ಆರೋಗ್ಯ ಇಲಾಖೆ ಎಡವಟ್ಟು: ಸೋಂಕು ಇದ್ದಿದ್ದು ಒಬ್ಬರಿಗೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ
ಬೆಂಗಳೂರು: ಕೊರೊನಾ ವೈರಸ್ ದೇಶವನ್ನು ಬೆನ್ನು ಬಿಡದೆ ಕಾಡುತ್ತಿದೆ. ಸೋಂಕನ್ನು ನಿಯಂತ್ರಿಸಲು ದೊಡ್ಡ ಹೋರಾಟವೆ ನಡೆಯುತ್ತಿದೆ. ಆದರೆ ಈ ನಡುವೆ ಕೊರೊನಾ ಟೆಸ್ಟ್‌ನಲ್ಲಿ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ಇದ್ದಿದ್ದು ಒಬ್ಬರಿಗೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ ಎಂಬ ಭಯಾನಕ ಸುದ್ದಿ ಬಯಲಾಗಿದೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ಪೇದೆ ಕೊರೊನಾ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ಪೇದೆ ಕೊರೊನಾ […]
ಬೆಂಗಳೂರು: ಕೊರೊನಾ ವೈರಸ್ ದೇಶವನ್ನು ಬೆನ್ನು ಬಿಡದೆ ಕಾಡುತ್ತಿದೆ. ಸೋಂಕನ್ನು ನಿಯಂತ್ರಿಸಲು ದೊಡ್ಡ ಹೋರಾಟವೆ ನಡೆಯುತ್ತಿದೆ. ಆದರೆ ಈ ನಡುವೆ ಕೊರೊನಾ ಟೆಸ್ಟ್‌ನಲ್ಲಿ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ಇದ್ದಿದ್ದು ಒಬ್ಬರಿಗೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ ಎಂಬ ಭಯಾನಕ ಸುದ್ದಿ ಬಯಲಾಗಿದೆ.
ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ಪೇದೆ ಕೊರೊನಾ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ಪೇದೆ ಕೊರೊನಾ ಕೇಸ್ನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. ಮೇ 1ರಂದು ಬೇಗೂರು ಠಾಣೆ ಪೊಲೀಸ್ ಪೇದೆಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದೇ ದಿನ ಸುಮಾರು 700ಕ್ಕೂ ಹೆಚ್ಚು ಮಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ. 700 ಮಂದಿಯಲ್ಲಿ ಇಬ್ಬರು ರೋಗಿಗಳ ಹೆಸರು ಒಂದೇ ಆಗಿತ್ತು.
ಕೊರೊನಾ ಸೋಂಕಿತನ ಬಗ್ಗೆ ಸಿಕ್ಕಿಲ್ಲ ಸುಳಿವು: ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಕೊವಿಡ್ ಪರೀಕ್ಷೆಮಾಡಿದ್ದಾರೆ. ಆದ್ರೆ ಕೊರೊನಾ ಸೋಂಕು ದೃಢವಾಗಿದ್ದು ಒಬ್ಬರಿಗಾದರೆ. ಮತ್ತೊಬ್ಬರಿಗೆ ಸೋಂಕು ಹರಡಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಪೇದೆ ಕೊವಿಡ್ ಟೆಸ್ಟ್ ಕ್ರಮ ಸಂಖ್ಯೆ 9601, ಕೊರೊನಾ ಪಾಸಿಟಿವ್ ಬಂದ ಕ್ರಮ ಸಂಖ್ಯೆ 10396 ಆಗಿದೆ. ಪಾಸಿಟಿವ್ ಬಂದ ವ್ಯಕ್ತಿ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಬೇಗೂರು ಠಾಣೆಗೆ ಆರೋಗ್ಯ ಇಲಾಖೆ ಕಳಿಸಿದ ಕೊವಿಡ್-19 ವರದಿಯಲ್ಲಿ ಪ್ರಕರಣ ಬಯಲಾಗಿದೆ.
ಬೇಗೂರು ಠಾಣೆಯಲ್ಲಿ ಯಾರಿಗೂ ಕೊರೊನಾ ಇಲ್ಲ ಎಂಬುವುದು ಸಾಬೀತಾಗಿದೆ. ಕೊರೊನಾ ಸೋಂಕಿರುವ ವ್ಯಕ್ತಿಯ ಫೋನ್ ಕನೆಕ್ಟ್ ಆಗಿಲ್ಲ. ಅಸಲಿ ಕೊರೊನಾ ಸೋಂಕಿತ ವ್ಯಕ್ತಿ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಆತ ಯಾರೆಂದು ಪತ್ತೆಯಾಗಿಲ್ಲ. ಈಗ ಕೊರೊನಾ ಸೋಂಕಿತ ಎಲ್ಲಿದ್ದಾನೆಂದು ಸಹ ಗೊತ್ತಿಲ್ಲ.
ಸದ್ಯ ಆಸ್ಪತ್ರೆಗೆ ದಾಖಲಾಗಿದ್ದ ಪೇದೆಗೆ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಈ ವೇಳೆ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಪೇದೆಯ 12 ಜನ ಕುಟುಂಬಸ್ಥರಿಗೂ ನೆಗೆಟಿವ್ ಬಂದಿದೆ. ಪೇದೆ ಸಂಪರ್ಕದಲ್ಲಿದ್ದ ಪೊಲೀಸರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಇಂದು ಸಂಜೆ ಪೊಲೀಸರ ಕೊವಿಡ್ 19 ರಿಸಲ್ಟ್ ಬರಲಿದೆ ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.
Published On - 9:41 am, Wed, 6 May 20