Bidar News: ಗಡಿ ಜಿಲ್ಲೆ ಬೀದರ್​ನಲ್ಲಿ ಐದು ವರ್ಷದಲ್ಲಿ 60 ಕೋಟಿ ರೂ ಅಧಿಕ ಮೌಲ್ಯದ ಗಾಂಜಾ ವಶ

|

Updated on: May 25, 2023 | 7:24 AM

ಆ ಜಿಲ್ಲೆಯಲ್ಲಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಜಪ್ತಿಯಾಗುತ್ತಿದೆ. ಅಕ್ಕಪಕ್ಕದ ರಾಜ್ಯದಿಂದ ಅವ್ಯಾಹತವಾಗಿ ಗಾಂಜಾ ಜಿಲ್ಲೆಗೆ ಸರಬರಾಜಾಗುತ್ತಿದೆ. ಗಾಂಜಾ ಸಾಗಾಟ ಮಾರಾಟ ಮಾಡುವವರ ಮೇಲೆ ಪೋಲೀಸರು ಹದ್ದಿನ ಕಣ್ಣೀಟ್ಟರೂ ಕೂಡ ಗಾಂಜಾ ಘಾಟು ಕಡಿಮೆಯಾಗುತ್ತಿಲ್ಲ. ಕರ್ನಾಟಕದ ಕಿರೀಟ ಅಂತ ಕರೆಸಿಕೊಳ್ಳುವ ಗಡಿ ಜಿಲ್ಲೆಯಲ್ಲಿ ಈ ಗಾಂಜಾ ಹಾವಳಿ ಎಷ್ಟರಮಟ್ಟಿಗೆ ಇದೆ ಅಂತೀರಾ? ಇಲ್ಲಿದೆ ನೋಡಿ.

Bidar News: ಗಡಿ ಜಿಲ್ಲೆ ಬೀದರ್​ನಲ್ಲಿ ಐದು ವರ್ಷದಲ್ಲಿ 60 ಕೋಟಿ ರೂ ಅಧಿಕ ಮೌಲ್ಯದ ಗಾಂಜಾ ವಶ
ಬೀದರ್​ ಗಾಂಜಾ ಅರೆಸ್ಟ್​
Follow us on

ಬೀದರ್​: ತೆಲಂಗಾಣ-ಮಹಾರಾಷ್ಟ್ರದ(Telangana-Maharashtra)ಗಡಿ ಹಚ್ಚಿಕೊಂಡಿರುವ ಬೀದರ್(Bidar)​ನಲ್ಲಿ ಗಾಂಜಾ ಮಾರಾಟ ‌ಜಾಲ ಹಿನ್ನಲೆ ಐದು ವರ್ಷ ಅವಧಿಯಲ್ಲಿ ಬರೊಬ್ಬರಿ 66 ಪ್ರಕರಣ ದಾಖಲು, 51,85,919 ಕೆಜಿಯಷ್ಟು ಗಾಂಜಾ ಜಪ್ತಿ. ಅನ್ಯರಾಜ್ಯದಿಂದ ಗಾಂಜಾ ತಂದು ಅಂತರ್ ರಾಜ್ಯ ಹಾಗೂ ಬೀದರ್ ಮೂಲಕ ರಾಜ್ಯದ ಮೂಲೆ ಮೂಲೆಗೆ ಸಾಗಾಣಿಕೆ. ಗಾಂಜಾ ಸಾಗಾಣಿಕೆಯ‌ ಅಡ್ಡೆಯಾಗಿದೆಯಾ ಬೀದರ್ ಜಿಲ್ಲೆ. ಹೌದು ಹೀಗೊಂದು ಪ್ರಶ್ನೆ ಇದೀಗ ಜಿಲ್ಲೆಯ ಜನರಲ್ಲಿ ಕಾಡಲಾರಂಭಿಸಿದೆ. ಮಹಾರಾಷ್ಟ್ರ ತೆಲಂಗಾಣ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಈ ಗಾಂಜಾ ಹಾವಳಿ ಇದ್ದು, ಒಂದು ರೀತಿ‌ ಹಾಟ್ ಸ್ಪಾಟ್ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಕಳೆದ ಐದು ವರ್ಷದ ಅವಧಿಯಲ್ಲಿ 66 ಗಾಂಜಾ ಸಾಗಾಟ ಪ್ರಕರಣಗಳು ದಾಖಲಾಗಿದ್ದು, 51,85,919 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. 2019 ರಲ್ಲಿ 11 ಪ್ರಕರಣ ದಾಖಲಾಗಿದ್ದು 20 ಜನರನ್ನ ಬಂಧಿಸಲಾಗಿದೆ. ಬಂಧಿತರಿಂದ 11,47,174 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಐದು ವರ್ಷದಲ್ಲಿ ಸುಮಾರು 60,38,76,272 ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ

ಇನ್ನು 2020 ರಲ್ಲಿ 22 ಪ್ರಕರಣಗಳು ದಾಖಲಾಗಿದ್ದು, 23 ಆರೋಪಿಗಳನ್ನ ಬಂಧಿಸಲಾಗಿ ಅವರಿಂದ 8,03,395 ಕೆಜಿಯಷ್ಟು ಗಾಂಜಾ ಜಪ್ತಿ ಮಾಡಲಾಗಿದೆ. 2021 ರಲ್ಲಿ 12 ಗಾಂಜಾ ಪ್ರಕರಣದಲ್ಲಿ 41 ಜನರನ್ನ ಬಂಧಿಸಲಾಗಿದೆ. ಅವರಿಂದ 15,12,550 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. 2022 ರಲ್ಲಿ 12 ಪ್ರಕರಣ ದಾಖಲಾಗಿದ್ದು, 19 ಜನರನ್ನ ಬಂಧಿಸಲಾಗಿ 10,65,320 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. 2023ನೇ ಸಾಲಿನಲ್ಲಿ ಈವರೆಗೂ 9 ಪ್ರಕರಣಗಳು ದಾಖಲಾಗಿದ್ದು 31 ಆರೋಪಿಗಳನ್ನ ಬಂಧಿಸಲಾಗಿದ್ದು, 6,57,484 ಕೆಜಿಯಷ್ಟು ಜಪ್ತಿ ಮಾಡಲಾಗಿದೆ. ಒಟ್ಟಾರೆ ಈ ಐದು ವರ್ಷದಲ್ಲಿ ಸುಮಾರು 60 ಕೋಟಿ 38 ಲಕ್ಷ 76 ಸಾವಿರದಾ 272 ರೂಪಾಯಿ ಮೌಲ್ಯದ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಪ್ರತಿವರ್ಷವೂ ನಮ್ಮ ಪೊಲೀಸರು ಜೀವದ ಹಂಗು ತೊರೆದು ಗಾಂಜಾ ಸಾಗಾಟದಾರರ ಮೇಲೆ ದಾಳಿ ಮಾಡುತ್ತಿದ್ದಾರೆಂದು ಐಜಿಪಿ ಹೇಳುತ್ತಿದ್ದಾರೆ.

ಇದನ್ನೂ ಓದಿ:ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 1 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಲಿಕ್ಕೆ ಕಾರಣವೇನು?

ಇನ್ನು ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಲಿಕ್ಕೆ ಕಾರಣ ನೋಡುವುದಾದರೆ ಜಿಲ್ಲೆಯಲ್ಲಿ ಒಂದು ಕಡೆಗೆ ತೆಲಂಗಾಣ, ಇನ್ನೊಂದು ಕಡೆಗೆ ಮಹಾರಾಷ್ಟ್ರ ಗಡಿಹೊಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಬೀದರ್ ಜಿಲ್ಲೆಯನ್ನ ತೆಲಂಗಾಣ ಹಾಗೂ ಮಹಾರಾಷ್ಟ್ರ ಸುತ್ತುವರೆದಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ತಾಂಡಾಗಳು ಕೂಡ ಇಲ್ಲಿದ್ದು, ಇದಕ್ಕಾಗಿ ಅಕ್ರಮ ಚಟುವಟಿಕೆಗಳು ಇಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಗಾಂಜಾ ಅಷ್ಟೇ ಅಲ್ಲದೇ ಕಳ್ಳಬಟ್ಟಿ ದಂಧೆ ಇಲ್ಲಿ ಎಥೇಚ್ಛವಾಗಿ ನಡೆಯುತ್ತಿದ್ದು, ಪೊಲೀಸರು ಎಷ್ಟೇ ಪ್ರಯತ್ನಪಟ್ಟರು ಕೂಡ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ಬ್ರೆಕ್ ಹಾಕುವುದರಲ್ಲಿ ಸಾಧ್ಯವಾಗುತ್ತಿಲ್ಲ.

ಇನ್ನು ಜಿಲ್ಲೆಯ ಔರಾದ್ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಾಂಜಾ ರೇಡ್ ಆಗಿದೆ. ಜೊತೆಗೆ ಇಲ್ಲಿನ ಗುಡ್ಡಗಾಡಿ ಪ್ರದೇಶದಲ್ಲಿ ಗಾಂಜಾ ಬೆಳೆದು ಅದನ್ನ ಮಾರಾಟ ಮಾಡಲಾಗುತ್ತಿದೆಯೇ ಅನ್ನೋ ಅನುಮಾನವೀಗ ಕಾಡಲಾಗರಂಭಿಸಿದೆ. ವರ್ಷದಿಂದ ವರ್ಷಕ್ಕೆ ಗಾಂಜಾ ಮಾರಾಟ ಜಾಲ ಹೆಚ್ಚುತ್ತಲೇ ಸಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಜಿಲ್ಲೆಗೆ ಅಕ್ಕಪಕ್ಕದ ರಾಜ್ಯಗಳಿಂದ ಅವ್ಯಾಹತವಾಗಿ ಗಾಂಜಾ ಸಾಗಾಟವಾಗುತ್ತಿದೆ. ಇಲ್ಲಿ ಸಂಗ್ರಹವಾದ ಗಾಂಜಾವನ್ನ ರಾಜ್ಯದ ಮೂಲೆ ಮೂಲೆಗೆ ಸರಬರಾಜು ಮಾಡಲಾಗುತ್ತಿದೆ ಅನ್ನೋ ಮಾಹಿತಿ ಪೋಲೀಸರಿಗೂ ಕೂಡ ಗೊತ್ತಿದೆ. ಹೀಗಾಗಿ ಗಾಂಜಾ ಮಾರಾಟಗಾರರನ್ನ ಪತ್ತೆಹಚ್ಚಿ ಅದನ್ನ ಬುಡಸಮೇತ ಕಿತ್ತುಹಾಕಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕಲಬುರುಗಿ: ಗೂಡ್ಸ್​​ನಲ್ಲಿ ತಲೆದಿಂಬುಗಳ ಜೊತೆ ಗಾಂಜಾ ಸಾಗಾಟ; 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ

ಇನ್ನು ಹೊಸದಾಗಿ ಬೀದರ್ ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಚನ್ನಬಸವಣ್ಣ ಡಿಎಲ್ ಅವರು ಗಾಂಜಾ ಸಾಗಾಟಗಾರರ ಅಡ್ಡೆಗಳನ್ನ ಹುಡುಕಿಕೊಂಡು ದಾಳಿ ಮಾಡಿಸುತ್ತಿದ್ದಾರೆ. ಜೊತೆಗೆ ಈ ಗಾಂಜಾ ಸಾಗಾಟಗಾರರ ಕಿಂಗ್ ಪಿನ್​ಗಳನ್ನ ಬಂಧಿಸುತ್ತಿದ್ದು, ಈಗ ಸ್ವಲ್ಪ ಮಟ್ಟಿಗೆ ಗಾಂಜಾ ಸಾಗಾಟ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಒಟ್ಟಿನಲ್ಲಿ‌ ಗಡಿ ಜಿಲ್ಲೆ ಬೀದರ್ ಒಂದು ರೀತಿ ಗಾಂಜಾ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದು, ಮುಂದಿನ ದಿನಮಾನಗಳಲ್ಲಿ ಬೀದರ್ ಪೊಲೀಸರು ಯಾವ ರೀತಿಯಾಗಿ ಗಾಂಜಾ ತಡೆಗೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಬ್ರೆಕ್​ ಹಾಕ್ತಾರೆ ಅನ್ನೊದನ್ನ ಕಾದು ನೋಡಬೇಕಿದೆ.

ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 am, Thu, 25 May 23