ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಬೀದರಿನ ಪುರಾತನ ಶಿವ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾದ ಶಾಸಕ, ಪುರಾತತ್ವ ಇಲಾಖೆ

| Updated By: ಸಾಧು ಶ್ರೀನಾಥ್​

Updated on: Mar 11, 2024 | 1:34 PM

ಹನ್ನೊಂದು ಶತಮಾನದಷ್ಟು ಪುರಾತನವಾದ ಈ ದೇವಸ್ಥಾನವೂ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಮಾಹಿತಿ ಕೊಟ್ಟಾಗ ಈ ದೇವಸ್ಥಾನದ ಬಗ್ಗೆ ಟಿವಿ9 ಡಿಜಿಟಲ್ ನಲ್ಲಿ ವರದಿ ಪ್ರಸಾರ ಮಾಡಿದ ಬೆನ್ನಲೇ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಮಂದಿರದ ಜೀರ್ಣೋದ್ದಾರಕ್ಕೆ ಮುಂದಾದರು.

ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಬೀದರಿನ ಪುರಾತನ ಶಿವ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾದ ಶಾಸಕ, ಪುರಾತತ್ವ ಇಲಾಖೆ
ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಬೀದರಿನ ಶಿವ ದೇಗುಲ ಜೀರ್ಣೋದ್ಧಾರ
Follow us on

ಹನ್ನೊಂದು ಶತಮಾನಗಳಷ್ಟು ಪುರಾತನ ದೇವಾಲಯವದು. ಪುರಾತತ್ವ ಇಲಾಖೆ, ಗ್ರಾಮಸ್ಥರು ನಿರ್ಲಕ್ಷದಿಂದ ದೇವಸ್ಥಾನ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿತ್ತು. ಜಿರ್ಣೋದ್ದಾರಕ್ಕೆ ಕಾದಿದೆ ಎಂದು ಟಿವಿ9 ಡಿಜಿಟಲ್​​ ನಲ್ಲಿ ವರದಿ ಪ್ರಸಾರವಾದ ಬೆನ್ನಲೇ ದೇವಸ್ಥಾನ ಜಿರ್ಣೋದ್ದಾರಕ್ಕೆ ಎರಡೂವರೆ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಗ್ರಾಮಸ್ಥರ ಹರ್ಷ ಹೆಚ್ಚಿಸುವಂತೆ ಮಾಡಿದೆ.

ಜೀರ್ಣೋದ್ಧಾರದತ್ತ ಪುರಾತನ ಶಿವನ‌ ದೇವಾಲಯ…ರಾಮಲಿಂಗ ಮಂದಿರಕ್ಕೆ ಪುರಾತತ್ವ ಇಲಾಖೆಯ ಅಧ್ಯಯನ ತಂಡ ಭೇಟಿ… ಹನ್ನೊಂದು‌ ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯ…ಶ್ರೀರಾಮ ಚಂದ್ರ ಅಯೋಧ್ಯೆಗೆ ಹೋಗುವಾಗ ಇಲ್ಲಿ ಲಿಂಗ ಸ್ಥಾಪನೆ ಮಾಡಿದ್ದಾರೆಂದು ಹೇಳುತ್ತದೆ ಇತಿಹಾಸ. ಬೀದರ್ ತಾಲೂಕಿನ ಬನ್ನಳ್ಳಿ ಗ್ರಾಮದಲ್ಲಿ ಕ್ರಿಸ್ತ ಶಕ 1131-32 ರಲ್ಲಿ ಚಾಲುಕ್ಯರ ಅರಸ ಭೂಲಮಲ್ಲನು ಕಲ್ಯಾಣಪುರವನ್ನ ಆಳುತ್ತಿದ್ದಾಗ ರಾಮಲಿಂಗ ಮಂದಿರವನನ್ನ ಸೋಮವಾರ ಒಂದೇ ದಿನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಈ ದೇವಸ್ಥಾನದಲ್ಲಿ ಶಾಸನದಲ್ಲಿ ಉಲ್ಲೇಖಿಸಾಗಿದೆ.

ಹನ್ನೊಂದು ಶತಮಾನದಷ್ಟು ಪುರಾತನವಾದ ಈ ದೇವಸ್ಥಾನವೂ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಮಾಹಿತಿ ಕೊಟ್ಟಾಗ ಈ ದೇವಸ್ಥಾನದ ಬಗ್ಗೆ ಟಿವಿ9 ಡಿಜಿಟಲ್ ನಲ್ಲಿ ವರದಿ ಪ್ರಸಾರ ಮಾಡಿದ ಬೆನ್ನಲೇ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಮಂದಿರದ ಜೀರ್ಣೋದ್ದಾರ ಮಾಡಬೇಕೆಂಬ ಹಿನ್ನೆಲೆಯಲ್ಲಿ ಬೆಲ್ದಾಳೆ ಅವರು ಪುರಾತತ್ವ ಇಲಾಖೆ ಧಾರವಾಡ ಹಾಗೂ ಬೀದ‌ರ್ ಜಿಲ್ಲೆಯ ಅಧಿಕಾರಿಗಳನ್ನು ಆಹ್ವಾನಿಸಿ ಪರಿಶೀಲನೆ ನಡೆಸಿದರು.

ಹಂಪಿಯ ಪುರಾತತ್ವ ಇಲಾಖೆಯ ಅಧೀಕ್ಷಕ ಡಾ. ನಿಹೆಲ್ ದಾಸ್, ಅಧೀಕ್ಷಕ ಅಭಿಯಂತರ ಬರಣಿಧರನ್, ಬೀದರ್ ಉಪವಲಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ದ ದೇಸಾಯಿ, ಕಿರಣಬಾಬು ತಂಡ ಮಂದಿರದಲ್ಲಿನ ಲಿಂಗ, ವಿವಿಧ ಮೂರ್ತಿ, ಶಿಲೆಗಳು, ಕಲ್ಲಿನಲ್ಲಿ ಕೆತ್ತಲಾಗಿರುವ ಲಿಪಿ ಸೇರಿ ಸಮಗ್ರ ಪರಿಶೀಲನೆ ನಡೆಸಿ ಮತ್ತೆ ಮತ್ತೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಬೆನ್ನುಬಿದ್ದು ದೇವಸ್ಥಾನದ ಜಿರ್ಣೋದ್ದಾರಕ್ಕೆ ಎರಡೂವರೆ ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಿಸಿದ್ದಾರೆ. ಶೀಘ್ರವೇ ಟೆಂಡರ್ ಕರೆದು ದೇವಸ್ಥಾನದ ಜಿರ್ಣೋದ್ದಾರ ಕಾರ್ಯ ಆಗಲಿದೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.

Also Read: ಬೀದರ್ – ಸಾವಿರ ವರ್ಷ ಪುರಾತನ ದೇವಸ್ಥಾನ ಅಧಿಕಾರಿಗಳ ನಿರ್ಲಕ್ಷದಿಂದ ಅನಾಥವಾಗಿದೆ

ಇನ್ನು ದೇವಸ್ಥಾನದ ಈಗಿನ ಸ್ಥಿತಿಗತಿಯನ್ನ ನೋಡುವುದಾದರೆ ಬನ್ನಳ್ಳಿ ಗ್ರಾಮದ ಹಣಮಂತರಾವ ಪಾಟೀಲ್ ಎಂಬುವರ ತೋಟದಲ್ಲಿ ಈ ರಾಮಲಿಂಗ ಮಂದಿರವಿದ್ದು ಶೇಕಡಾ 50 ರಷ್ಟು ದೇವಸ್ಥಾನ ಬಿದ್ದು ಹೋಗಿದ್ದು ಅವಸಾನದ ಅಂಚಿನಲ್ಲಿದೆ. ಶತಮಾನದಿಂದ ಇಂದಿಗೂ ಇಲ್ಲಿ ಸಂಪ್ರದಾಯದಂತೆ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.

ಈ ದೇವಾಲಯ ಹಲವಾರು ವಿಶೇಷತೆಯನ್ನು ಹೊಂದಿದೆ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿಯೂ ಸುಂದರವಾದ ಕೆತ್ತನೆಯನ್ನ ಮಾಡಲಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗ ಮೂರ್ತಿ ಇದ್ದು ಮುಂದುಗಡೆ ನಂದಿ ಬಸವೇಶ್ವರನಿದ್ದಾನೆ. ದೇವಸ್ಥಾನದ ಹೊರಗಡೆ 9 ಬೃಹದಾಕಾರದ ಕಲ್ಲಿನ ಕಂಬಗಳಿದ್ದು ಅವುಗಳ ಮೇಲೆ ಸುಂದರ ಶಿಲ್ಪಕಲೆಯ ಕೆತ್ತನೆಯನ್ನ ಮಾಡಲಾಗಿದೆ.

ಹಿಂದಿನ ಕಾಲದಲ್ಲಿ ಈ ಕಲ್ಲಿನ ಕಂಭಗಳಿಂದ ಇಂಪಾದ ಸಂಗೀತ ಕೆಳುತ್ತಿತ್ತು ಎಂದು ಪೂರ್ವಜರು ಹೇಳುತ್ತಾರೆ. ಯುಗಾದಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಇಲ್ಲಿನ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಇಂತಹ ಅಪರೂಪದ ದೇವಾಲಯ ಇಂದು ಪುಂಡ ಪೋಕರಿಗಳು, ಶಾಲಾ ಮಕ್ಕಳು ಆಟವಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿನ ಕಂಬಗಳು ಅಲ್ಲಲ್ಲಿ ಬಿರುಕುಬಿಟ್ಟಿದ್ದು ದೇವಾಲಯದ ಮೇಲ್ಚಾವಣಿಯು ಕೂಡಾ ಹಾಳಾಗಿದೆ. ಹೀಗಾಗಿ ಮಂದಿರದ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆ ಮುಂದಾಗಿದೆ. ಇದು ಗ್ರಾಮಸ್ಥರ ಹರ್ಷಕ್ಕೂ ಕಾರಣವಾಗಿದೆ.

ಈ ಪುರಾತನ ದೇವಾಲಯವನ್ನೊಂದು ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಆದರೆ ತಡವಾಗಿಯಾದರೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂದಾಗಿದ್ದು ಖುಷಿಯ ವಿಚಾರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ