ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸುತ್ತಿದೆ ಪುರಾತನ ಕಲ್ಮೇಶ್ವರ ದೇವಾಲಯ!
ಜಲಸಂಗ್ವಿ ಗ್ರಾಮದ ಪುರಾತನ ಕಲ್ಮೇಶ್ವರ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಥವಾಗಿದೆ. ಒಂಭತ್ತು ಶತಮಾನಗಳ ಇತಿಹಾಸವಿರುವ ಪುರಾತನ ದೇವಾಲಯ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದರೂ ಇದರ ಜಿರ್ಣೋದ್ಧಾರ ಕಾರ್ಯ ಮಾತ್ರ ಇಲ್ಲಿಯವರೆಗೂ ಆಗಿಲ್ಲ. ಈ ಮಂದಿರದ ಸುತ್ತಮುತ್ತಲು ಬಿದ್ದಿರುವ ಕಸ ಕಡ್ಡಿಗಳೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹೌದು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಜಲಸಂಗ್ವಿ ಗ್ರಾಮದಲ್ಲಿರುವ ಪುರಾತನ ಕಲ್ಮೇಶ್ವರ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಥವಾಗಿದೆ. ಸುಮಾರು 900 ವರ್ಷಗಳ ಹಿಂದೆ ಕಲ್ಯಾಣ […]
ಜಲಸಂಗ್ವಿ ಗ್ರಾಮದ ಪುರಾತನ ಕಲ್ಮೇಶ್ವರ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಥವಾಗಿದೆ. ಒಂಭತ್ತು ಶತಮಾನಗಳ ಇತಿಹಾಸವಿರುವ ಪುರಾತನ ದೇವಾಲಯ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದರೂ ಇದರ ಜಿರ್ಣೋದ್ಧಾರ ಕಾರ್ಯ ಮಾತ್ರ ಇಲ್ಲಿಯವರೆಗೂ ಆಗಿಲ್ಲ. ಈ ಮಂದಿರದ ಸುತ್ತಮುತ್ತಲು ಬಿದ್ದಿರುವ ಕಸ ಕಡ್ಡಿಗಳೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಹೌದು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಜಲಸಂಗ್ವಿ ಗ್ರಾಮದಲ್ಲಿರುವ ಪುರಾತನ ಕಲ್ಮೇಶ್ವರ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಥವಾಗಿದೆ. ಸುಮಾರು 900 ವರ್ಷಗಳ ಹಿಂದೆ ಕಲ್ಯಾಣ ಚಾಲುಕ್ಯರ ಅರಸ 6ನೇ ವಿಕ್ರಮಾದಿತ್ಯನು ಈ ದೇವಾಲಯ ನಿರ್ಮಾಣ ಮಾಡಿದ್ದಾರೆಂದು ಇಲ್ಲಿನ ಶಿಲಾಶಾಸನಗಳು ಹೇಳುತ್ತವೆ. 70 ಅಡಿ ಉದ್ದ 60 ಅಡಿ ಅಗಲ ವಿಸ್ತೀರ್ಣ ಹೊಂದಿರುವ ಈ ದೇವಾಲಯ ದೊಡ್ಡ ಚಪ್ಪಟೆ ಕಲ್ಲುಗಳಿಂದ ನಿರ್ಮಿಸಿಲಾಗಿದೆ. ನಕ್ಷತ್ರ ಆಕಾರದಲ್ಲಿರುವ ಈ ದೇವಾಲಯದ ಗೋಡೆಯಲ್ಲಿ 30 ಕ್ಕೂ ಹೆಚ್ಚು ಆಕರ್ಷಕ ಮದನಿಕಾ ನಾಟ್ಯ ರಾಣಿಯರ ಚಿತ್ರಗಳನ್ನ ಕೆತ್ತಲಾಗಿದೆ.
ನಾಟ್ಯ ಗಣಪತಿಯ ನಟನಾ ಭಂಗಿ ಕಲಾ ಪ್ರೀಯರನ್ನ ಆಕರ್ಷಸಿಸುತ್ತದೆ. ಜೊತೆಗೆ ಸುಂದರ ಭಂಗಿಯಲ್ಲಿರುವ ವೀರಭದ್ರ ದಕ್ಷಿಣಾಮೂರ್ತಿ, ದುರ್ಗಾ, ವರಾಹ, ದರ್ಪಣ ಸುಂದರೀ, ಕಾವ್ಯ ಕಣ್ಣಿಕೆ, ಶಾಸನ ಸುಂದರಿಯ ಮೂರ್ತಿಗಳು ಈ ದೇವಾಲಯದ ಸುತ್ತಲು ಕೆತ್ತಲಾಗಿದ್ದು ದೇವಾಲಯದ ಗತ ಇತಿಹಾಸವನ್ನ ಇವು ಸಾರೀ ಸಾರಿ ಹೇಳುತ್ತವೆ. ಈ ದೇವಾಲಯದ ಇತಿಹಾಸ ಏಳನೇ ತರಗತಿ ಹಾಗು ಪಿಯುಸಿ ಪಠ್ಯಪುಸ್ತಕದಲ್ಲಿ ಮಕ್ಕಳ ಪಾಠವಾಗಿರುವುದು ವಿಶೇಷವಾಗಿದೆ. ಇನ್ನೂ ಈ ದೇವಾಲಯ ಹಲವಾರು ವಿಶೇಷತೆಯನ್ನು ಹೊಂದಿದೆ ದೇವಾಲಯದ ನಾಲ್ಕುದಿಕ್ಕುಗಳಲ್ಲಿಯೂ ಸುಂದರವಾದ ಕೆತ್ತನೆಯನ್ನ ಮಾಡಲಾಗಿದೆ.
ಗರ್ಭಗುಡಿಯಲ್ಲಿ ಶಿವಲಿಂಗ ಮೂರ್ತಿ ಇದ್ದು ಮುಂದುಗಡೆ ನಂದಿ ಬಸವೇಶ್ವರನಿದ್ದಾನೆ. ದೇವಾಸ್ಥಾನದ ಹೊರಗಡೆ 9 ಬೃಹದಾಕಾರದ ಕಲ್ಲಿನ ಕಂಬಗಳಿದ್ದು ಅವುಗಳ ಮೇಲೆ ಸುಂದರ ಶಿಲ್ಪಕಲೆಯ ಕೆತ್ತನೆಯನ್ನ ಮಾಡಲಾಗಿದೆ. ಹಿಂದಿನ ಕಾಲದಲ್ಲಿ ಈ ಕಲ್ಲಿನ ಕಂಭಗಳಿಂದ ಇಂಪಾದ ಸಂಗೀತ ಕೆಳುತ್ತಿತ್ತು ಎಂದು ಪೂರ್ವಜರು ಹೇಳುತ್ತಾರೆ. ಯುಗಾದಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಇಲ್ಲಿನ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಇಂತಹ ಅಪರೂಪದ ದೇವಾಲಯ ಇಂದು ಪುಂಡ್ ಪೋಕರಿಗಳ ಶಾಲಾ ಮಕ್ಕಳು ಆಟವಾಡುವ ಸ್ಥಳವಾಗಿ ಮಾರ್ಪಾಡಾಗಿದೆ ಖೇದಕರ ವಿಚಾರವಾಗಿದೆ.
ಇಲ್ಲಿನ ಕಂಬಗಳು ಅಲ್ಲಲ್ಲಿ ಬಿರುಕುಬಿಟ್ಟಿದ್ದು ದೇವಾಲಯದ ಮೇಲ್ಚಾವಣಿಯು ಕೂಡಾ ಹಾಳಾಗಿದೆ. ಗೋಡೆಯ ಮೇಲೇ ಕೆತ್ತಲಾದ ಸುಂದರ ಕಲಾಕೃತಿಗಳು ಕೂಡಾ ಹಾಳಾಗಿವೆ ಇಂತಹ ಅಪರೂಪದ ದೇವಸ್ಥಾನವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ. ಈ ದೇವಾಲಯದಲ್ಲಿ ಕೆತ್ತಲಾಗಿರುವ ಶಾಸನ ಸುಂದರಿ ಚಿತ್ರ ಅದೇಷ್ಟೋ ಪುಸ್ತಕಗಳಲ್ಲಿ ಮುಖಪುಟದಲ್ಲಿ ಚಿತ್ರವಾಗಿದೆ. ಇಂತಹ ಅಪುರೂಪದಲ್ಲಿ ಅಪರೂಪವಾದ ದೇವಾಲಯವನ್ನ ಕಾಪಾಡಿಕೊಂಡು ಹೋಗಬೇಕಂದು ಇಲ್ಲಿನ ಜನರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ. ಈ ಪುರಾತನ ದೇವಾಲಯವನ್ನೋಮ್ಮೆ ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ.
ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರೀಯರಿಗೆ ನಿರಾಸೆ ಮೂಡಿಸಿದೆ. ಪುರಾತತ್ವ ಇಲಾಕೆಯ ಬೇಜವ್ದಾರಿತನ ಗ್ರಾಮಸ್ಥರ ನಿರ್ಲಕ್ಷದಿಂದ ಕನ್ನಡ ನಾಡಿತ ಗಥ ಇತಿಹಾಸವನ್ನ ಸಾರುವ ದೇವಾಲಯ ಇಂದು ತೆರೆಯ ಮರೆಯಲ್ಲಿ ಸರಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ. ಸ್ಥಳಿಯರಿಗೆ ದೇವಾಲಯದ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಈ ದೇವಾಲಯದ ಅರ್ಚಕರು ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದೇ ಸೂಜಿಗದ ವಿಷಯ.
ಇಂತಹ ಇತಿಹಾಸ ಸಾರುವ ದೇವಾಲಯವನ್ನು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ದೇಗುಲದ ಜಿರ್ಣೋದ್ದಾರಕ್ಕೆ ಸೂಕ್ತ ಕ್ರಮ ಕೈಗೊಂಡು ಅದರ ಸಂರಕ್ಷಣೆಯತ್ತ ಗಮನಹರಿಸಿರುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೆ ಇತಿಹಾಸ ಪ್ರಶಿದ್ಧ ದೇವಾಲಯವನ್ನು ಉಳಿಸಿ ಬೇಳೆಸಿಕೊಂಡು ಹೋಗುವುದು ನಮ್ಮ ನಿಮ್ಮೇಲ್ಲರ ಆದ್ಯಕರ್ತವ್ಯವಾಗಿದೆ -ಸುರೇಶ್ ನಾಯಕ್