Inspiring Story: ಒಟ್ಟಿಗೇ ಯುದ್ಧ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಬೀದರ್​ನ ಅಪ್ಪ- ಮಗಳು

| Updated By: ಸುಷ್ಮಾ ಚಕ್ರೆ

Updated on: Jul 06, 2022 | 12:21 PM

ಬೀದರ್​​ನ ಐಎಎಫ್​ ಸ್ಟೇಷನ್​​ನಲ್ಲಿ ಹಾಕ್​​-132 ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ಆಕೆಯ ತಂದೆ ಸಂಜಯ್​​ ಶರ್ಮಾ ಅವರ ಫೋಟೋಗಳು ಭಾರೀ ವೈರಲ್ ಆಗಿವೆ.

Inspiring Story: ಒಟ್ಟಿಗೇ ಯುದ್ಧ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಬೀದರ್​ನ ಅಪ್ಪ- ಮಗಳು
ಬೀದರ್​ನ ತಂದೆ- ಮಗಳು
Image Credit source: Hindustan Times
Follow us on

ಬೀದರ್: ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯಲ್ಲಿ (Indian Air Force) ತಂದೆ ಮತ್ತು ಮಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕರ್ನಾಟಕದ ಬೀದರ್ (Bidar) ಜಿಲ್ಲೆಯ ತಂದೆ- ಮಗಳು ಒಟ್ಟಾಗಿ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಫ್ಲೈಯಿಂಗ್​ ಆಫೀಸರ್​​ (Flying Officer Ananya Sharma) ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್​​ ಆಗಿರುವ ಸಂಜಯ್​ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೀದರ್​​ನ ಐಎಎಫ್​ ಸ್ಟೇಷನ್​​ನಲ್ಲಿ ಹಾಕ್​​-132 ವಿಮಾನವನ್ನು ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ಆಕೆಯ ತಂದೆ ಸಂಜಯ್​​ ಶರ್ಮಾ (Sanjay Sharma) ಅವರ ಫೋಟೋಗಳು ಭಾರೀ ವೈರಲ್ ಆಗಿವೆ. ಅಪ್ಪ- ಮಗಳ ಈ ಸ್ಫೂರ್ತಿದಾಯಕ ಸಾಧನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.

ಭಾರತೀಯ ವಾಯುಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ-ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಇವರಿಬ್ಬರೂ ಪಾತ್ರರಾಗಿದ್ದಾರೆ. ಫ್ಲೈಯಿಂಗ್​ ಆಫೀಸರ್​ ಆಗಿರುವ ಅನನ್ಯಾ ಯುದ್ಧ ವಿಮಾನದಲ್ಲಿ ಪದವಿ ಪಡೆದು, ತರಬೇತಿ ಪಡೆದುಕೊಳ್ಳುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ. ಮಗಳೊಂದಿಗೆ ಸಂಜಯ್​ ಶರ್ಮಾ ಫೈಟರ್ ಜೆಟ್ ಎದುರು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಭಾರತೀಯ ವಾಯುಪಡೆ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದ ಬೀದರ್​​ನಲ್ಲಿ ಮೇ 30ರಂದು ಈ ಅಪ್ಪ- ಮಗಳು ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸಿದ್ದಾರೆ. IAF ನೀಡಿದ ಮಾಹಿತಿ ಪ್ರಕಾರ, “ಬೀದರ್‌ನಲ್ಲಿ ಹಾಕ್-132ರ ರಚನೆಯಲ್ಲಿ ಹಾರಾಟ ನಡೆಸಲಾಯಿತು. ಅಲ್ಲಿ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ IAFನ ವೇಗದ ಮತ್ತು ಹೆಚ್ಚು ಉನ್ನತ ಯುದ್ಧ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ಗುಜರಾತ್ ವಿಭಾಗ ಟ್ವೀಟ್ ಮಾಡಿದೆ.

ಇದನ್ನೂ ಓದಿ: IAF Group C Recruitment 2022: 10ನೇ ತರಗತಿ ಪಾಸಾದವರಿಗೆ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ

“ಭಾರತೀಯ ವಾಯುಪಡೆಯಲ್ಲಿ ತಂದೆ ಮತ್ತು ಅವರ ಮಗಳು ಒಂದೇ ಯುದ್ಧವಿಮಾನದಲ್ಲಿ ಕಾರ್ಯಾಚರಣೆ ನಡೆಸಿದ ಯಾವುದೇ ಉದಾಹರಣೆಗಳಿಲ್ಲ” ಎಂದು ವಾಯುಪಡೆ ತಿಳಿಸಿದೆ. ಹೀಗಾಗಿ, ಬೀದರ್​ನ ಅಪ್ಪ- ಮಗಳ ಜೋಡಿ ಇದೀಗ ಇತಿಹಾಸ ನಿರ್ಮಿಸಿದೆ. ಅನನ್ಯಾ ಶರ್ಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಟೆಕ್ ಮುಗಿಸಿ, ಐಎಎಫ್‌ನಲ್ಲಿ ತರಬೇತಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅವರು ಫೈಟ್ ಪೈಲಟ್ ಆಗಿ ಆಯ್ಕೆಯಾಗಿದ್ದರು. ಆಕೆಯ ತಂದೆ ಏರ್ ಕಮೋಡೋರ್ ಸಂಜಯ್ ಶರ್ಮಾ 1989ರಿಂದ ವಾಯುಪಡೆಯ ಫೈಟರ್ ಸ್ಟ್ರೀಮ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.