ಬೀದರ್, ಮೇ.05: ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್(Bidar) ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿದಿನವೂ 41 ಡಿಗ್ರಿ ಸೆಲ್ಸಿಯಸ್ನಷ್ಟು ಆಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದ್ದು, ಸಾರ್ವಜನಿಕರು ಮಕ್ಕಳು, ಬಾಣಂತಿಯರು, ಹಸುಗೂಸುಗಳಿಗೆ ಇದರ ಎಫೆಕ್ಟ್ ಬೀರುತ್ತಿದೆ. ಗರ್ಭಿಣಿಯರು ಬಿಸಿಲ ತಾಪಕ್ಕೆ ಹಲವಾರು ಸಮಸ್ಯೆಗಳಿಗೆ ಒಳಗಾದರೆ, ಹೆರಿಗೆಯಾದ ಬಳಿಕ ಮಕ್ಕಳು ಮಾರಣಾಂತಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ತರಹದ ಬಿಸಿಲಿನ ತಾಪಮಾನ ಇರುತ್ತಿದ್ದು, ನವಜಾತ ಶಿಶುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅತಿಯಾದ ಬಿಸಿಲಿನಿಂದ ಹಸುಗೂಸುಗಳ ತೂಕ ಕಡಿಮೆಯಾಗುತ್ತಿದೆ. ಜ್ವರ, ಕಾಮಾಲೆ, ಕಡಿಮೆ ಮೂತ್ರ, ನಿರ್ಜಲೀಕರಣ ಸಮಸ್ಯೆ ಹೆಚ್ಚಾಗುತ್ತಿದೆ. ನಿರ್ಜಲೀಕರಣದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಕ್ಕಳು, ತಾಯಂದಿರು ಎಚ್ಚರಿಕೆ ವಹಿಸಬೇಕಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಹವಾಮಾನ ತಜ್ಞರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಬಿಸಿಲಿನ ತಾಪ 42 ಡಿಗ್ರಿ ಸೆಲ್ಸಿಯಸ್ ಧಾಖಲಾಗುತ್ತಿದೆ. ಕೆಲವೊಂದು ಕಡೆಯಲ್ಲಿ 43 ಡಿಗ್ರಿಗೂ ತಾಪಮಾನ ದಾಖಲಾಗಿದ್ದು, ಜನರು ಮನೆಯಿಂದ ಹೊರಬಾರದಂತಾ ಸ್ಥಿತಿ ಎದುರಾಗಿದೆ. ಇನ್ನೂ ಇಂತಹ ಸಮಯದಲ್ಲಿ ಹಸುಗೂಸುಗಳಿಗೆ ಚೆನ್ನಾಗಿ ಆರೈಕೆ ಮಾಡಬೇಕೆಂದು ಮಕ್ಕಳ ತಜ್ಜರು ಹೇಳುತ್ತಿದ್ದಾರೆ. ಹೆಚ್ಚಿನ ತಾಪಮಾನದಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಬಹುದು, ಹಸುಗೂಸುಗಳು ನಿರ್ಜಲೀಕರಣಗೊಳ್ಳಬಹುದು. ಇದನ್ನ ನಿರ್ಲಕ್ಷ್ಯ ಮಾಡಿದರೆ ಹಸುಗೂಸುಗಳ ಕಿಡ್ನಿ ವೈಫಲ್ಯ ಸಾಧ್ಯತೆಯೂ ಹೆಚ್ಚಾಗಿದೆ ಎಂದು ವೈದ್ಯರು ಹೇಳುತ್ತಿದ್ದು, ಕಂದಮ್ಮಗಳನ್ನ ಹೆಚ್ಚಿಗೆ ತಂಪಾಗಿಯೂ ಇಡದೆ, ಹೆಚ್ಚಿಗೆ ಬಿಸಿಯಾಗಿಯೂ ಇಡದಂತೆ ನೋಡಿಕೊಳ್ಳುವುದು ಹಸುಗೂಸುಗಳ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಂತೆ.
ಇದನ್ನೂ ಓದಿ:Heat Stroke: ಹೆಚ್ಚಿದ ತಾಪಮಾನ, ಕಲ್ಪತರು ನಾಡಿನ ಜನರಲ್ಲಿ ಹೀಟ್ ಸ್ಟ್ರೋಕ್ ಆತಂಕ
ಬಿಸಿಲಿನ ಝಳ ದಿನೇ ದಿನೇ ಏರುತ್ತಿದ್ದು ಜನರು, ಮಕ್ಕಳು, ಹಸುಗೂಸುಗಳು ತತ್ತರಿಸಿದ್ದಾರೆ. ಹಗಲಿಡಿ ಸೂರ್ಯನ ಪ್ರಕರತೆಗೆ ಕಾದು ಕಬ್ಬಿನದಂತಾಗುವ ಆರ್ಸಿಸಿ ಮನೆಗಳು, ರಾತ್ರಿ 12 ಗಂಟೆಯ ವರೆಗೂ ಬಿಸಿಯನ್ನ ಹೊರಸೂಸುವುದರಿಂದ ಮನೆಯಲ್ಲಿ ನೆಮ್ಮಂದಿಯಿಂದ ನಿದ್ದೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ 8 ಗಂಟೆಯಿಂದ ಆರಂಭವಾಗುವ ಬಿಸಿಲಿನ ಝಳ ಸಾಯಂಕಾಲ 5 ಗಂಟೆವರೆಗೂ ಇರುವುದರಿಂದ ಜನರು ಅಕ್ಷರಶಃ ಕಂಗಾಲಾಗಿದ್ದು, ಮನೆಯಿಂದ ಹೊರಗಡೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನಿಂದ ಮಕಕ್ಕಳಷ್ಟೇ ಅಲ್ಲ, ವಯಸ್ಸಾದವರೂ ಕೂಡ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಆಗಾದ ನೀರು ಕುಡಿಯಬೇಕು, ತಂಪುಪಾನೀಯ ಸೇವಿಸಬೇಕು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಸದಾಕಾಲ ಬರಗಾಲವನ್ನೇ ನೋಡುವ ಇಲ್ಲಿನ ಜನರು ಬಿರು ಬಿಸಿಲಿನ ಹೊಡೆತಕ್ಕೆ ನಲುಗಿಹೋಗಿದ್ದಾರೆ. ಪ್ರಾಣಿ-ಪಕ್ಷಗಳಿಗೆ ಕೂಡ ಬಿಸಿಲಿನ ಹೊಡೆತಕ್ಕೆ ಅವುಗಳು ಕೂಡ ನಲುಗಿ ಹೋಗಿದ್ದು, ನೀರು ಸಿಗದಂತಾ ವಾತಾವರಣ ನಿರ್ಮಾಣವಾಗಿದೆ. ಈ ಬಿಸಿಲಿನ ಹೊಡೆತಕ್ಕೆ ಬಾಣಂತಿಯರು, ಮಕ್ಕಳು, ಹಸೂಗೂಸುಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವೈದ್ಯರು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Sun, 5 May 24