ಗೊರಟಾ ಸ್ಮಾರಕವನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

| Updated By: ಆಯೇಷಾ ಬಾನು

Updated on: Mar 26, 2023 | 3:20 PM

ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು(ಮಾರ್ಚ್ 26) ಬೀದರ್​ ಜಿಲ್ಲೆಗೆ ಭೇಟಿ ನೀಡಿದ್ದು, ಗೊರಟಾದಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.

ಗೊರಟಾ ಸ್ಮಾರಕವನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ
ಕೇಂದ್ರ ಸಚಿವ ಅಮಿತ್​ ಶಾ
Follow us on

ಬೀದರ್: ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಇಂದು(ಮಾರ್ಚ್ 26) ಬೀದರ್​ ಜಿಲ್ಲೆಗೆ ಭೇಟಿ ನೀಡಿದ್ದು, ಗೊರಟಾದಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ‘ಬಸವೇಶ್ವರರು ಅನುಭವ ಮಂಟಪದ ಮೂಲಕ‌ ಸಂಸತ್ತನ್ನು ಮೊದಲು ಪರಿಚಯಿಸಿದರು. ಇದು ನನ್ನ ಜೀವನದ ಮಹತ್ವದ ದಿನ. ನಿಜಾಮನ ಕ್ರೂರ ಸೈನ್ಯ ಗೊರಟಾದಲ್ಲಿ ಅನೇಕರನ್ನು ಹತ್ಯೆ ಮಾಡಿತ್ತು. ಇಂದು ಇದೇ ಗ್ರಾಮದಲ್ಲಿ 103 ಅಡಿ ಎತ್ತರದಲ್ಲಿ ರಾಷ್ಟ್ರದ್ವಜ ಹಾರಾಡುತ್ತಿದೆ. ಹಿಂದೆ ಹೈದ್ರಾಬಾದ್ ಪ್ರಾಂತ್ಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದಲ್ಲಿ ವಿಲೀನಗೊಳಿಸಿದ್ದರು. ಈ ಹಿಂದೆ ನಾನೇ ಗೊರಟಾ ಗ್ರಾಮದಲ್ಲಿ ಸ್ಮಾರಕದ ಶಂಕುಸ್ಥಾಪನೆ ಮಾಡಿದ್ದೆ, ಇಂದು ನಾನೇ ಉದ್ಘಾಟನೆ ಮಾಡಿದ್ದೇನೆ. ಗೊರಟ (ಬಿ) ಗ್ರಾಮದಲ್ಲಿ ಈ ಹುತಾತ್ಮರ ಸ್ಮಾರಕವನ್ನ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಅಭಿವೃದ್ದಿ ಪಡಿಸಿ ಮುಂದಿನ ದಿನದಲ್ಲಿ 50 ಕೋಟಿ ವೆಚ್ಚದಲ್ಲಿ ಅದ್ದೂರಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.

ಇನ್ನು ಇದೇ ಸಂದರ್ಭದಲ್ಲಿ ‘ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಹೈದ್ರಾಬಾದ್ ಪ್ರಾಂತ್ಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಕಾಂಗ್ರೆಸ್ ಮರೆತಿತ್ತು. ಆದರೆ ನಾವು ಆ ರೀತಿ ಮಾಡಿಲ್ಲ. ಇನ್ನು ರಾಜ್ಯದಲ್ಲಿ ನಾವು ಮೀಸಲಾತಿಯನ್ನು ಪರಿಷ್ಕರಿಸಿದ್ದೇವೆ. ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ 4 ಪರ್ಸೆಂಟ್ ಮೀಸಲಾತಿಯನ್ನು ನೀಡಿತ್ತು. ಅದನ್ನು ನಾವು ಲಿಂಗಾಯತರು ಸೇರಿದಂತೆ ಬೇರೆ ಸಮುದಾಯದವರಿಗೆ ನೀಡಿದ್ದೇವೆ. ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬರಲ್ಲ. ಆದರೆ ಕಾಂಗ್ರೆಸ್ ಮುಸ್ಲಿಂರ ತುಷ್ಟೀಗುಣಕ್ಕಾಗಿ ಮೀಸಲಾತಿ ನೀಡಿತ್ತು. ನಮ್ಮ ಸರ್ಕಾರ ಅದನ್ನು ತಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡಿದೆ ಎಂದರು. ಇನ್ನು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Sun, 26 March 23