ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ; ಪಟ್ಟಿ ಇಲ್ಲಿದೆ

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿದ ಬೆನ್ನಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳು ಮತ್ತು ಸಂಚಾಲಕರನ್ನು ನೇಮಿಸಲಾಗಿದೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಲು ಹಲವು ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ; ಪಟ್ಟಿ ಇಲ್ಲಿದೆ
Image Credit source: m.indiamart.com
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Jan 27, 2024 | 5:28 PM

ಬೆಂಗಳೂರು, ಜ.27: ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ರಾಜ್ಯಸಭಾ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ಬಿಜೆಪಿ ಶನಿವಾರ ನೇಮಕ ಮಾಡಿದೆ. ಇದರ ಬೆನ್ನಲ್ಲೇ, ರಾಜ್ಯ ಬಿಜೆಪಿ (BJP Karnataka) ಘಟಕವು ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಲವು ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಜನವರಿ 25 ರಂದು ಬಿಜೆಪಿಗೆ ಮರಳಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪ್ರಹ್ಲಾದ್ ಜೋಶಿಗೆ ರಾಜಸ್ಥಾನದ ಜವಾಬ್ದಾರಿ; ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಢದ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ಸಭೆಯಲ್ಲಿ ಲೋಕಸಭೆಯ ಸಿದ್ಧತೆಗಳ ಬಗ್ಗೆ ಚರ್ಚೆ ಹಾಗೂ ಪರಿಶೀಲನೆ ನಡೆಸಲಾಯಿತು. ಬಳಿಕ ರಾಜ್ಯ ಬಿಜೆಪಿಯು ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ನಾಯಕರನ್ನು ಉಸ್ತುವಾರಿ ಮತ್ತು ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಮೈಸೂರು, ಕೊಡಗು ಕ್ಷೇತ್ರ: ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ

ಚಾಮರಾಜನಗರ: ಎನ್.ವಿ.ಫಣೀಶ್

ಮಂಡ್ಯ: ಸುನೀಲ್ ಸುಬ್ರಹ್ಮಣಿ

ಹಾಸನ: ಎಂ.ಕೆ.ಪ್ರಾಣೇಶ್​

ದಕ್ಷಿಣ ಕನ್ನಡ: ಶ್ರೀನಿವಾಸ್ ಪೂಜಾರಿ

ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಆರಗ ಜ್ಞಾನೇಂದ್ರ

ಶಿವಮೊಗ್ಗ: ರಘುಪತಿ ಭಟ್

ಉತ್ತರ ಕನ್ನಡ: ಹರತಾಳು ಹಾಲಪ್ಪ

ಧಾರವಾಡ: ಈರಣ್ಣ ಕಡಾಡಿ

ಹಾವೇರಿ: ಅರವಿಂದ್ ಬೆಲ್ಲದ್

ಬೆಳಗಾವಿ: ವೀರಣ್ಣ ಚರಂತಿಮಠ

ಚಿಕ್ಕೋಡಿ: ಅಭಯ್ ಪಾಟೀಲ್

ಬಾಗಲಕೋಟೆ: ಲಿಂಗರಾಜ್ ಪಾಟೀಲ್

ವಿಜಯಪುರ: ರಾಜಶೇಖರ್ ಶೀಲವಂತ್

ಬೀದರ್: ಅಮರನಾಥ್ ಪಾಟೀಲ್

ಕಲಬುರಗಿ: ರಾಜುಗೌಡ

ರಾಯಚೂರು ಲೋಕಸಭಾ ಕ್ಷೇತ್ರ: ದೊಡ್ಡನಗೌಡ ಹೆಚ್​.ಪಾಟೀಲ್

ಕೊಪ್ಪಳ ಲೋಕಸಭಾ ಕ್ಷೇತ್ರ: ರಘುನಾಥ್​ ರಾವ್ ಮಲ್ಕಾಪುರೆ

ಬಳ್ಳಾರಿ: ಎನ್​.ರವಿಕುಮಾರ್

ದಾವಣಗೆರೆ: ಭೈರತಿ ಬಸವರಾಜ್​

ಚಿತ್ರದುರ್ಗ: ಚನ್ನಬಸಪ್ಪ

ತುಮಕೂರು: ಕೆ.ಗೋಪಾಲಯ್ಯ

ಚಿಕ್ಕಬಳ್ಳಾಪುರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಕೋಲಾರ: ಸುರೇಶ್ ಗೌಡ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ನಿರ್ಮಲ್ ಕುಮಾರ್ ಸುರಾನಾ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಎಂ.ಕೃಷ್ಣಪ್ಪ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಗುರುರಾಜ್ ಗಂಟಿಹೊಳೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಎಸ್.ಆರ್.ವಿಶ್ವನಾಥ್

ಹೊಸದಾಗಿ ನೇಮಕಗೊಂಡಿರುವ ಪ್ರಭಾರಿಗಳಲ್ಲಿ ಒಬ್ಬ ರಾಜ್ಯಸಭಾ ಸದಸ್ಯ, 12 ಶಾಸಕರು, ನಾಲ್ಕು ಎಂಎಲ್‌ಸಿಗಳು, ಇಬ್ಬರು ಮಾಜಿ ಎಂಎಲ್‌ಸಿಗಳು ಮತ್ತು ಆರು ಮಾಜಿ ಶಾಸಕರು ಸೇರಿದ್ದಾರೆ. 1 ಶಾಸಕ, ಒಂದು ಎಂಎಲ್‌ಸಿ, ಮೂರು ಮಾಜಿ ಶಾಸಕರು ಮತ್ತು ಮೂರು ಮಾಜಿ ಎಂಎಲ್‌ಸಿಗಳನ್ನು ಸಂಚಾಲಕರನ್ನಾಗಿ ಹೆಸರಿಸಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ