ಬೆಳಗಾವಿ: ಒಂದೇ ಆ್ಯಂಬುಲೆನ್ಸ್ನಲ್ಲಿ ಸುಮಾರು 12 ಜನ ಕೊರೊನಾ ಸೋಂಕಿತರನ್ನು ಸ್ಥಳಾಂತರ ಮಾಡಿರುವ ಘಟನೆ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ತುರ್ತು ಚಿಕಿತ್ಸಾ ವಿಭಾಗದಿಂದ ವಾರ್ಡ್ಗೆ ಶಿಫ್ಟ್ ಮಾಡುವ ಮೂಲಕ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಸಿಬ್ಬಂದಿಯ ಈ ಎಡವಟ್ಟಿಗೆ ಜನರು ತೀವ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದರೂ ಬಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಂಕಿತರಿದ್ದ ಆ್ಯಂಬುಲೆನ್ಸ್ನಲ್ಲೇ ಆರೋಗ್ಯವಂತ ಸಂಬಂಧಿಕರು ಪ್ರಯಾಣ ಮಾಡಿದ್ದಾರೆ. ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್ನಲ್ಲೆ ಕೂರಿಸಿ ಸ್ಥಳಾಂತರ ಮಾಡಿರುವ ಬಿಮ್ಸ್ ಸಿಬ್ಬಂದಿ ಪದೇಪದೇ ಹಳೆಯ ತಪ್ಪುಗಳನ್ನೇ ಮರುಕಳಿಸುತ್ತಿದೆ. ಸೋಂಕಿತ ಸಂಬಂಧಿ ಜೊತೆ ಆ್ಯಂಬುಲೆನ್ಸ್ನಲ್ಲಿ ಆಶಾ ಕಾರ್ಯಕರ್ತೆ ತೆರಳಿದ್ದಾರೆ. ಬಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಗಳ ಸಂಬಂಧಿಕರಿಗೂ ಸೋಂಕು ಹರಡುವ ಭೀತಿ ಇದೀಗ ಎದುರಾಗಿದೆ.
ಇದನ್ನೂ ಓದಿ
Fee Financing: ಶಾಲೆ- ಕಾಲೇಜು ಫೀ ಕಟ್ಟಲು ಸಿಗುತ್ತದೆ ಸಾಲ ಸೌಲಭ್ಯ; ಕೆಲವು ಜೀರೋ ಕಾಸ್ಟ್ ಇಎಂಐ
40 ಕೊರೊನಾ ಸೋಂಕಿತರ ಮೃತದೇಹಗಳು ಗಂಗಾ ನದಿಯಲ್ಲಿ ತೇಲುತ್ತಿರುವುದು ಕಾಣಿಸಿವೆ
(BIMS Hospital staff have displaced the corona Infected in a single ambulance at Belgaum)