Bidar: ನಕಲಿ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ; 1 ಲಕ್ಷದ 37 ಸಾವಿರ ರೂ., ಲ್ಯಾಪ್​ಟಾಪ್, ಪ್ರಿಂಟರ್ ವಶಕ್ಕೆ

ಬೀದರ್ ನಗರದ ಸಿಎಂಸಿ ಕಾಲೊನಿಯ ಅಶೋಕ್, ಬೀದರ್ ತಾಲೂಕಿನ ಭೊರ್ಗಿ ಗ್ರಾಮದ ಸೈಯದ್ ಇಬ್ರಾಹಿಂ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ ಗ್ರಾಮದ ಉಮಾಕಾಂತ, ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದ ಜಾವೀದ್ ಪಟೇಲ್ ಬಂಧಿತ ಆರೋಪಿಗಳಾಗಿದ್ದಾರೆ.

Bidar: ನಕಲಿ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ; 1 ಲಕ್ಷದ 37 ಸಾವಿರ ರೂ., ಲ್ಯಾಪ್​ಟಾಪ್, ಪ್ರಿಂಟರ್ ವಶಕ್ಕೆ
ನಕಲಿ ನೋಟು ತಯಾರಕರು ಪೊಲೀಸ್ ವಶಕ್ಕೆ
Updated By: ganapathi bhat

Updated on: Aug 02, 2021 | 7:02 PM

ಬೀದರ್: ಇಲ್ಲಿನ ನಕಲಿ ನೋಟು ತಯಾರಿಕೆ ಅಡ್ಡೆ ಮೇಲೆ ಗಾಂಧಿ ಗಂಜ್ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಗಾಂಧಿಗಂಜ್ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 5 ನೂರು ಮುಖ ಬೆಲೆಯ 274 ನೋಟು ವಶಕ್ಕೆ ಪಡೆಯಲಾಗಿದೆ. ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ, ಜಾವೀದ್, ಬಂಧಿತ ಆರೋಪಿಗಳಾಗಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳಿಂದ ಐನ್ನೂರು ಮುಖಬೆಲೆಯ 274 ನೋಟು ಅಂದರೆ 1 ಲಕ್ಷ 37 ಸಾವಿರ ರೂಪಾಯಿ ಮೌಲ್ಯದ ಹಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ನಕಲಿ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಲ್ಯಾಪ್ ಟಾಪ್, ಪ್ರೀಂಟರ್, ಹಾಗೂ ಇತರೆ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದು ಎಲ್ಲಾ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೀದರ್ ನಗರದ ಸಿಎಂಸಿ ಕಾಲೊನಿಯ ಅಶೋಕ್, ಬೀದರ್ ತಾಲೂಕಿನ ಭೊರ್ಗಿ ಗ್ರಾಮದ ಸೈಯದ್ ಇಬ್ರಾಹಿಂ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ ಗ್ರಾಮದ ಉಮಾಕಾಂತ, ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದ ಜಾವೀದ್ ಪಟೇಲ್ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದೊಂದು ವರ್ಷದಿಂದ 20 ಲಕ್ಷಕ್ಕೂ ಹೆಚ್ಚು ನಕಲಿ ನೋಟು ಚಲಾವಣೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರು ತಯಾರಿಸಿದ್ದು ಐನೂರು ರೂಪಾಯಿ ನೋಟುಗಳಾಗಿದ್ದು, ಎಲ್ಲಾ ನಕಲಿ ನೋಟುಗಳು ಕೂಡಾ ಸದ್ಯ ಚಲಾವಣೆಯಲ್ಲಿದೆ. ಹೀಗಾಗಿ, ಸಾರ್ವಜನಿಕರು ಯಾರಿಂದಲೇ ಆದರೂ ಐನೂರು ರೂಪಾಯಿ ನೋಟು ಪಡೆದುಕೊಳ್ಳುವಾಗ ಆ ನೋಟನ್ನ ಪರೀಕ್ಷಿಸಿ ತೆಗೆದುಕೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ನಕಲಿ ನೋಟು, ಪ್ರಿಂಟರ್​ಗಳು ಪೊಲೀಸರ ವಶಕ್ಕೆ

ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಕೆ ಚುರುಕುಗೊಳಿಸಿದ್ದು ಈ ನಕಲಿ ನೋಟು ಜಾಲದಲ್ಲಿ ಯಾರೇ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಹೇಳಿದ್ದಾರೆ. ಹತ್ತಾರು ಆಯಾಮದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದು ಈ ಜಾಲದಲ್ಲಿ ಇರುವ ಇತರರನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Fake Currency: 500 ರೂಪಾಯಿ ನಕಲಿ ನೋಟುಗಳ ಪ್ರಮಾಣ ಒಂದು ವರ್ಷದಲ್ಲಿ ಶೇ 31ರಷ್ಟು ಹೆಚ್ಚಳ

ಬೀದರ್: 15 ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್!

(Police Raid on Bidar Fake Currency 1 lakh 37 thousand Rs notes Laptop Printers seized)

Published On - 6:59 pm, Mon, 2 August 21