Electricity Price: ಗ್ರಾಹಕರ ಜೇಬಿಗೆ ಕತ್ತರಿ; ಜುಲೈ 1ರಿಂದ ರಾಜ್ಯಾದ್ಯಂತ ವಿದ್ಯುತ್ ದರದಲ್ಲಿ ಭಾರಿ ಏರಿಕೆ

| Updated By: Digi Tech Desk

Updated on: Jun 28, 2022 | 2:42 PM

Electricity Price Hike: ಜುಲೈ 1ರಿಂದ ರಾಜ್ಯದಲ್ಲಿ ವಿದ್ಯುತ್ ದರಗಳು ಹೆಚ್ಚಾಗಲಿದ್ದು, ಪ್ರತಿದಿನ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19 ರೂಪಾಯಿಯಿಂದ ರಿಂದ 31 ರೂಪಾಯಿವರೆಗೆ ಪಾವತಿಸಬೇಕಾಗುತ್ತದೆ. ಈ ಬೆಲೆ ಏರಿಕೆ ತಾತ್ಕಲಿಕವಾಗಿದೆ.

Electricity Price: ಗ್ರಾಹಕರ ಜೇಬಿಗೆ ಕತ್ತರಿ; ಜುಲೈ 1ರಿಂದ ರಾಜ್ಯಾದ್ಯಂತ ವಿದ್ಯುತ್ ದರದಲ್ಲಿ ಭಾರಿ ಏರಿಕೆ
ಸಾಂಕೇತಿಕ ಚಿತ್ರ
Follow us on

Electricity Tariff Hike | ಬೆಂಗಳೂರು: ಬೆಲೆ ಏರಿಕೆಯ ನಡುವೆ ಕಲ್ಲಿದ್ದಲು ಖರೀದಿ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ವಿದ್ಯುತ್ ಸರಬರಾಜು ಸಂಸ್ಥೆಗಳ ಪ್ರಸ್ತಾಪಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಒಪ್ಪಿಗೆ ಸೂಚಿಸಿದೆ. ಈ ಪರಿಷ್ಕೃತ ದರವು ಜು.1ರಿಂದ ಅನ್ವಯವಾಗುವಂತೆ ಜಾರಿಯಾಗಲಿದ್ದು, ಪ್ರತಿದಿನ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19 ರೂಪಾಯಿಯಿಂದ 31 ರೂಪಾಯಿವರೆಗೆ ಪಾವತಿಸಬೇಕಾಗುತ್ತದೆ.

2021-22ನೇ ಸಾಲಿನ ಕೊನೆಯ ಎರಡು ತಿಂಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿದೆ. ಅದರಂತೆ ವಿದ್ಯುತ್ ಉತ್ಪಾದನೆಗೆ ಅವಶ್ಯಕವಾಗಿರುವ ಕಲ್ಲಿದ್ದಲು ಖರೀದಿಗೆ ವಿದ್ಯುತ್ ಸಂಸ್ಥೆಗಳು ಹೆಚ್ಚುವರಿ ವೆಚ್ಚವನ್ನು ಭರಿಸಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದಲೇ ಪಡೆಯಲು ಅವಕಾಶ ಕಲ್ಪಿಸುವಂತೆ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾಪ ಇಟ್ಟಿತ್ತು.

ಪ್ರಸ್ತಾಪದಲ್ಲಿ ಬೆಸ್ಕಾಂ 55.28 ರೂ., ಮೆಸ್ಕಾಂ 38.98 ರೂ., ಸೆಸ್ಕ್ 40.47 ರೂ., ಹೆಸ್ಕಾಂ 49.54 ರೂ., ಗೆಸ್ಕಾಂ 39.36 ರೂ. ವಿಧಿಸುವಂತೆ ಕೋರಿದ್ದವು. ಸದ್ಯ ಪ್ರಸ್ತಾವನೆಯನ್ನು ಒಪ್ಪಿರುವ ಆಯೋಗವು, ಎಸ್ಕಾಂಗಳು ಪ್ರಸ್ತಾಪಿಸಿದ ದರದಲ್ಲಿ ಕಡಿತಗೊಳಿಸಿದೆ. ಅದರಂತೆ ಪ್ರತಿತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19-31 ರೂಪಾಯಿ ಅವರೆಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಶ್ರೀಗಂಧದಲ್ಲಿ ಪುನೀತ್ ರಾಜಕುಮಾರ ಮೂರ್ತಿ ಕೆತ್ತಿಸಿರುವ ಅಭಿಮಾನಿ ಅದನ್ನು ಅಶ್ವಿನಿ ಪುನೀತ್ ಅವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ!

ವೆಚ್ಚ ಹೊಂದಾಣಿಕೆಗೆ ಡಿಸೆಂಬರ್​ವರೆಗೆ ಅವಕಾಶ

ಕಲ್ಲಿದ್ದಲು ಬೆಲೆ ಹೆಚ್ಚಾದ ಪರಿಣಾಮ ಇದರ ಖರೀದಿಗಾಗಿ ಭರಿಸಿದ ವೆಚ್ಚವನ್ನು ಹೊಂದಾಣಿಕೆ ಮಾಡಿಕೊಳ್ಳಲು ಆಯೋಗವು 2022ರ ಜು.1ರಿಂದ ಡಿಸೆಂಬರ್ 31ರ ವರೆಗೆ ಅವಕಾಶ ನೀಡಿದೆ. ಎಸ್ಕಾಂಗಳ ನಷ್ಟದ ಪ್ರಮಾಣವನ್ನು ಪರಿಗಣಿಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು, ನಂತರ ಬೆಲೆಗಳು ಯಥಾಸ್ಥಿತಿಗೆ ಮರಳಲಿದೆ ಎಂದು ಕೆಇಆರ್​ಸಿ ಅಧ್ಯಕ್ಷ ಪಿ.ರವಿಕುಮಾರ್ ಹೇಳಿದ್ದಾರೆ.

ಹೆಚ್ಚುವರಿ ವಸೂಲಿ ವಿಶೇಷ ಆರ್ಥಿಕ ವಲಯಕ್ಕೆ ಅನ್ವಯ

ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವು ವಿಶೇ ಆರ್ಥಿಕ ವಲಯಕ್ಕೆ ಅನ್ವಯವಾಗುತ್ತದೆ ಎಂದು ಕೆಇಆರ್​ಸಿ ಹೇಳಿದೆ. ಮೆಸ್ಕಾಂ ವಿಧಿಸುವ ಹೆಚ್ಚುವರಿ ಶುಲ್ಕವು ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗಲಿದ್ದು, ಹೆಸ್ಕಾಂ ಪಡೆಯುವ ಶುಲ್ಕಗಳು ಹುಕ್ಕೇರಿ ಆರ್​ಇಸಿಎಸ್​ ಮತ್ತು ಏಕಸ್ ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗಲಿದೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲೂ ಕರ್ಕಶವಾಗಿ ಸದ್ದು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್​ ವಿರುದ್ಧ ಪೊಲೀಸರ ಕಾರ್ಯಾಚರಣೆ

ಎಸ್ಕಾಂಗಳಲ್ಲಿ ಚಾಲ್ತಿಯಲ್ಲಿರುವ ಎಫ್​ಎಸಿ ದರ

  • ಬೆಸ್ಕಾಂ- 31 (ಪ್ರತಿ ಯೂನಿಟ್​ಗೆ ಪೈಸೆಯಲ್ಲಿ)
  • ಮೆಸ್ಕಾಂ- 21 (ಪ್ರತಿ ಯೂನಿಟ್​ಗೆ ಪೈಸೆಯಲ್ಲಿ)
  • ಸೆಸ್ಕ್- 19 (ಪ್ರತಿ ಯೂನಿಟ್​ಗೆ ಪೈಸೆಯಲ್ಲಿ)
  • ಹೆಸ್ಕಾಂ- 27 (ಪ್ರತಿ ಯೂನಿಟ್​ಗೆ ಪೈಸೆಯಲ್ಲಿ)
  • ಗೆಸ್ಕಾಂ- 26 (ಪ್ರತಿ ಯೂನಿಟ್​ಗೆ ಪೈಸೆಯಲ್ಲಿ)JESC

ಬೆಲೆ ಏರಿಕೆಗೆ ಕಾರಣಗಳು:

  • ಕಲ್ಲಿದ್ದಲಿನ ಅಭಾವ
  • ಕಲ್ಲಿದ್ದಲಿನ ಬೆಲೆ ಏರಿಕೆ
  • ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ
  • ಕಳೆದ 1ವರ್ಷದಿಂದ ಆರ್ಥಿಕ ನಷ್ಟದಲ್ಲಿರುವ ಎಸ್ಕಾಂಗಳು

ವಿದ್ಯುತ್ ಆಯೋಗವು ಏಪ್ರಿಲ್ 1ರಿಂದ ಪ್ರತಿ ಯೂನಿಟ್ ಬೆಲೆಯನ್ನು 35 ಪೈಸೆ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಇದರ ಜೊತೆಗೆ ವಿದ್ಯುತ್ ನಿಗದಿತ ಶುಲ್ಕವನ್ನು 10ರಿಂದ 30ರೂಪಾಯಿಯಷ್ಟು ಹೆಚ್ಚಳ ಮಾಡಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ 33 ಲಕ್ಷ ರೈತರಿಗೆ ಸಾಲ ಕೊಡಲು ನಿರ್ಧಾರ; ಸಚಿವ ಎಸ್​ಟಿ ಸೋಮಶೇಖರ್ ಮಾಹಿತಿ

Published On - 1:38 pm, Tue, 28 June 22