ಬೊಮ್ಮಾಯಿ ಸಂಘ ಪರಿವಾರದಿಂದ ಬಂದಿಲ್ಲ, ಕಮ್ಯುನಿಸ್ಟ್ ಪಕ್ಷದಿಂದ ಬಂದಿದವರು; ಸಿಎಂ ವಿರುದ್ಧ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಕ್ರೋಶ
ದೇವಸ್ಥಾನ ಒಡೆಸುವ ಮುಖ್ಯಮಂತ್ರಿ ಬೊಮ್ಮಾಯಿ ನಡೆ ರಾಜ್ಯದ ಹಿಂದೂಗಳ ಮನಸಿಗೆ ನೋವು ತಂದಿದೆ. ಒಂದು ಧರ್ಮಕ್ಕೆ ಸೀಮಿತವಾಗಿ ದೇವಾಲಯ ಒಡೆಯುವಂತೆ ಸುಪ್ರೀಂ ಎಲ್ಲಿಯೂ ಹೇಳಿಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಮಸೀದಿ ಒಡೆದಿರಿ, ಎಷ್ಟು ಚರ್ಚ್ ಒಡೆದಿರಿ ಎಂದು ಮಾಹಿತಿ ಕೊಡಿ ಎಂದು ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಬೀದರ್: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಯಾವುದೆ ಅಭಿವೃದ್ಧಿ ಕೈಗೊಂಡಿಲ್ಲ. ಬದಲಾಗಿ ಹಿಂದೂ ದೇವಾಲಯಗಳನ್ನ ಧ್ವಂಸ ಮಾಡಲು ಅಧಿಕಾರಿಗಳನ್ನು ಚೂ ಬಿಟ್ಟದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೀದರ್ನಲ್ಲಿ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ದೇವಸ್ಥಾನ ಒಡೆಸುವ ಮುಖ್ಯಮಂತ್ರಿ ಬೊಮ್ಮಾಯಿ ನಡೆ ರಾಜ್ಯದ ಹಿಂದೂಗಳ ಮನಸಿಗೆ ನೋವು ತಂದಿದೆ. ಒಂದು ಧರ್ಮಕ್ಕೆ ಸೀಮಿತವಾಗಿ ದೇವಾಲಯ ಒಡೆಯುವಂತೆ ಸುಪ್ರೀಂ ಎಲ್ಲಿಯೂ ಹೇಳಿಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಮಸೀದಿ ಒಡೆದಿರಿ, ಎಷ್ಟು ಚರ್ಚ್ ಒಡೆದಿರಿ ಎಂದು ಮಾಹಿತಿ ಕೊಡಿ ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿ ಕ್ಷೇತ್ರದಲ್ಲಿಯೇ ಅಕ್ರಮ ಮಸೀದಿಗಳಿವೆ ತಾಕತ್ತಿದ್ದರೆ ಅವುಗಳನ್ನ ನೆಲಸಮ ಮಾಡಿ. ಅವರ ಕ್ಷೇತ್ರದ ಬಂಕಾಪುರದಲ್ಲಿ ಅಕ್ರಮ ಮಸೀದಿಗಳಿವೆ ಅವುಗಳನ್ನ ಒಡೆದರೆ ಮತ ಹಾಕೊದಿಲ್ಲ. ಮುಸ್ಲಿಂಮರು ಮತ ಹಾಕೊದಿಲ್ಲ ಅಂತಾ ಮಸೀದಿಗಳನ್ನು ಅವರು ಒಡೆಯುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಿಕ್ಕೆ ಬಂದ ಬಿಜೆಪಿಯೇ ಹಿಂದೂ ದೇವಾಲಯಗಳನ್ನು ಕೆಡುವುತ್ತಿದ್ದಾರೆ. ಬೊಮ್ಮಾಯಿ ಸಂಘ ಪರಿವಾರದಿಂದ ಬಂದಿಲ್ಲ. ಕಮ್ಯುನಿಸ್ಟ್ ಪಕ್ಷದಿಂದ ಬಿಜೆಪಿಗೆ ಬಂದವರು. ಬಿಜೆಪಿಯಲ್ಲಿಯೇ ಟಿಪ್ಪುಸುಲ್ತಾನ ಇದ್ದಾನೆ ಮೊಹ್ಮದ್ ಗಜ್ನಿ ಕೂಡಾ ಇಲ್ಲೆ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ವಯೋಸಹಜ ಕಾಯಿಲೆಯಿಂದ ಸಾಕು ನಾಯಿ ಸಾವು, ದುಃಖ ಹಂಚಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
Published On - 1:11 pm, Tue, 21 September 21