ಕಬ್ಬು ಕಟಾವು ಕಾರ್ಮಿಕರ ಅಲೆದಾಟ, ಶಿಕ್ಷಣವಿಲ್ಲದೆ ಮಕ್ಕಳ ಭವಿಷ್ಯ ಅತಂತ್ರ..!
ಬೀದರ್: ನಿತ್ಯ ಅಲೆದಾಟ. ಇವತ್ತೊಂದು ಊರು. ನಾಳೆ ಮತ್ತೊಂದು ಊರು. ಎಲ್ಲಿ ಕೂಲಿ ಸಿಗುತ್ತೋ ಅಲ್ಲಿ ಹೋಗೋದೇ. ಅಲ್ಲಿ ಐದಾರು ತಿಂಗಳಿದ್ದು ಕಾರ್ಮಿಕರು ದುಡಿದು ಹೊಟ್ಟೆಪಾಡು ನೀಗಿಸಿಕೊಳ್ತಾರೆ. ಆದ್ರೆ, ಇದ್ರ ಮಧ್ಯೆ ಪಾಪ ಮಕ್ಕಳ ಭವಿಷ್ಯವೇ ಹಳ್ಳ ಹಿಡಿಯುತ್ತಿದೆ. ನೂರಾರು ಆಸೆ.. ಹತ್ತಾರು ಕನಸು.. ಹಲವಾರು ಗುರಿ.. ಭವಿಷ್ಯ ರೂಪಿಸಿಕೊಳ್ಳೋ ಹುಮ್ಮಸ್ಸಿನಲ್ಲಿದ್ದ ಈ ಪುಟಾಣಿಗಳು ಭವಿಷ್ಯವೇ ಅಡ್ಡ ದಾರಿ ಹಿಡಿದಿದೆ. ಬಾಳು ಬೆಳಗಬೇಕಿದ್ದ ಶಿಕ್ಷಣ ಮರೀಚಿಕೆಯಾಗಿದೆ. ಕಬ್ಬು ಕಟಾವು ಮಾಡೋ ಕಾರ್ಮಿಕರ ಅಲೆದಾಟ..! ನಿಜ.. ಹೊಟ್ಟೆ ಪಾಡು […]
ಬೀದರ್: ನಿತ್ಯ ಅಲೆದಾಟ. ಇವತ್ತೊಂದು ಊರು. ನಾಳೆ ಮತ್ತೊಂದು ಊರು. ಎಲ್ಲಿ ಕೂಲಿ ಸಿಗುತ್ತೋ ಅಲ್ಲಿ ಹೋಗೋದೇ. ಅಲ್ಲಿ ಐದಾರು ತಿಂಗಳಿದ್ದು ಕಾರ್ಮಿಕರು ದುಡಿದು ಹೊಟ್ಟೆಪಾಡು ನೀಗಿಸಿಕೊಳ್ತಾರೆ. ಆದ್ರೆ, ಇದ್ರ ಮಧ್ಯೆ ಪಾಪ ಮಕ್ಕಳ ಭವಿಷ್ಯವೇ ಹಳ್ಳ ಹಿಡಿಯುತ್ತಿದೆ.
ನೂರಾರು ಆಸೆ.. ಹತ್ತಾರು ಕನಸು.. ಹಲವಾರು ಗುರಿ.. ಭವಿಷ್ಯ ರೂಪಿಸಿಕೊಳ್ಳೋ ಹುಮ್ಮಸ್ಸಿನಲ್ಲಿದ್ದ ಈ ಪುಟಾಣಿಗಳು ಭವಿಷ್ಯವೇ ಅಡ್ಡ ದಾರಿ ಹಿಡಿದಿದೆ. ಬಾಳು ಬೆಳಗಬೇಕಿದ್ದ ಶಿಕ್ಷಣ ಮರೀಚಿಕೆಯಾಗಿದೆ.
ಕಬ್ಬು ಕಟಾವು ಮಾಡೋ ಕಾರ್ಮಿಕರ ಅಲೆದಾಟ..! ನಿಜ.. ಹೊಟ್ಟೆ ಪಾಡು ಕಾರ್ಮಿಕರನ್ನು ಊರೂರು ಅಲೆದಾಡುವಂತೆ ಮಾಡ್ತಿದೆ. ಆದ್ರೆ, ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಂತೂ ಕಬ್ಬು ಕಟಾವು ಮಾಡೋ ಕಾರ್ಮಿಕರ ಮಕ್ಕಳ ಪಾಡು ಹೇಳತೀರದ್ದು. ನೆರೆಯ ಮಹಾರಾಷ್ಟ್ರ, ಆಂಧ್ರ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಕಬ್ಬು ಕಟಾವು ಮಾಡಲು ನೂರಾರು ಕುಟುಂಬಗಳು ಬರ್ತಿವೆ. ಐದಾರು ತಿಂಗಳು ಇಲ್ಲೇ ಇದ್ದು ಕಬ್ಬು ಕಟಾವು ಮಾಡ್ತಾರೆ. ಆದ್ರೆ, ಇವ್ರ ಜೊತೆ ಬರೋ ಮಕ್ಕಳು ಅನಿವಾರ್ಯವಾಗಿ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಕಲಿಯುವ ವಯಸ್ಸಿನಲ್ಲಿ ನೂರಾರು ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಅಲೆಮಾರಿ ಜೀವನದಿಂದ ಪುಟಾಣಿಗಳ ಭವಿಷ್ಯ ಕತ್ತಲಿನತ್ತ ಸಾಗುತ್ತಿದೆ.
ಹೀಗೆ ವಲಸೆ ಬರೋ ಕಾರ್ಮಿಕರ ಮಕ್ಕಳಿಗಾಗಿ ಟೆಂಟ್ ಸ್ಕೂಲ್ ನಿರ್ಮಿಸಿ, ಶಿಕ್ಷಣ ನೀಡಬೇಕು ಅಂತಾ ಸರ್ಕಾರದ ಯೋಜನೆ ಇದೆ. ಆದ್ರೆ, ಈ ಯೋಜನೆ ಬೀದರ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಕ್ಷಣ ಇಲಾಖೆ ಹೆಸರಿಗೆ ಮಾತ್ರ ಒಂದೇ ಒಂದು ಟೆಂಟ್ ಶಾಲೆ ತೆರೆದಿದ್ದು, ಇನ್ನೂ 8 ಕಡೆಗಳಲ್ಲಿ ಟೆಂಟ್ ಶಾಲೆ ತೆರೆದಿಲ್ಲ.
ಒಂದ್ಕಡೆ, ಕಾರ್ಮಿಕರ ಹೊಟ್ಟೆಪಾಡು.. ಕೂಲಿ ಮಾಡಿಲ್ಲ ಅಂದ್ರೆ ಜೀವನವೇ ನಡೆಯಲ್ಲ.. ಮತ್ತೊಂದ್ಕಡೆ ಪುಟಾಣಿಗಳ ಭವಿಷ್ಯವೇ ಅಭದ್ರವಾಗುತ್ತಿದೆ.. ಶಿಕ್ಷಣ ಸಿಗದೇ ವಂಚಿತರಾಗ್ತಿದ್ದಾರೆ.. ಇನ್ನಾದ್ರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಮಕ್ಕಳ ಬಾಳು ಬೆಳಗಬೇಕಿದೆ.
Published On - 1:26 pm, Wed, 1 January 20