ಬಿರುಬಿಸಿಲಿಗೆ ಕುಖ್ಯಾತಿಯಾದ ಬೀದರ್ ಜಿಲ್ಲೆ ಈಗ ಕೂಲ್ ಕೂಲ್! ಸ್ವೆಟ್ಟರ್‌, ಜರ್ಕಿನ್‌ ಹಾಕಿಯೂ ನಡುಗುತ್ತಿರುವ ಜನ

| Updated By: ಆಯೇಷಾ ಬಾನು

Updated on: Dec 24, 2021 | 1:30 PM

ತಂಪಾದ ವಾತಾವರಣ.. ಮಂಜಿನ ಮುಸುಕು ಸಿಟಿಗೆ ಮುತ್ತಿಕ್ಕುತ್ತಿದೆ. ಚುಮು ಚುಮು ಚಳಿ ಮೈ ಕೊರೆಯುತ್ತಿದೆ. ತಣ್ಣನೆಯ ತಂಗಾಳಿ ಮಧ್ಯೆ ಸೂರ್ಯರಶ್ಮಿ ಬಿಸಿ ತಟ್ಟುತ್ತಿದ್ರೆ ಸ್ವರ್ಗವೋ ಸ್ವರ್ಗ..

ಬಿರುಬಿಸಿಲಿಗೆ ಕುಖ್ಯಾತಿಯಾದ ಬೀದರ್ ಜಿಲ್ಲೆ ಈಗ ಕೂಲ್ ಕೂಲ್! ಸ್ವೆಟ್ಟರ್‌, ಜರ್ಕಿನ್‌ ಹಾಕಿಯೂ ನಡುಗುತ್ತಿರುವ ಜನ
ಬಿರುಬಿಸಿಲಿಗೆ ಕುಖ್ಯಾತಿಯಾದ ಬೀದರ್ ಜಿಲ್ಲೆ ಈಗ ಕೂಲ್ ಕೂಲ್! ಸ್ವೆಟ್ಟರ್‌, ಜರ್ಕಿನ್‌ ಹಾಕಿಯೂ ನಡುಗುತ್ತಿರುವ ಜನ
Follow us on

ಬೀದರ್: ಬಿಸಿಲಿಗೆ ಕುಖ್ಯಾತಿಯಾದ ಬೀದರ್ ಜಿಲ್ಲೆ ಈಗ ಕೂಲ್ ಕೂಲ್ ಆಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಹೌದು.. ಬೀದರ್ನಲ್ಲಿ ಹೆಚ್ಚಿನ ಪ್ರಮಾಣದ ಚಳಿ ದಾಖಲಾಗಿದೆ. ಕಳೆದ 3 ದಿನದಿಂದ 8 ರಿಂದ 9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನರು ಗಢಗಢ ನಡುಗುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಾದ್ರೂ ಸೂರ್ಯನ ಬಿಸಿಲೇ ಬೀಳ್ತಿಲ್ಲ. ಸಂಜೆ 5.30ಆಗ್ತಿದ್ದಂತೆ ಮೋಡಗಳಲ್ಲಿ ಸೂರ್ಯ ಮರೆಯಾಗಿ ಚಳಿ ಶುರುವಾಗಿ ಬಿಡುತ್ತೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಆವರಿಸುತ್ತೆ. ಈ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತಿದ್ರೆ, ಸ್ಥಳೀಯರಿಗೆ ಸ್ವಲ್ಪ ಕಿರಿಕಿರಿ ಅನ್ನಿಸುತ್ತಿದೆ.

ಚಳಿಯಿಂದ ಬಚಾವ್ ಆಗಲು ಜನರು ಬೆಂಕಿ ಕಾಯಿಸಿಕೊಳ್ತಿದ್ದಾರೆ. ಇನ್ ಕೆಲವರು ಸ್ವೆಟರ್ನಂತಹ ಉಡುಪುಗಳ ಮೊರೆ ಹೋಗಿದ್ದಾರೆ. ಸ್ವೆಟ್ಟರ್‌, ಜರ್ಕಿನ್‌ ಹಾಕ್ಕೊಂಡು ವಾಕಿಂಗ್, ಜಾಗಿಂಗ್ ಮಾಡ್ಬೇಕಾಗಿದೆ. ಇಂತಹ ಕೂಲ್ ವಾತಾವರಣದಿಂದ ಮಕ್ಕಳು ಹಾಗೂ ವೃದ್ಧರು ಹುಷಾರಾಗಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಂತಾ ಹವಾಮಾನ ಇಲಾಖೆ ತಜ್ಞರು ಮುನ್ನೆಚ್ಚರಿಕೆ ನೀಡ್ತಿದ್ದಾರೆ.

ಸದ್ಯ 8 ಡಿಗ್ರಿ ಇರುವ ತಾಪಮಾನ ಜನವರಿ ಮೊದಲ ವಾರದಲ್ಲಿ ಕನಿಷ್ಠ 5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದ್ಯಂತೆ.. ಆಗ ಬೀದರ್ ಇನ್ನೂ ಕೂಲ್ ಕೂಲ್ ಆಗಿರಲಿದೆ. ಯಾವುದಕ್ಕೂ ಜನರು ಎಚ್ಚರಿಕೆಯಿಂದ ಇರೋದು ಒಳ್ಳೇದು.

ವರದಿ: ಸುರೇಶ್, ಟಿವಿ9 ಬೀದರ್.

ಇದನ್ನೂ ಓದಿ: Badava Rascal: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Published On - 12:31 pm, Fri, 24 December 21