೇ ಸಮಾನಳು. ಹೆಣ್ಣು ಅಬಲೆ ಅಲ್ಲ ಸಬಲೆ ಅಂತ ಸಂದೇಶ ಸಾರಿದರು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಪೊಲೀಸ್ ಅಧಿಕಾರಿಗಳು ಅಕ್ಕಪಡೆ ಇದೆ. ಈ ರ್ಯಾಲಿ ಮಾರ್ಚ್ 8 ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಂದು ಬೀದರ್ ಎಸ್ಪಿ ಕಚೇರಿಯಲ್ಲಿ ಮುಕ್ತಾಯಗೊಳ್ಳಲಿದೆ.