ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸವಕಲ್ಯಾಣದಲ್ಲಿ ಪೈಶಾಚಿಕ ಕೃತ್ಯ!

ತಂದೆಯೇ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.

ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸವಕಲ್ಯಾಣದಲ್ಲಿ ಪೈಶಾಚಿಕ ಕೃತ್ಯ!
ಸಾಂದರ್ಭಿಕ ಚಿತ್ರ
Edited By:

Updated on: Jul 31, 2023 | 10:58 AM

ಬೀದರ್, (ಜುಲೈ, 31): ತಂದೆ (Father) ಮತ್ತು ಮಗಳ ವಿಶೇಷ ಬಾಂಧವ್ಯಕ್ಕೆ ಯಾವುದೂ ಸರಿಸಾಟಿಯಾಗುವುದಿಲ್ಲ. ಆದ್ರೆ, ಇಲ್ಲೊರ್ವ ತಂದೆ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ (Rape) ಪೈಶಾಚಿಕ ಕೃತ್ಯ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಎಲ್ಲರು ನಿದ್ರೆಗೆ ಜಾರಿದಾಗ ಅತ್ಯಾಚಾರ ಎಸಗುತ್ತಿದ್ದ. ಈಗ ಬಾಲಕಿಯ ಅಜ್ಜಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದು, ಈ ಬಗ್ಗೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಮೂರು ತಿಂಗಳಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ

ಮನೆಯಲ್ಲಿ ಎಲ್ಲರು ನಿದ್ರೆಗೆ ಜಾರಿದಾಗ ಅತ್ಯಾಚಾರ ಎಸಗುತ್ತಿದ್ದ. ಈಗ ಬಾಲಕಿಯ ಅಜ್ಜಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾನೆ. ಕಳೆದ ಒಂದು ವರ್ಷದಿಂದ 1 ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಹೆದರಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದರೊಂದು ಪೋಕ್ಸೊ ಕೇಸ್ ಆಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಿಲ್ಲ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:54 am, Mon, 31 July 23